Advertisement

RCB ತನ್ನಿಂದಾಗಿ ಕಪ್‌ ಕಳೆದುಕೊಂಡಿತು: ವಾಟ್ಸನ್‌ ಪಶ್ಚಾತ್ತಾಪ

12:26 AM Apr 18, 2024 | Team Udayavani |

ಹೊಸದಿಲ್ಲಿ: ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ 2016ರಲ್ಲೇ ಚಾಂಪಿಯನ್‌ ಆಗಿ ಮೂಡಿಬರಬೇಕಿತ್ತು, ಆದರೆ ತನ್ನಿಂದಾಗಿ ಸೋಲಬೇಕಾಯಿತು ಎಂಬುದಾಗಿ ಆಸ್ಟ್ರೇಲಿಯ ತಂಡದ ಮಾಜಿ ಆಲ್‌ರೌಂಡರ್‌ ಶೇನ್‌ ವಾಟ್ಸನ್‌ ಬಹಳ ವರ್ಷದ ಬಳಿಕ ವಿಷಾದಿಸಿದ್ದಾರೆ.

Advertisement

ಅಂದು “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಆರ್‌ಸಿಬಿ ಮತ್ತು ಹೈದರಾ ಬಾದ್‌ ಫೈನಲ್‌ನಲ್ಲಿ ಎದು ರಾಗಿದ್ದವು. ಟಾಸ್‌ ಗೆದ್ದ ಡೇವಿಡ್‌ ವಾರ್ನರ್‌ ಬ್ಯಾಟಿಂಗ್‌ ಆಯ್ದುಕೊಂಡಿದ್ದರು. 19 ಓವರ್‌ ಅಂತ್ಯಕ್ಕೆ ಎಸ್‌ಆರ್‌ಎಚ್‌ 184 ರನ್‌ ಮಾಡಿತ್ತು. ಆದರೆ ವಾಟ್ಸನ್‌ ಕೊನೆಯ ಓವರ್‌ನಲ್ಲಿ 24 ರನ್‌ ಬಿಟ್ಟುಕೊಟ್ಟು ದುಬಾರಿಯಾದರು. ಸ್ಕೋರ್‌ 7ಕ್ಕೆ 208ರ ತನಕ ಏರಿತು.

ಆರ್‌ಸಿಬಿ 10.3 ಓವರ್‌ಗಳಲ್ಲಿ 114 ರನ್‌ ಮಾಡಿ ಉತ್ತಮ ಆರಂಭವನ್ನೇನೋ ಪಡೆಯಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಅನುಭವಿಸಿತು. ಆದರೂ 15.3 ಓವರ್‌ ಗಳಲ್ಲಿ 160 ರನ್‌ ಮಾಡಿದ ಆರ್‌ಸಿಬಿ ಮುಂದೆ ಗೆಲುವಿನ ಅವಕಾಶ ವೊಂದು ತೆರೆದಿತ್ತು. ಆದರೆ ವಾಟ್ಸನ್‌ ಬ್ಯಾಟಿಂಗ್‌ನಲ್ಲೂ ಕೈಕೊಟ್ಟರು (11). ಕೊನೆಗೆ 7ಕ್ಕೆ 200 ರನ್‌ ಮಾಡಿದ ಆರ್‌ಸಿಬಿ 8 ರನ್ನುಗಳಿಂದ ಪಂದ್ಯವನ್ನು ಕಳೆದುಕೊಂಡಿತು.

“ಅಂದು ನಾನು 4 ಓವರ್‌ಗಳಲ್ಲಿ 61 ರನ್‌ ನೀಡಿ ದುಬಾರಿಯಾದೆ. ಕೊನೆಯ ಓವರ್‌ನಲ್ಲಿ 24 ರನ್‌ ಕೊಟ್ಟೆ. ಬ್ಯಾಟಿಂಗ್‌ನಲ್ಲೂ ಯಶಸ್ಸು ಕಾಣಲಿಲ್ಲ. ನನ್ನ ಕಳಪೆ ಆಟದಿಂದ ಆರ್‌ಸಿಬಿಗೆ ಚಾಂಪಿಯನ್‌ ಆಗುವ ಅವಕಾಶ ತಪ್ಪಿತು. ಕ್ಷಮೆ ಇರಲಿ…’ ಎಂಬುದಾಗಿ ಶೇನ್‌ ವಾಟ್ಸನ್‌ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next