Advertisement

Lashkar-e-Taiba; ಹೆಸರಲ್ಲಿ ಹಾಡು ಹಾಡಿ ಆರ್‌ಬಿಐ ಕಚೇರಿಗೆ ಬೆದರಿಕೆ!

11:14 PM Nov 17, 2024 | Team Udayavani |

ಮುಂಬಯಿ: ದಕ್ಷಿಣ ಮುಂಬಯಿಯಲ್ಲಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಕಚೇರಿಗೆ ಪಾಕಿಸ್ಥಾನದ ಉಗ್ರ ಸಂಘಟನೆ ಲಷ್ಕರ್‌ ಎ-ತಯ್ಯಬಾ ಹೆಸರಿನಲ್ಲಿ ಬೆದರಿಕೆ ಕರೆ ಮಾಡಿ ಕಚೇರಿ ಸ್ಫೋಟಿಸುವುದಾಗಿ ಹೇಳಲಾಗಿದೆ.

Advertisement

ಆರ್‌ಬಿಐ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿದ ಅಪರಿಚಿತನೊಬ್ಬ, ನಾನು ಲಷ್ಕರ್‌ ಎ- ತಯ್ಯಬಾ ಸಿಇಒ. ಬ್ಯಾಂಕ್‌ ಬಂದ್‌ ಮಾಡಿ ಇಲ್ಲದಿದ್ದರೆ ಕಾರುಢಿಕ್ಕಿ ಹೊಡೆಸುವುದಾಗಿ ಹೇಳಿದ್ದಾನೆ. ಜತೆಗೆ ಕರೆ ಕಡಿತಗೊಳಿಸುವ ಮುನ್ನ ಹಾಡು ಹಾಡಿದ್ದಾನೆ. ಇದೊಂದು ಹುಸಿ ಕರೆ ಎಂದು ಪೊಲೀಸರು ಶಂಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next