Advertisement

Rayanna Brigade ಪುನಾರಂಭಕ್ಕೆ ಚಿಂತನೆ; ಕೆ.ಎಸ್‌. ಈಶ್ವರಪ್ಪ

11:14 PM May 26, 2024 | Team Udayavani |

ಬಾಗಲಕೋಟೆ: ರಾಜ್ಯಾದ್ಯಂತ ರಾಯಣ್ಣ ಬ್ರಿಗೇಡ್‌ ಪುನಾರಂಭಿಸುವಂತೆ ಹಲವರು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಲೋಕಸಭೆ ಚುನಾವಣೆ ಫ‌ಲಿತಾಂಶದ ಬಳಿಕ ಕಾರ್ಯಾರಂಭಿಸಲಾಗುವುದು ಎಂದು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ರಾಜ್ಯಾದ್ಯಂತ ಇರುವ ಅದೇ ಭಾವನೆಗಳ ನಾಯಕರನ್ನು ಕರೆದು ಸಭೆ ನಡೆಸಲಾಗುವುದು. ಆದರೆ, ರಾಯಣ್ಣ ಬ್ರಿಗೇಡ್‌ ಅಥವಾ ಹಿಂದ ಹೆಸರಿನಲ್ಲಿ ಸಂಘಟನೆ ಮಾಡಲು ಚಿಂತನೆ ನಡೆದಿದೆ. ಹಿಂದುಳಿದವರು, ದಲಿತರು ಎಲ್ಲ ಸಮಾಜ ಇದರಲ್ಲಿ ಸೇರಿಸಬೇಕು. ಈ ಕುರಿತು ನಾನೊಬ್ಬನೇ ತೀರ್ಮಾನ ತೆಗೆದುಕೊಳ್ಳಲ್ಲ. ರಾಜ್ಯದಲ್ಲಿ ಈ ರೀತಿ ಹಿಂದುಳಿದವರು, ಕುರುಬರಿಗೆ ಅನ್ಯಾಯ ಆಗಿದೆ ಎಂದು ಸಾಕಷ್ಟು ಜನ ಹೇಳುತ್ತಿದ್ದಾರೆ. ಏನೇನು ಪರಿವರ್ತನೆ ಆಗುತ್ತದೆ ನೋಡಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ನಮ್ಮ ಸಂಘಟನೆ, ಹೋರಾಟ ಕೇವಲ ರಾಜಕೀಯಕ್ಕಾಗಿ ಮಾತ್ರ ಅಲ್ಲ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ನ್ಯಾಯ ಸಿಗಬೇಕು. ಆ ನಿಟ್ಟಿನಲ್ಲಿ ಏನು ಮಾಡಬೇಕು ಅಂತ ಪ್ರಮುಖರ ಜತೆ ಮಾತನಾಡಿ ತೀರ್ಮಾನಕ್ಕೆ ಬರಲಾಗುವುದು ಎಂದು ಈಶ್ವರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next