ಶಿರಸಿ: ವಾಸ್ತವ್ಯ ಹಾಗೂ ಸಾಗುವಳಿಗಾಗಿ ಅರಣ್ಯ ಭೂಮಿ ಅವಲಂಭಿತವಾಗಿರುವ ಕುಟುಂಬಗಳ ಭೂಮಿ ಹಕ್ಕಿಗಾಗಿ ಕೇಂದ್ರ ಸರಕಾರವು ಅರಣ್ಯವಾಸಿಗಳ ಪರ ಹೊಸ ನೀತಿ ಜಾರಿಗೆ ತರಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಅರಣ್ಯವಾಸಿಗಳು ನಿರಾಶ್ರಿತರಾಗುವುದರಲ್ಲಿ ಸಂಶಯವಿಲ್ಲ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
”ಅರಣ್ಯವಾಸಿಗಳ ಉಳಿಸಿ”ಜಾಥದ ಅಂಗವಾಗಿ ಸಾಲ್ಕಣಿ, ಅರೇ ಹುಲೇಕಲ್, ವಾನಳ್ಳಿ, ಕಕ್ಕಳ್ಳಿ, ಶಿರಪಾಲ್, ಕೋಡ್ನಗದ್ದೆ, ಧೂಳಳ್ಳಿ, ಸೋಂದಾ, ಕರ್ಕೋಳ್ಳಿ, ತೆಂಕಿನಬೈಲ್ ಮುಂತಾದ ಅರಣ್ಯ ಪ್ರದೇಶಗಳಲ್ಲಿ ನಡೆದ ಸಭೆಗಳಲ್ಲಿ ಸರಕಾರಕ್ಕೆ ಆಗ್ರಹಿಸಿದರು.
ಸುಮಾರು ಒಂದುಕೋಟಿ ಮಿಕ್ಕಿ ದೇಶದಲ್ಲಿ ಅರಣ್ಯವಾಸಿಗಳು ಅರಣ್ಯ ಭೂಮಿಯ ಮೇಲೆ ಅವಲಂಭಿತರಾಗಿದ್ದು ಈಗಾಗಲೇ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿಗಳು ಕಾನೂನು ವ್ಯತಿರಿಕ್ತವಾಗಿ ತಿರಸ್ಕರಿಸಿಸುತ್ತಿದೆ. ಕೇಂದ್ರ ಸರಕಾರವು ಅರಣ್ಯವಾಸಿಗಳ ಪರವಾಗಿ ನಿಲುವನ್ನು ಪ್ರಕಟಿಸದಿದ್ದಲ್ಲಿ ಅರಣ್ಯವಾಸಿಗಳು ಅತಂತ್ರರಾಗುತ್ತಾರೆ ಎಂದು ಆತಂಕ ಹೊರ ಹಾಕಿದರು.
ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದು ೧೫ ವರ್ಷಗಳಾದರೂ ಮಂಜೂರಿ ಪ್ರಕ್ರಿಯೆಗೆ ಗ್ರಹಣ ಹಿಡಿದಂತಾಗಿದೆ ಎಂದೂ ರವೀಂದ್ರ ನಾಯ್ಕ ಅಸಮಧಾನ ಹೊರ ಹಾಕಿದರು.
ಸಭೆಯಲ್ಲಿ ಮಂಜುನಾಥ ಪೂಜಾರಿ, ಮಂಜು ನಾಯ್ಕ, ಶಂಕರ ಪೂಜಾರಿ, ಸುಬ್ಬಾ ಮುಂತಾದವರು ಉಪಸ್ಥಿತರಿದ್ದರು.