Advertisement

ಟೆಸ್ಟ್‌ನಲ್ಲಿ ಅತೀ ವೇಗದ 250 ವಿಕೆಟ್‌; ಅಶ್ವಿ‌ನ್‌ ವಿಶ್ವ ದಾಖಲೆ

02:54 PM Feb 12, 2017 | |

ಹೈದರಾಬಾದ್‌: ಪ್ರವಾಸಿ ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಭಾರತದ ಆಫ್ ಸ್ಪಿನ್ನರ್‌ ಆರ್‌.ಅಶ್ವಿ‌ನ್‌ ಅವರು ಇನ್ನೊಂದು ವಿಶ್ವದಾಖಲೆಗೆ ಭಾಜನರಾಗಿದ್ದಾರೆ. ಟೆಸ್ಟ್‌ನಲ್ಲಿ ಅತೀ ವೇಗದ 250 ವಿಕೆಟ್‌ ಪಡೆದ ಬೌಲರ್‌ ಎಂಬ ದಾಖಲೆಗೆ ಅಶ್ವಿ‌ನ್‌ ಪಾತ್ರರಾಗಿದ್ದಾರೆ. 

Advertisement

ಪಂದ್ಯದಲ್ಲಿ  2ವಿಕೆಟ್‌ ಪಡೆಯುವ ಮೂಲಕ 250 ವಿಕೆಟ್‌ ಗಳಿಸಿದ  ಆಸೀಸ್‌ ಬೌಲರ್‌ ಡೆನ್ನಿಸ್‌ ಲಿಲ್ಲಿ ಹೆಸರಲ್ಲಿದ್ದ ದಾಖಲೆಯನ್ನು ತನ್ನದಾಗಿಸಿಕೊಂಡರು. ಡೆನ್ನಿಸ್‌ ಲಿಲ್ಲಿ 48ಟೆಸ್ಟ್‌‌ ಪಂದ್ಯಗಳಲ್ಲಿ 250 ವಿಕೆಟ್‌‌ ಪಡೆದರೆ ಅಶ್ವಿ‌ನ್‌ 45 ಪಂದ್ಯಗಳಲ್ಲೇ ಸಾಧನೆ ಮಾಡಿದರು. 

ಬಾಂಗ್ಲಾ ತಂಡ ಆಲೌಟ್‌ ಆಗುವ ಮುನ್ನ ಶತಕ ಸಿಡಿಸಿದ್ದ ಮುಶ್ಫಿಕರ್‌ ರಹೀಮ್‌ ಅವರ ವಿಕೆಟ್‌ ಕಬಳಿಸಿ 250 ನೇ ವಿಕೆಟ್‌ ಪಡೆದು ಸಂಭ್ರಮಿಸಿದರು. 

159ಕ್ಕೆ ಡಿಕ್ಲೇರ್‌;ಬಾಂಗ್ಲಾ ಗೆಲುವಿಗೆ 459 ರನ್‌ಗುರಿ  

ಮೂರನೇ ದಿನದಾಟದಲ್ಲಿ  ಮೊದಲ ಇನ್ನಿಂಗ್ಸ್‌ನಲ್ಲಿ  6 ವಿಕೆಟ್‌ಗೆ 322 ರನ್‌ಗಳಿಸಿದ್ದ ಬಾಂಗ್ಲಾ ನಾಲ್ಕನೇ ದಿನದಾಟದಲ್ಲಿ  388 ಕ್ಕೆ ಆಲೌಟಾಯಿತು. ಮುಶ್ಫಿಕರ್‌ ಶತಕವೊಂದೆ ಬಾಂಗ್ಲಾದ ಗರಿಷ್ಠ ಗಳಿಕೆ. ಅವರು 127 ರನ್‌ಗಳಿಸಿ ಔಟಾದರು. ಮೆಹದಿ ಹಸನ್‌ ಮಿರಾಜ್‌ 51 ರನ್‌ಗಳಿಸಿದರು. 

Advertisement

ಭಾರತದ ಪರ ಉಮೇಶ್‌ ಯಾದವ್‌ 3, ಜಡೇಜಾ, ಅಶ್ವಿ‌ನ್‌ ತಲಾ 2,ಭುವನೇಶ್ವರ್‌ ಕುಮಾರ್‌ ಇಶಾಂತ್‌ ಶರ್ಮಾ ತಲಾ 1 ವಿಕೆಟ್‌ ಪಡೆದರು. 

2 ನೇ ಇನ್ನಿಂಗ್ಸ್‌ನ್ನು ಭಾರತ 4 ವಿಕೆಟ್‌ ನಷ್ಟಕ್ಕೆ 159 ರನ್‌ಗಳಿಸಿದ್ದ ವೇಳೆ ಡಿಕ್ಲೇರ್‌ ಮಾಡಿಕೊಂಡು  ಬಾಂಗ್ಲಾ ಗೆಲುವಿಗೆ 459 ರನ್‌ ಮುಂದಿಟ್ಟಿದೆ. ಭಾರತದ ಪರ ವಿಜಯ್‌ 7,ರಾಹುಲ್‌ 10 ,ಪೂಜಾರಾ 54 ,ಕೊಹ್ಲಿ 38 ,ರೆಹಾನೆ 28 ರನ್‌ಗಳಿಸಿ ಔಟಾದರೆ ಜಡೇಜಾ 16 ರನ್‌ಗಳಿಸಿ ಅಜೇಯರಾಗಿ ಉಳಿದರು. 

ಇತ್ತೀಚಿಗಿನ ವರದಿ ಬಂದಾಗ ಬಾಂಗ್ಲಾ ವಿಕೆಟ್‌ ನಷ್ಟವಿಲ್ಲದೆ 9 ರನ್‌ಗಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next