Advertisement

ನೋಟು ಬದಲಿಗೆ ಅವಕಾಶ

10:23 AM Sep 08, 2018 | |

ಮುಂಬಯಿ: ಇನ್ನು ಮುಂದೆ ಸಾರ್ವಜನಿಕರು ತಮ್ಮಲ್ಲಿನ ಹರಿದ ಅಥವಾ ಮಾಸಿದ ನೋಟುಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಕಚೇರಿಗಳು ಹಾಗೂ ಆರ್‌ಬಿಐನಿಂದ ದೃಢೀಕರಣಗೊಂಡ ಶಾಖೆಗಳಲ್ಲಿ ಬದಲಾಯಿಸಿಕೊಳ್ಳಬಹುದಾಗಿದೆ. ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಲೆಂದೇ ಆರ್‌ಬಿಐನ 2009ರ ನಿಯಮಾವಳಿಗಳಿಗೆ ತಿದ್ದುಪಡಿ ತರಲಾಗಿದ್ದು, 2013ರಲ್ಲಿ ನೋಟುಗಳ ಅಮಾನ್ಯಗೊಂಡ ನಂತರದಲ್ಲಿ ಆರ್‌ಬಿಐನಿಂದ ಬಿಡುಗಡೆಯಾದ ಮಹಾತ್ಮಾ ಗಾಂಧಿ ಚಿತ್ರವುಳ್ಳ ಸರಣಿಯ 2000 ರೂ., 200 ರೂ. ಸೇರಿದಂತೆ 10, 20, 50, 100 ರೂ. ಮುಖಬೆಲೆಯ ಹೊಸ ನೋಟುಗಳಲ್ಲಿ ಯಾವುದೇ ದೋಷವಿದ್ದಲ್ಲಿ ಅಥವಾ ಹರಿದು ಹೋದಲ್ಲಿ ಅಥವಾ ಮಾಸಿ ಹೋಗಿದ್ದಲ್ಲಿ ಅಂಥ ನೋಟುಗಳನ್ನು ಬದಲಿಸಿಕೊಳ್ಳಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next