Advertisement

RCB ;ಬೇಕಾಗಿದ್ದಾರೆ ಬೌಲರ್‌ಗಳು: ಸಿರಾಜ್‌ಗೆ ಸೂಕ್ತ ಬೆಂಬಲದ ಅಗತ್ಯ

11:47 PM Dec 18, 2023 | Team Udayavani |

ಬೆಂಗಳೂರು: ಮೊಹ ಮ್ಮದ್‌ ಸಿರಾಜ್‌ಗೆ ಸೂಕ್ತ ಬೆಂಬಲ ನೀಡಬಲ್ಲ ಬೌಲರ್‌ಗಳ ಅಗತ್ಯ ತಂಡಕ್ಕಿದೆ ಎಂಬುದಾಗಿ ಆರ್‌ಸಿಬಿ ಡೈರೆಕ್ಟರ್‌ ಆಫ್ ಕ್ರಿಕೆಟ್‌ ಮೋ ಬೊಬಾಟ್‌ ಹೇಳಿದ್ದಾರೆ.

Advertisement

ಆರ್‌ಸಿಬಿ 17 ಆಟಗಾರರನ್ನು ಉಳಿಸಿಕೊಂಡಿದೆ. ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ, ನಾಯಕ ಫಾ ಡು ಪ್ಲೆಸಿಸ್‌, ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ವೇಗಿ ಮೊಹಮ್ಮದ್‌ ಸಿರಾಜ್‌ ಇವರಲ್ಲಿ ಪ್ರಮುಖರು. ಆಸ್ಟ್ರೇಲಿಯದ ಆಲ್‌ರೌಂಡರ್‌ ಕ್ಯಾಮರಾನ್‌ ಗ್ರೀನ್‌ ಅವರನ್ನು 17.5 ಕೋಟಿ ರೂ.ಗೆ ಮುಂಬೈಯಿಂದ ಟ್ರೇಡ್‌ ಮಾಡಿಕೊಂಡಿದೆ. 11 ಆಟಗಾರರನ್ನು ಬಿಡುಗಡೆ ಮಾಡಿದೆ. ಹರ್ಷಲ್‌ ಪಟೇಲ್‌, ವನಿಂದು ಹಸರಂಗ, ಜೋಶ್‌ ಹೇಝಲ್‌ವುಡ್‌ ಈ ಯಾದಿಯಲ್ಲಿದ್ದಾರೆ. ಇದನ್ನು ಕಂಡಾಗ ಆರ್‌ಸಿಬಿ ಬೌಲಿಂಗ್‌ ದೌರ್ಬಲ್ಯ ಎದ್ದು ಕಾಣುತ್ತದೆ.

“ಸ್ಟಾರ್‌ ಆಟಗಾರರನ್ನು ಉಳಿಸಿ ಕೊಂಡ ಕಾರಣ ನಮ್ಮದು ಅತ್ಯಂತ ಬಲಿಷ್ಠವಾದ ಅಗ್ರ ಕ್ರಮಾಂಕವಾಗಿದೆ. ಗ್ರೀನ್‌ ಆಗಮನದಿಂದ ಮಧ್ಯಮ ಕ್ರಮಾಂಕಕ್ಕೆ ಬಲ ಬಂದಿದೆ. ಬೌಲಿಂಗ್‌ ಬಗ್ಗೆ ಹೇಳುವುದಾದರೆ, ಸಿರಾಜ್‌ ನಮ್ಮ ಪ್ರಮುಖ ಬೌಲರ್‌. ಇವರಿಗೆ ಸೂಕ್ತ ಬೆಂಬಲ ನೀಡಬಲ್ಲ ಬೌಲರ್‌ಗಳ ಅಗತ್ಯ ನಮಗಿದೆ. ಒಟ್ಟಾರೆ ನಮ್ಮದು ಸುದೀರ್ಘಾವಧಿಯ ಯೋಜನೆ ಆಗಬೇಕಿದೆ’ ಎಂಬುದಾಗಿ ಬೊಬಾಟ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next