Advertisement
ನಡೆಯುತ್ತಿರುವ ಮುಷ್ಕರ ಸಂಚಾರ ಸ್ವಾತಂತ್ರಕ್ಕೆ ಬೇಕಾಗಿರುವ ನಾಯ್ಯವಾದ ಹೋರಾಟವಾಗಿದ್ದು, ಈ ವಿಷಯದಲ್ಲಿ ವಿಧಾನಸಭಾ ಒಳಗಡೆ ಮತ್ತು ಹೊರಗಡೆ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಅವರು ಮುಷ್ಕರ ನಿರತರಿಗೆ ಬೆಂಬಲ ಸೂಚಿಸಿ ತಿಳಿಸಿದರು.
ಗಡಿನಾಡು ಕಾಸರಗೋಡಿನ ಅಭಿವೃದ್ಧಿಯಲ್ಲಿ ರಾಜ್ಯ ಸರಕಾರ ತಳೆಯುತ್ತಿರುವ ನಿರಂತರ ನಿರ್ಲಕ್ಷ್ಯ ಖೇದಕರವೆಂದು ಅವರು ತಿಳಿಸಿದರು. ಈ ನಿಟ್ಟಿನಲ್ಲಿ ಜನಸಾಮಾನ್ಯರೊಂದಿಗೆ ಜಿಲ್ಲೆಯ ಶಾಸಕರು ಪಕ್ಷ ಬೇಧ ಮರೆತು ಬೇಡಿಕೆ ಈಡೇರಿಕೆಗೆ ಹೋರಾಡಲು ಬದ್ಧವೆಂದು ಅವರು ಭರವಸೆ ನೀಡಿದರು. ಹಿರಿಯ ಕಾಂಗ್ರೆಸ್ ಸದಸ್ಯ ಬಾಲಕೃಷ್ಣ ಮಾಸ್ತರ್ ವೋಕೂìಡ್ಲು, ಗ್ರಾ.ಪಂ. ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್, ಹಿರಿಯ ಪತ್ರಿಕಾ ವಿತರಕ ರಾಮಚಂದ್ರ ಚೆಟ್ಟಿಯಾರ್, ನಿವೃತ್ತ ಪ್ರಾಂಶುಪಾಲ ನಾರಾಯಣ ಭಟ್ ಮೈರ್ಕಳ, ಪುರಂದರ ನೆಟ್ಟಣಿಗೆ, ಬಾಲಕೃಷ್ಣ ಶೆಟ್ಟಿ, ಮುಷ್ಕರ ಸಮಿತಿ ಅಧ್ಯಕ್ಷ ಮಾಹಿನ್ ಕೇಳ್ಳೋಟ್, ಶ್ಯಾಮ್‌ಪ್ರಸಾದ್ ಮಾನ್ಯ, ಆನ್ವರ್ ಓಝೋನ್, ಆಶ್ರಫ್ ಮುನಿಯೂರು, ಬಿಎಸ್‌ಪಿಯ ವಿಜಯನ್, ರತ್ನಾಕರ ಓಡಂಗಲ್ಲು, ಪಿ.ಕೆ. ಗೋಪಾಲಕೃಷ್ಣ ಭಟ್, ಅವಿನಾಶ್ ರೈ, ಅಬ್ದುಲ್ ಲೇತಿಫ್, ಆಶ್ರಫ್ ಮೀಡಿಯಾ ಕ್ಲಾಸಿಕಲ್ಸ್ ಮೊದಲಾದವರು ಮಾತನಾಡಿದರು.
Related Articles
Advertisement