Advertisement
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಶನಿವಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ರಾಜ್ಯದ ಬೇರೆ ಕಡೆ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ ಬಗೆಹರಿದಿದೆ. ಇಲ್ಲಿ ಸರ್ವರ್ ಸಮಸ್ಯೆ ಉಂಟಾಗಲು ಇ-ಕೆವೈಸಿ ಆಗದಿರುವುದು ಕಾರಣವಾಗಿರಬಹುದು. ಈ ಕಾರಣಕ್ಕಾಗಿ ಸೋಮವಾರದಿಂದಲೇ ಬೆಳಗ್ಗೆ 7ರಿಂದ 9ರ ವರೆಗೆ ಅಂಗಡಿ ತೆರೆಯಲಾಗುವುದು ಎಂದರು.
ಪ್ರಸ್ತುತ ಮೀನುಗಾರಿಕಾ ದೋಣಿಗಳಿಗೆ 210-220 ಲೀ. ಸಬ್ಸಿಡಿ ಸೀಮೆಎಣ್ಣೆ ನೀಡಲಾಗುತ್ತಿದೆ. ಇದನ್ನು 400 ಲೀ.ಗೇರಿಸಲು ಮನವಿ ಬಂದಿದೆ. ಈ ಕುರಿತು ಮುಖ್ಯಮಂತ್ರಿ ಮತ್ತು ಮೀನುಗಾರಿಕಾ ಸಚಿವರ ಬಳಿ ಮಾತನಾಡಿ ಸೀಮೆಎಣ್ಣೆ ಪ್ರಮಾಣವನ್ನು ಹೆಚ್ಚಿಸಲು ಪ್ರಯತ್ನಿ ಸುತ್ತೇನೆ ಎಂದು ತಿಳಿಸಿದರು. ಕುಚ್ಚಲಕ್ಕಿ ವಿತರಣೆ
ಎರಡು ತಿಂಗಳಿಗೊಮ್ಮೆ ಕುಚ್ಚಲಕ್ಕಿ ವಿತರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಪ್ರತಿ ತಿಂಗಳೂ ವಿತರಿಸಲು ಪ್ರಯತ್ನಿಸುತ್ತೇವೆ ಎಂದು ಸಚಿವರು ತಿಳಿಸಿದರು. ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ 1,106 ಗುರಿಯಲ್ಲಿ ಶೇ. 100 ಗುರಿ ಸಾಧಿಸಲಾಗಿದೆ. ಈಗಾಗಲೇ ಮೂರು ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನೆ ನಡೆಸಲಾಗಿದ್ದು ಅಧಿವೇಶನದ ಬಳಿಕ ಇತರ ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನೆ ನಡೆಸಲಿದ್ದೇನೆ ಎಂದರು.
Related Articles
ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗಳಿಗೆ ಕಲಬೆರಕೆ ಮಾಡುವ ವ್ಯವಸ್ಥಿತ ಜಾಲ ಸಕ್ರಿಯವಾಗಿದ್ದು ಜಿಲ್ಲೆಯಲ್ಲಿ ಇಂತಹ ಘಟನೆಗಳು ಕಂಡುಬಂದಲ್ಲಿ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
Advertisement
ತೂಕ ಮಾಪನ ತಪಾಸಣೆಉಡುಪಿಯಲ್ಲಿ 25 ಆಹಾರ ನಿರೀಕ್ಷಕರ ಹುದ್ದೆ ಮಂಜೂರಾಗಿದ್ದು, 7 ಹುದ್ದೆ ಭರ್ತಿ ಮಾಡಲಾಗಿದೆ. 6 ಜನ ಆಹಾರ ಶಿರಸ್ತೇದಾರರನ್ನು ಕಂದಾಯ ಇಲಾಖೆಯ ವತಿಯಿಂದ ನೇಮಿಸಲಾಗಿದೆ. ಜಿಲ್ಲೆಯ ಎಲ್ಲ ಅಂಗಡಿ ಮುಂಗಟ್ಟುಗಳಲ್ಲಿರುವ ತೂಕ/ಮಾಪನ ಸಾಧನಗಳು ಹಾಗೂ ಆಟೋರಿಕ್ಷಾ ಮೀಟರ್‌ಗಳನ್ನು ತಪಾಸಣೆ ನಡೆಸಿ ಉಲ್ಲಂಘನೆ ನಡೆಸಿದಲ್ಲಿ ದಂಡ ವಿಧಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಶಾಸಕ ಲಾಲಾಜಿ ಮೆಂಡನ್, ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಜಿಲ್ಲಾಧಿಕಾರಿ ಜಿ. ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಆಹಾರ ಇಲಾಖೆಯ ಮಂಗಳೂರು ಜಂಟಿ ನಿರ್ದೇಶಕ ಮಂಜುನಾಥ ಮೊದ ಲಾದವರು ಉಪಸ್ಥಿತರಿದ್ದರು. ಅನರ್ಹ ಕಾರ್ಡ್: 96,000 ರೂ. ದಂಡ
ಅನರ್ಹ ಪಡಿತರ ಕಾರ್ಡ್‌ಗಳನ್ನು ಹೊಂದಿದವರು ಎರಡು ತಿಂಗಳೊಳಗೆ ಹಿಂದಿರುಗಿಸಬೇಕು. ಈಗಾಗಲೇ ರಾಜ್ಯದಲ್ಲಿ ಒಂದು ಲಕ್ಷ ಕಾರ್ಡ್‌ಗಳನ್ನು, ಜಿಲ್ಲೆಯಲ್ಲಿ 1,874 ಕಾರ್ಡುಗಳನ್ನು ಹಿಂದಿರುಗಿಸಿದ್ದಾರೆ. ಮಂಗಳೂರಿನಲ್ಲಿ ಒಂದು ಕುಟುಂಬ 96,000 ರೂ. ದಂಡ ಪಾವತಿಸಬೇಕಾಗಿ ಬಂತು. ಯಾರು ಸ್ವಯಂ ಆಗಿ ಹಿಂದಿರುಗಿಸುತ್ತಾರೋ ಅವರಿಗೆ ದಂಡ ಇರುವುದಿಲ್ಲ. ಇಲ್ಲವಾದರೆ ದಂಡವಿರುತ್ತದೆ ಎಂದು ಎಚ್ಚರಿಸಿದರು.