Advertisement

“ನಾಯಕತ್ವ ಒಲಿದದ್ದು ಮಹಾನ್‌ ಗೌರವ’ : ರವಿಕುಮಾರ್‌ ಸಮರ್ಥ್

11:53 PM Feb 02, 2021 | Team Udayavani |

ಬೆಂಗಳೂರು: ಕರ್ನಾಟಕ ಕ್ರಿಕೆಟ್‌ ತಂಡದ ನಾಯಕ್ವ ತನಗೆ ಒಲಿದು ಬಂದದ್ದೊಂದು ಮಹಾನ್‌ ಗೌರವ ಎಂಬುದಾಗಿ ರವಿಕುಮಾರ್‌ ಸಮರ್ಥ್ ಹೇಳಿದ್ದಾರೆ. ಮುಂಬರುವ “ವಿಜಯ್‌ ಹಜಾರೆ ಟ್ರೋಫಿ’ ಏಕದಿನ ಸರಣಿಗಾಗಿ ರಾಜ್ಯ ತಂಡದ ನೇತೃತ್ವ ಲಭಿಸಿದ ಬಳಿಕ ಅವರು ಈ ಸಂಭ್ರಮ ವ್ಯಕ್ತಪಡಿಸಿದ್ದಾರೆ.

Advertisement

“ಇದೊಂದು ಮಹಾನ್‌ ಗೌರವ. ನನಗೆ ಕರ್ನಾಟಕವನ್ನು ಪ್ರತಿನಿಧಿಸುವ ಅವಕಾಶ ಲಭಿಸಿದ್ದೇ ಅತ್ಯಂತ ದೊಡ್ಡ ಸಂಗತಿಯಾಗಿತ್ತು. ಈಗ ನಾಯಕತ್ವ ಲಭಿಸಿರುವುದು ಇದಕ್ಕಿಂತ ಮಿಗಿಲಾದ ಸಂಗತಿ. ಒಂದು ಅತ್ಯುತ್ತಮ ಪಂದ್ಯಾವಳಿಯನ್ನು ಎದುರು ನೋಡುತ್ತಿದ್ದೇನೆ’ ಎಂದು ಮೊದಲ ಸಲ ಕರ್ನಾಟಕ ತಂಡವನ್ನು ಮುನ್ನಡೆಸುವ ಅವಕಾಶ ಪಡೆದ ಸಮರ್ಥ್ ಹೇಳಿದರು.

ಫೆ. 18ರಿಂದ ಆರಂಭವಾಗಲಿರುವ ವಿಜಯ್‌ ಹಜಾರೆ ಟ್ರೋಫಿ ಸರಣಿಗಾಗಿ ಹಾಲಿ ಚಾಂಪಿಯನ್‌ ಕರ್ನಾಟಕ ಸ್ಟಾರ್‌ ಆಟಗಾರರ ನೇಕರ ಸೇವೆಯಿಂದ ವಂಚಿತವಾಗಲಿದೆ. ಕಳೆದ ಸಲದ ಚಾಂಪಿಯನ್‌ ತಂಡದ ನಾಯಕ ಮನೀಷ್‌ ಪಾಂಡೆ, ಕೆ.ಎಲ್‌. ರಾಹುಲ್‌, ಮಾಯಾಂಕ್‌ ಅಗರ್ವಾಲ್‌ ಅವರೆಲ್ಲ ಈ ಸರಣಿಗೆ ಲಭ್ಯರಾಗುವುದಿಲ್ಲ.

ಇದನ್ನೂ ಓದಿ: ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್ : ಫೈನಲ್‌ ಅರ್ಹತೆ ಪಡೆದ ನ್ಯೂಜಿಲ್ಯಾಂಡ್‌ 

ಕರ್ನಾಟಕ ತಂಡ
ರವಿಕುಮಾರ್‌ ಸಮರ್ಥ್ (ನಾಯಕ), ದೇವದತ್ತ ಪಡಿಕ್ಕಲ್‌, ರೋಹನ್‌ ಕದಂ, ಡಿ. ನಿಶ್ಚಲ್‌, ಕರುಣ್‌ ನಾಯರ್‌, ಕೆ.ಎಲ್‌. ಶ್ರೀಜಿತ್‌, ಬಿ.ಆರ್‌. ಸಮರ್ಥ್, ಎಸ್‌. ರಕ್ಷಿತ್‌, ಅನಿರುದ್ಧ ಜೋಶಿ, ಕೆ.ವಿ. ಸಿದ್ಧಾರ್ಥ್, ನಿಕಿನ್‌ ಜೋಸ್‌, ಶ್ರೇಯಸ್‌ ಗೋಪಾಲ್‌, ಕೆ. ಗೌತಮ್‌, ಜೆ. ಸುಚಿತ್‌, ಆದಿತ್ಯ ಸೋಮಣ್ಣ, ಶುಭಾಂಗ್‌ ಹೆಗ್ಡೆ, ಅಭಿಮನ್ಯು ಮಿಥುನ್‌, ಪ್ರಸಿದ್ಧ್ ಕೃಷ್ಣ, ರೋನಿತ್‌ ಮೋರೆ, ವಿ. ವಿಜಯ್‌ ಕುಮಾರ್‌, ಮನೋಜ್‌ ಭಾಂಡಗೆ, ಎಂ.ಬಿ. ದರ್ಶನ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next