Advertisement

RCB: ಕೊನೆಯ 3 ದೇಖಾವೆಗಳು…

11:27 PM May 13, 2023 | Team Udayavani |

ಜೈಪುರ: ಉಳಿದಿರುವುದು ಕೊನೆಯ ಮೂರು ಪಂದ್ಯಗಳು, ಹೊಂದಿ ರುವ ಅಂಕ ಕೇವಲ 10, ರನ್‌ರೇಟ್‌ ಮೈನಸ್‌, ಪ್ರದರ್ಶನ ಅಸ್ಥಿರ… ಇಂಥದೊಂದು ತೀವ್ರ ಸಂಕಟದಲ್ಲಿರುವ ಆರ್‌ಸಿಬಿ ರವಿವಾರ ಸಂಜೆ ಬಲಿಷ್ಠವೆನಿಸಿದ, ಆದರೆ ತನ್ನಷ್ಟೇ ಅನಿಶ್ಚಿತ ತಂಡವಾದ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಗೆದ್ದರೆ ಅದೇನೋ ಒಂಥರ “ಹೋಪ್ಸ್‌”. ಸೋತರೆ ಪ್ಲೇ ಆಫ್ ಬಾಗಿಲು ಬಂದ್‌ ಎಂಬಂಥ ಸ್ಥಿತಿ.

Advertisement

ಇನ್ನೊಂದೆಡೆ ರಾಜಸ್ಥಾನ್‌ ರಾಯಲ್ಸ್‌ಗೆಇದು ತವರು ಪಂದ್ಯ. 12ರಲ್ಲಿ 6 ಪಂದ್ಯಗಳನ್ನು ಜಯಿಸಿದೆ. ಶನಿವಾರ ಲಕ್ನೋ ಜಯಿಸಿದ ಬಳಿಕ ರಾಜಸ್ಥಾನ್‌ 5ನೇ ಸ್ಥಾನಕ್ಕೆ ಜಾರಿದೆ. ಗೆದ್ದರಷ್ಟೇ ಪ್ಲೇ ಆಫ್ಗೆ ಹತ್ತಿರವಾಗಲಿದೆ. ಸೋತರೆ ಸಂಕಟ ತಪ್ಪಿದ್ದಲ್ಲ.

ಬೆಂಗಳೂರಿನಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಆರ್‌ಸಿಬಿ 7 ರನ್ನುಗಳ ರೋಚಕ ಗೆಲುವು ಸಾಧಿಸಿತ್ತು. ಆತಿಥೇಯರ 9ಕ್ಕೆ 189 ರನ್ನಿಗೆ ಉತ್ತರವಾಗಿ ರಾಜಸ್ಥಾನ್‌ 6 ವಿಕೆಟಿಗೆ 182 ರನ್‌ ಗಳಿಸಿತ್ತು. ಇದಕ್ಕೆ ತವರಿನಂಗಳ ದಲ್ಲಿ ಸೇಡು ತೀರಿಸಿಕೊಳ್ಳುವುದು ಕೂಡ ರಾಜಸ್ಥಾನ್‌ ಗುರಿ ಆಗಿದೆ.

ರಾಜಸ್ಥಾನ್‌ ಹ್ಯಾಟ್ರಿಕ್‌ ಸೋಲಿನ ಬಳಿಕ ಕೋಲ್ಕತಾವನ್ನು ಅವರದೇ ಅಂಗಳದಲ್ಲಿ 9 ವಿಕೆಟ್‌ಗಳಿಂದ ಮಣಿಸಿ ಗೆಲುವಿನ ಟ್ರ್ಯಾಕ್‌ ಏರಿದೆ. ಜೈಸ್ವಾಲ್‌-ಸ್ಯಾಮ್ಸನ್‌ ಸೇರಿ ಕೊಂಡು ಕೋಲ್ಕತಾ ಬೌಲರ್‌ಗಳನ್ನು ಚೆಂಡಾಡಿದ್ದರು. ರಾಜಸ್ಥಾನ್‌ ಇದೇ ಜೋಶ್‌ ಪುನರಾವರ್ತಿಸಿದರೆ ಆರ್‌ಸಿಬಿಗೆ ಸಂಕಟ ತಪ್ಪಿದ್ದಲ್ಲ.

Advertisement

Udayavani is now on Telegram. Click here to join our channel and stay updated with the latest news.

Next