Advertisement

ಫಿನ್‌ ಅಲೆನ್‌ ಆರ್‌ಸಿಬಿ  ಇನ್ನಿಂಗ್ಸ್‌ ಆರಂಭಿಸಲಿ!

11:35 PM Apr 01, 2021 | Team Udayavani |

ಬೆಂಗಳೂರು: ಬಾಂಗ್ಲಾದೇಶ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ 18 ಎಸೆತಗಳಿಂದ ಅರ್ಧ ಶತಕ ಬಾರಿಸಿದ ಫಿನ್‌ ಅಲೆನ್‌ ಸಾಧನೆಗೆ ಆರ್‌ಸಿಬಿ ಅಭಿಮಾನಿಗಳು ಬಹಳ ಖುಷಿಪಟ್ಟಿದ್ದಾರೆ. ಕಾರಣ, ನ್ಯೂಜಿಲ್ಯಾಂಡಿನ ಈ ಯುವ ಆರಂಭಕಾರನನ್ನು ಕಳೆದ ಐಪಿಎಲ್‌ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿತ್ತು. ಆಸ್ಟ್ರೇಲಿಯದ ಜೋಶ್‌ ಫಿಲಿಪ್‌ ಬದಲು ಅಲೆನ್‌ ಸೇರ್ಪಡೆಯಾಗಿದ್ದಾರೆ.

Advertisement

21 ವರ್ಷದ ಫಿನ್‌ ಅಲೆನ್‌ ಅವರ ಈ ಸಾಧನೆಯಿಂದ ಆರ್‌ಸಿಬಿಗೆ ಓರ್ವ ಭರವಸೆಯ ವಿದೇಶಿ ಆರಂಭಕಾರ ಲಭಿಸಿದಂತಾಯಿತು ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಪಡಿಕ್ಕಲ್‌ ಅಥವಾ ಕೊಹ್ಲಿ ಜತೆ ಅಲೆನ್‌ ಆರ್‌ಸಿಬಿ ಇನ್ನಿಂಗ್ಸ್‌ ಆರಂಭಿಸಲಿ ಎಂದು ಅನೇಕರು ಆಗ್ರಹಿಸಿದ್ದಾರೆ.

“ಕೊಹ್ಲಿ, ಎಬಿಡಿ, ಮ್ಯಾಕ್ಸ್‌ವೆಲ್‌, ಕ್ರಿಸ್ಟಿಯನ್‌, ಪಡಿಕ್ಕಲ್‌… ಈಗ ಫಿನ್‌ ಅಲೆನ್‌. ಇವರೆಲ್ಲರೂ ಅಮೋಘ ಫಾರ್ಮ್ನಲ್ಲಿದ್ದಾರೆ. ಈ ಸಾಲಿಗೆ ಸ್ಯಾಮ್ಸ್‌, ವಾಷಿಂಗ್ಟನ್‌, ಅಜರುದ್ದೀನ್‌ ಅವರನ್ನೂ ಸೇರಿಸಬಹುದು’ ಎಂದು ಅಭಿಮಾನಿಯೊಬ್ಬರಯು ಆರ್‌ಸಿಬಿಯ ಬಲಿಷ್ಠ ಬ್ಯಾಟಿಂಗ್‌ ಸರದಿಯನ್ನು ಬಣ್ಣಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next