ಹೊಸದಿಲ್ಲಿ/ಶ್ರೀನಗರ: ಕೇಂದ್ರ ಸರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರನ್ನು ನಿರ್ದಯೆಯಿಂದ ದಮನಿಸುವುದು ವಿವಿಧ ಸಂಘಟನೆಗಳಿಗೆ ಸರಿಯಾದ ಬಿಸಿ ಮುಟ್ಟಿದೆ. ವಿಶೇಷ ವಾಗಿ ನ.19ರಂದು ನಗ್ರೋತಾದಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ನಾಲ್ವರನ್ನು ಸೇನಾ ಪಡೆಗಳು ಹೊಸಕಿ ಹಾಕಿದ್ದರಿಂದಲಾಗಿ ಜೈಶ್ ಉಗ್ರ ಸಂಘಟನೆಯ ಎರಡನೇ ಅತ್ಯುನ್ನತ ನಾಯಕ ಮುಫ್ತು ರೌಫ್ ಅಸ್ಗರ್‌ಗೆ ಕೇಂದ್ರಾಡಳಿತ ಪ್ರದೇಶದಲ್ಲಿ ಉಗ್ರ ಕೃತ್ಯ ನಡೆಸುವುದು ಹೇಗೆ ಎಂದು ಚಿಂತಿತ ನಾಗಿದ್ದಾರೆ. “ಕಾಶ್ಮೀರ ದಲ್ಲಿ ಉಗ್ರರ ವಿರುದ್ಧ ಕಾರ್ಯಾ ಚರಣೆ ಬಿರುಸಾಗಿಯೇ ಇದೆ. ಹೀಗಾಗಿ, ಉಗ್ರರಿಗೆ ವಿಧ್ವಂಸಕ ಕೃತ್ಯ ಗಳನ್ನು ನಡೆಸುವ ನಿಟ್ಟಿನಲ್ಲಿ ಶಸ್ತ್ರಾಸ್ತ್ರ ಸೇರಿದಂತೆ ಬೇಕಾಗಿರುವ ವಸ್ತುಗಳನ್ನು ಪೂರೈಸಲು ಕಷ್ಟವಾಗುತ್ತಿದೆ’ ಎಂದು ಉಗ್ರರಿಗೆ ತಿಳಿಸಿದ್ದಾನಂತೆ.
ನ.19ರ ನಗ್ರೋತಾ ಎನ್‌ಕೌಂಟರ್ ಮುಕ್ತಾಯವಾಗು ತ್ತಿದ್ದಂ ತೆಯೇ ರೌಫ್ ಅಸ್ಗರ್ ಈ ಸಂದೇಶವನ್ನು ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರಿಗೆ ಕಳುಹಿಸಿದ್ದಾನೆ.
ಕೇಂದ್ರ ಗುಪ್ತಚರ ಸಂಸ್ಥೆಗಳು ನೀಡಿದ ಮಾಹಿತಿ ಪ್ರಕಾರ ಜೈಶ್ ಮಾತ್ರವಲ್ಲದೆ, ದೇಶದ ಹಲವೆಡೆ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಯೋಜನೆ ಹಾಕಿದ್ದ ಅಲ್-ಬದರ್ ಉಗ್ರ ಸಂಘ ಟನೆ ಬಾಂಗ್ಲಾದೇಶದಿಂದ ದೇಶದೊಳಕ್ಕೆ ನುಸುಳಲು ಯೋಜನೆ ರೂಪಿಸುತ್ತಿದೆ. ಇದರ ಜತೆಗೆ ಪಾಕಿಸ್ಥಾನದ ಗುಪ್ತ ಚರ ಸಂಸ್ಥೆ ಐಎಸ್‌ಐ ಮತ್ತು ಸೇನೆ ಎಲ್‌ಒಸಿ ಮೂಲಕ ಮತ್ತೂಮ್ಮೆ ಒಳನುಸುಳಿ ಪ್ರಮುಖ ಸ್ಥಾವರಗಳ ಮೇಲೆ ದಾಳಿ ನಡೆಸಲೂ ನಡೆಸುತ್ತಿವೆ ಎಂದು ಮುನ್ನೆಚ್ಚರಿಕೆ ನೀಡಿವೆ.
2008ರ ಮುಂಬಯಿ ದಾಳಿ ನಡೆದು ಗುರುವಾರಕ್ಕೆ ಸರಿಯಾಗಿ ಹನ್ನೆರಡು ವರ್ಷ ಪೂರ್ತಿಗೊಳ್ಳಲಿದೆ. ಆ ದಿನವೇ 26/11ಕ್ಕಿಂತ ಘಾತಕ ದಾಳಿ ಎಸಗಬೇಕು ಎಂಬ ದುಷ್ಟ ಹುನ್ನಾರದಿಂದ ಬರು ತ್ತಿದ್ದ ನಾಲ್ವರು ಉಗ್ರರನ್ನು ನಗ್ರೋತಾದಲ್ಲಿ ಕೊಲ್ಲಲಾ ಗಿತ್ತು. ಈ ಬೆಳವಣಿಗೆ ಜೈಶ್ ಸಂಘಟನೆಗೆ ಮರ್ಮಾಘಾತವನ್ನು ನೀಡಿದೆ. ಮತ್ತೂಂದು ವರದಿಗಳ ಪ್ರಕಾರ ಆಗಿರುವ ಲಷ್ಕರ್-ಎ- ತೊಯ್ಯಬಾ ಸಂಘಟನೆ ಗಡಿ ಮುಝಾಫ ರಾಬಾದ್‌ನಲ್ಲಿರುವ ಶಿಬಿರದಲ್ಲಿರುವ ಉಗ್ರರನ್ನು ನಿಯಂತ್ರಣ ರೇಖೆ ಯಲ್ಲಿರುವ ನೀಲಂ ಕಣಿವೆಯ ವ್ಯಾಪ್ತಿ ಯಲ್ಲಿರುವ ಚೆಲ ಬಾಂಡಿಗೆ ಕಳುಹಿಸಲು ಯತ್ನ ಮಾಡುತ್ತಿದೆ ಎಂದು ಗೊತ್ತಾಗಿದೆ. ಪಾಕಿಸ್ಥಾನದ ಖೈಬರ್-ಪುಖ್ತಂಖ್ವಾದ ಓ ಎಂಬಲ್ಲಿನ ಅರಣ್ಯ ಪ್ರದೇಶದಲ್ಲಿ ಹಿಜುØಲ್ ಮುಜಾಹಿದೀನ್ ಉಗ್ರ ಸಂಘಟನೆ 400 ಮಂದಿ ಕುಕೃತ್ಯಗಳನ್ನು ನಡೆಸಲು ತರಬೇತಿ ನೀಡುತ್ತಿದೆ.
ಪಿಡಿಪಿ ಮುಖಂಡ ಅಂದರ್: ಪಿಡಿಪಿಯ ಯುವ ವಿಭಾಗದ ಮುಖಂಡ ವಹೀದ್ ಉರ್ ರೆಹಮಾನ್ ಪಾರಾ ಅವರನ್ನು ಎನ್‌ಐಎ ಬಂಧಿಸಿದೆ. 2019ರ ಚುನಾವಣೆಯಲ್ಲಿ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದೀನ್ ಬೆಂಬಲ ಪಡೆದುಕೊಂಡ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಎನ್‌ಐಎ ಹೇಳಿಕೆ ಬಿಡುಗಡೆ ಮಾಡಿದೆ. ಪಾರಾ ಸಸ್ಪೆಂಡ್ ಆಗಿರುವ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್ ಮತ್ತು ಇರ್ಫಾನ್ ಶಾಫಿ ಮಿರ್ ಎಂಬಾತನ ಜತೆಗೂ ಲಿಂಕ್‌ಗಳು ಇದ್ದವು ಎಂದು ಆರೋಪಿಸಲಾಗಿದೆ.
ತೂತುಕುಡಿಯಲ್ಲಿ 100 ಕೆಜಿ ಹೆರಾಯಿನ್ ವಶಕ್ಕೆ
ತಮಿಳುನಾಡಿನ ತೂತ್ತುಕುಡಿಯಲ್ಲಿ ಶ್ರೀಲಂಕಾಕ್ಕೆ ಸೇರಿದ ದೋಣಿ ಯಿಂದ 100 ಕೆಜಿ ಹೆರಾಯಿನ್ ಅನ್ನು ಭಾರತೀಯ ಕರಾವಳಿ ರಕ್ಷಣ ಪಡೆ ವಶಪಡಿಸಿಕೊಂಡಿದೆ. ಆದರೆ ಆದರ ಮೂಲ ಪಾಕಿಸ್ಥಾನ ಎಂದು ಗೊತ್ತಾಗಿದೆ. ಪ್ರಕರಣಕ್ಕೆ ಸಂಬಂ ಧಿಸಿ ದಂತೆ ದ್ವೀಪರಾಷ್ಟ್ರದ ನಾಗರಿಕರು ಎಂದು ಹೇಳಲಾಗಿ ರುವ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗು ತ್ತಿದೆ. ನ.17ರಿಂದ ಒಂಭತ್ತು ದಿನ ಗಳ ಕಾಲ ನಡೆದ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಈ ಅಂಶ ಬೆಳಕಿಗೆ ಬಂದಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಅಧಿಕಾರಿ ಯೊಬ್ಬರು “ದ
ಹಿಂದುಸ್ತಾನ್ ಟೈಮ್ಸ್’ಗೆ ತಿಳಿಸಿದ್ದಾರೆ.
ಪಾಕಿಸ್ಥಾನದ ಕರಾಚಿಯಿಂದ ಮಾದಕ ವಸ್ತುಗಳನ್ನು ತಂದು ಸಮುದ್ರ ಮಧ್ಯದಲ್ಲಿಯೇ ಅದನ್ನು ಲಂಕೆಯ ದೋಣಿಗೆ ವರ್ಗಾಯಿಸಲಾಗಿತ್ತು. ಆಸ್ಟ್ರೇಲಿಯಾ ಮತ್ತು ಪಾಶ್ಚಿ ಮಾತ್ಯ ರಾಷ್ಟ್ರಗಳಿಗೆ ಅದನ್ನು ಕಳುಹಿಸಿಕೊಡುವ ನಿಟ್ಟಿ ನಲ್ಲಿ ಅದನ್ನು ದೋಣಿಯಲ್ಲಿ ತರಲಾಗುತ್ತಿತ್ತು ಎಂದು ಆರಂಭಿಕ ವಿಚಾರಣೆ ವೇಳೆ ತಿಳಿದು ಬಂದಿದೆ.
99 ಪ್ಯಾಕೆಟ್ ಹೆರಾಯ್ನ, 20 ಸಣ್ಣ ಪೊಟ್ಟಣಗಳಲ್ಲಿ ಸಿಂಥೆ ಟಿಕ್ ಡ್ರಗ್ಸ್, ಐದು ಎಂಎಂ ಪಿಸ್ತೂಲ್ ಮತ್ತು ತುರಾಯ ಸ್ಯಾಟಲೈಟ್ ಫೋನ್ ಅನ್ನು ಕರಾವಳಿ ತೀರ ರಕ್ಷಣ ವಶಪಡಿಸಿಕೊಂಡಿವೆ. ದೋಣಿಯನ್ನು ಲಂಕೆಯ ನೆಗೊಂಬೋ ನಗರದ ವ್ಯಕ್ತಿಗೆ ಸೇರಿದ್ದಾಗಿದೆ.
ಸಂಶಯ ಬಾರದೇ ಇರಲಿ ಎಂದು ಮಾದಕ ವಸ್ತುಗಳನ್ನು ಇಂಧನ ಟ್ಯಾಂಕ್‌ನಲ್ಲಿ ಇರಿಸಲಾಗಿತ್ತು. ವಿಚಾರಣೆ ವೇಳೆ ಮಾದಕ ವಸ್ತುಗಳನ್ನು ಆಸೀಸ್, ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಕಳುಹಿಸಲು ಕೊಂಡೊಯ್ಯ ಲಾಗು ತ್ತಿತ್ತು ಎಂದು ಹೇಳಿ ದ್ದರೂ, ತಮಿಳುನಾಡಿನಲ್ಲಿ ಅದನ್ನು ಸ್ವೀಕರಿಸಲು ಸಿದ್ಧತೆ ನಡೆಸುತ್ತಿದ್ದರೇ ಎಂಬ ಬಗ್ಗೆ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಮಂಡಳಿ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.