Advertisement

ರಾಯರಲ್ಲಿದೆ ನಾಸ್ತಿಕರನ್ನು ದೈವಸ್ಥರಾಗಿಸೋ ಶಕ್ತಿ

12:06 PM Aug 11, 2017 | |

ರಾಯಚೂರು: ರಾಯರ ದರ್ಶನದಿಂದ ನಾಸ್ತಿಕರು ಆಸ್ತಿಕ ರಾಗುವರು. ನಾಸ್ತಿಕರನ್ನು ದೈವಸ್ಥರನ್ನಾಗಿಸುವ ಶಕ್ತಿ ರಾಯರಲ್ಲಿದೆ. ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು. ಮಂತ್ರಾಯಲದಲ್ಲಿ ಗುರುವಾರ ನಡೆದ ಶ್ರೀ ರಾಘವೇಂದ್ರ ಸ್ವಾಮಿಗಳ ರಥೋತ್ಸವದಲ್ಲಿ ಅವರು ಅನುಗ್ರಹ ಸಂದೇಶ ನೀಡಿದರು. ಆಸ್ತಿಕರ ಭಕ್ತಿ, ಶ್ರದ್ಧಾ ಕೇಂದ್ರವಾದ ರಾಯರ ಮಠಕ್ಕೆ ನಾಸ್ತಿಕರು ಬಂದಲ್ಲಿ ಮನ ಪರಿವರ್ತಿತರಾಗುವರು. ದೇವರಿಲ್ಲ, ಧರ್ಮವಿಲ್ಲ ಎನ್ನುವವರು ರಾಯರ ದರ್ಶನ ಪಡೆಯಲಿ ಎಂದರು. ರಾಯರ ಮಹಿಮೆ ದಿನೇ ದಿನೇ ಹೆಚ್ಚುತ್ತಿದೆ. ಕಷ್ಟದಿಂದ, ಹತಾಶದೊಂದಿಗೆ ರಾಯರ ದರ್ಶನಕ್ಕೆ ಬರುವ ಭಕ್ತರಿಗೆ ನೆಮ್ಮದಿ ಸಿಕ್ಕಿದೆ. ಜನರ ಕಷ್ಟ ಅರಿಯಲೆಂದೇ ಪ್ರಹ್ಲಾದರಾಜರು ರಥದ ಮೂಲಕ ಬೀದಿಗಳಲ್ಲಿ ಸಂಚರಿಸುವರು ಎಂದು ಬಣ್ಣಿಸಿದರು. ಶ್ರೀ ರಾಘವೇಂದ್ರ ಸ್ವಾಮಿಗಳು ಒಂದು ಜಾತಿ-ಮತ-ಪಂಥಗಳಿಗೆ ಸೀಮಿತರಲ್ಲ. ರಾಯರ ಆರಾಧನೆಯನ್ನು ಇಡೀ ವಿಶ್ವದಲ್ಲಿ ಆಚರಿಸಲಾಗುತ್ತಿದ್ದು, ಇದೊಂದು
ದೊಡ್ಡ ಮಹೋತ್ಸವವಾಗಿದೆ. ರಾಯರ ಆಧ್ಯಾತ್ಮಿಕ, ದೈವಿಕ ಸಂಪತ್ತು ಎಂದಿಗೂ ಕರಗದ ಸಂಪತ್ತು. ಹಣ-ಅಂತಸ್ತು ಹಂಚಿಕೆ ಕಳೆಯಲಿದೆ. ಆದರೆ ರಾಯರ ಆಧಾತ್ಮಿಕ ಸಂಪತ್ತು ಎಷ್ಟೇ ಹಂಚಿದರೂ ಕರಗುವುದಲ್ಲ ಎಂದು ನುಡಿದರು. ತುಂಗಾಭದ್ರಾ ನದಿ ಬತ್ತಿರುವ ಹಿನ್ನೆಲೆಯಲ್ಲಿ ಭಕ್ತರಿಗೆ ತೊಂದರೆಯಾಗುತ್ತದೆ ಎಂಬ ಆತಂಕವಿತ್ತು. ಆದರೆ, ಅದ್ಯಾವುದನ್ನು ಲೆಕ್ಕಿಸದೆ ಭಕ್ತರು ಸಂಭ್ರಮದಿಂದ ಪಾಲ್ಗೊಂಡಿದ್ದಾರೆ. ರಾಯರ ಕರುಣೆ ಸಕಲ ಮೇಲಿರಲಿ. ಕಾಲಕಾಲಕ್ಕೆ ಮಳೆ-ಬೆಳೆ ಬರಲಿ ಎಂದು ಶುಭ ಹಾರೈಸಿದರು.

Advertisement

ರಂಗು ತಂದ ಕಲಾ ತಂಡಗಳುಮಂತ್ರಾಲಯದ
ಯರರಾ ಆರಾಧನಾ ಮಹೋತ್ಸವ ದಲ್ಲಿ ಒಂದೆಡೆ ಜನಸಾಗರ, ಮತ್ತೂಂದೆಡೆ ಕಲಾ ತಂಡಗಳ ಪ್ರದರ್ಶನ ಭಕ್ತರ ಗಮನ ಸೆಳೆದವು. ಇನ್ನೇನು ರಥೋತ್ಸವಕ್ಕೆ ಕ್ಷಣಗಣನೆ ಶುರುವಾಗುತ್ತಿದ್ದಂತೆ ಕಲಾ ತಂಡಗಳು ರಥ ಬೀದಿಯಲ್ಲಿ ಮಾವಣೆಗೊಂಡು ಸುಮಾರು ನಾಲ್ಕು ಗಂಟೆಗೂ ಹೆಚ್ಚು ಕಾಲ ಪ್ರದರ್ಶನ ನೀಡುವ ಮೂಲಕ ಜನಮನ ರಂಜಿಸಿದವು. ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿದಂತೆ ನಾನಾ ಕಡೆಗಳಿಂದಲೂ ಕಲಾ ತಂಡಗಳು ಆಗಮಿಸಿದ್ದವು. ಹೆಚ್ಚಾಗಿ ಮಹಿಳಾ ತಂಡಗಳೇ ಭಾಗವಹಿಸಿದ್ದು ವಿಶೇಷವಾಗಿತ್ತು. ಡೊಳ್ಳು ಕುಣಿತ, ಬಾಜಾ ಭಜಂತ್ರಿ, ಹಗಲು ವೇಷಗಾರರು, ಮಹಿಳಾ ವೀರಗಾಸೆ, ಕೋಲಾಟ, ಚಿನ್ನಾಟ, ಛದ್ಮವೇಷಧಾರಿಗಳ ತಂಡಗಳು ವಿವಿಧ
ಪ್ರಕಾರಗಳ ನೃತ್ಯ ಪ್ರದರ್ಶಿಸಿದವು. ಇನ್ನು ಕೆಲ ತಂಡದವರು ಕೋಲಾಟ ಆಡಿ ಗಮನ ಸೆಳೆದರು. ಹಾವೇರಿಯಿಂದ ಆಗಮಿಸಿದ ಕಲಾ ತಂಡ ಮಠದ ಪ್ರಾಂಗಣದಲ್ಲೇ ಸುಮಾರು ಒಂದೂವರೆ ಗಂಟೆ ಕಾಲ ನೃತ್ಯ ಪ್ರದರ್ಶನ ನೀಡಿ ಗಮನ ಸೆಳೆಯಿತು. ಮಠದ
ಆವರಣದಿಂದ ದ್ವಾರ ಬಾಗಿಲುವರೆಗೂ ಜನ ಸಾಲುಗಟ್ಟಿದ್ದರಿಂದ ಕಲಾ ತಂಡಗಳಿಗೆ ಬಿಡುವಿಲ್ಲದಂತಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next