ಬಹುಶಃ ಐಪಿಎಲ್ ಇತಿಹಾಸದಲ್ಲೇ ಆರ್‌ಸಿಬಿಯಷ್ಟು ನತದೃಷ್ಟ ತಂಡ ಬೇರೊಂದಿರಲಿಕ್ಕಿಲ್ಲ. ತಾನೇ ಯುನಿ ವರ್ಸಲ್ ಬಾಸ್ ಎಂದು ಹೇಳಿಕೊಂಡ ಕ್ರಿಸ್ ಗೇಲ್, 360 ಡಿಗ್ರಿಯಷ್ಟೇ ಅಲ್ಲ… ಇನ್ನೂ ಕೆಲವು ಡಿಗ್ರಿ ಇದ್ದರೂ ಬ್ಯಾಟ್ ತಿರುಗಿಸಬಲ್ಲ ಎಬಿ ಡಿ ವಿಲಿಯರ್, ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ, ಡೇಂಜರಸ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರಂತಹ ಅದೆಷ್ಟೋ ದೈತ್ಯ ಕ್ರಿಕೆಟಿಗರನ್ನೂ ಹೊಂದಿಯೂ ಆರ್‌ಸಿಬಿ ಪುರುಷರ ತಂಡ ಚಾಂಪಿಯನ್ ಆಗದಿರುವುದು ಐಪಿಎಲ್ ವಿಪರ್ಯಾಸಗಳಲ್ಲೊಂದು.
ಆದರೂ ಕನ್ನಡಿಗರ ಈ ತಂಡಕ್ಕೆ ಈಗಲೂ ಗರಿಷ್ಠ ಸಂಖ್ಯೆಯ ಅಭಿಮಾನಿ ಗಳಿದ್ದಾರೆ.
Advertisement
ಗೆಲುವಿನ ನಿರೀಕ್ಷೆಗೇನೂ ಕೊರತೆ ಎದುರಾಗಿಲ್ಲ. ಇಂಥ ಸ್ಥಿತಿಯಲ್ಲೇ ವನಿತಾ ಪ್ರೀಮಿಯರ್ ಲೀಗ್ ಆಗಮಿಸಿದೆ. ಇದು ಕೂಡ ಪುರು ಷರ ತಂಡದಷ್ಟೇ ಬಲಿಷ್ಠ ಹಾಗೂ ವೈವಿಧ್ಯಮ ಯವಾಗಿದೆ. ಅದೃಷ್ಟದ ವಿಷಯದಲ್ಲಿ ಹೇಗೆ ಎಂಬುದಷ್ಟೇ ಪ್ರಶ್ನೆ!ಕೂಟದ ಹರಾಜಿನಲ್ಲೇ ಅತ್ಯಧಿಕ 3.40 ಕೋಟಿ ರೂ.ಗೆ ಮಾರಾಟಗೊಂಡ ಸ್ಮತಿ ಮಂಧನಾ, ಎಲ್ಲಿಸ್ ಪೆರ್ರಿ, ಹೀತರ್ ನೈಟ್, ಸೋಫಿ ಡಿವೈನ್, ಮರಿಜಾನ್ ಕಾಪ್, ಮೆಗಾನ್ ಶಟ್, ರಿಚಾ ಘೋಷ್… ಸಮಕಾಲೀನ ಶ್ರೇಷ್ಠರೆಲ್ಲ ಒಂದೇ ಫ್ರೆàಮ್‌ನಲ್ಲಿ ಸೇರಿಕೊಂಡಿದ್ದಾರೆ.
ಇನ್ನೊಂದೆಡೆ ಡೆಲ್ಲಿ ಕೂಡ ಅಷ್ಟೇ ಬಲಿಷ್ಠವಾಗಿದೆ. 5 ಟಿ20 ವಿಶ್ವಕಪ್ ವಿಜೇತ ಆಸೀಸ್ ತಂಡದ ಸ್ಟಾರ್ ಆಟ ಗಾರ್ತಿ ಮೆಗ್ ಲ್ಯಾನಿಂಗ್ ಡೆಲ್ಲಿ ತಂಡದ ಸಾರಥಿಯಾಗಿದ್ದಾರೆ. ಇವರೊಂದಿಗೆ ಜೆಸ್ ಜೊನಾಸೆನ್, ಮರಿಜಾನ್ ಕಾಪ್, ಅಲೈಸ್ ಕ್ಯಾಪ್ಸಿ ಡೆಲ್ಲಿಯ ನಾಲ್ವರು ಪ್ರಮುಖ ವಿದೇಶಿ ಆಟಗಾರ್ತಿಯರು.
ಡೆಲ್ಲಿ ಭಾರತೀಯ ಪ್ರತಿಭೆಗಳನ್ನು ಹೊಂದಿರುವ ತಂಡ. ಶಫಾಲಿ ವರ್ಮ, ಜೆಮಿಮಾ ರೋಡ್ರಿಗಸ್, ಶಿಖಾ ಪಾಂಡೆ, ಪೂನಂ ಯಾದವ್, ಅರುಂಧತಿ ರೆಡ್ಡಿ, ತನಿಯಾ ಭಾಟಿಯಾ, ರಾಧಾ ಯಾದವ್, ಅಂಡರ್-19 ವಿಶ್ವಕಪ್‌ನಲ್ಲಿ ಮಿಂಚಿದ ತಿತಾಸ್ ಸಾಧು, ಜಮ್ಮು ಮತ್ತು ಕಾಶ್ಮೀರದ ಬಿಗ್ ಹಿಟ್ಟರ್ ಜಾಸಿಯಾ ಅಖ್ತರ್ ಅವರೆಲ್ಲ ತವರಿನ ಪ್ರಮುಖ ಆಟಗಾರ್ತಿಯರು. ಬಲಿಷ್ಠ ತಂಡಗಳೆರಡರ ಈ ಮುಖಾಮುಖಿ ಕೂಟದ ರೋಚಕ ಪಂದ್ಯಗಳ ಲ್ಲೊಂದಾಗುವ ಎಲ್ಲ ಸಾಧ್ಯತೆ ಇದೆ.