Advertisement

ಮೃತರಿಗೂ ರೇಷನ್‌! ಸಿಂಧನೂರಿನಲ್ಲಿ ಆಹಾರ ಇಲಾಖೆ ಅವಾಂತರ

02:09 AM Apr 21, 2021 | Team Udayavani |

ಸಿಂಧನೂರು: ಮೃತಪಟ್ಟವರ ಹೆಸರಿನಲ್ಲೂ ಆಹಾರ ಇಲಾಖೆ ಪಡಿತರ ಆಹಾರ ಧಾನ್ಯ ವಿತರಿಸಿದ ಘಟನೆ ಉತ್ತರ ಕರ್ನಾಟಕದ ಸಿಂಧನೂರು ತಾಲೂಕಿನಲ್ಲಿ ನಡೆದಿದೆ.

Advertisement

ತಾಲೂಕಿನಲ್ಲಿ 737 ಜನ ಮೃತ ಪಟ್ಟಿದ್ದರೂ ಅವರ ಹೆಸರಿನಲ್ಲಿ ಸತತವಾಗಿ ಆಹಾರ ಧಾನ್ಯ ಹಂಚಿಕೆ ಮಾಡಲಾಗಿದೆ. ಕಾರ್ಡ್‌ ಸಂಖ್ಯೆ, ಪಡಿತರ ಹೆಸರನ್ನು ನಮೂದಿಸಿ ಮೇಲಧಿಕಾರಿಗಳು ತಾಲೂಕು ಕಚೇರಿಗೆ ಪತ್ರ ರವಾನಿಸಿದ ಬೆನ್ನಲ್ಲೇ ಪಡಿತರ “ಲೆಕ್ಕ’ ಸರಿಪಡಿಸಲು ಸಿಬಂದಿ ಕಸರತ್ತು ನಡೆಸಿದ್ದಾರೆ. ಹತ್ತಾರು ಎಕರೆ ಭೂ ಮಾಲಕರಿಗೂ ಆಹಾರ ಧಾನ್ಯ ನೀಡಿರುವ ಪ್ರಕರಣಗಳು ಪತ್ತೆಯಾಗಿದೆ.

ಆಹಾರ ಇಲಾಖೆಯ ಮಾಹಿತಿ ಪ್ರಕಾರ, ಕಳೆದ 15 ದಿನ ಗಳಲ್ಲಿ 1,500ಕ್ಕೂ ಹೆಚ್ಚು ಇಂಥ ಅಕ್ರಮಗಳನ್ನು ಪತ್ತೆ ಹಚ್ಚಿ ರದ್ದುಗೊಳಿಸಲಾಗಿದೆ. ಈ ಎಲ್ಲ ಕಾರ್ಡ್‌ಗಳಿಗೆ ವಿತರಣೆಯಾಗುತ್ತಿದ್ದ ಪಡಿತರ ಯಾರ ಜೇಬು ಸೇರುತ್ತಿತ್ತು ಎಂಬುದು ಮಾತ್ರ ಗೌಪ್ಯವಾಗಿದೆ.

ಸಾಗಣೆ ಹಣ ದುರ್ಬಳಕೆ
ಆಹಾರ ಧಾನ್ಯ ಮಾತ್ರ ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ. ಆಹಾರ ಧಾನ್ಯ ಸಾಗಣೆಗೆ 8ರಿಂದ 10 ಲಾರಿಗಳನ್ನು ನಮೂದಿಸಲಾಗಿದೆ. ಆದರೆ ಐದಾರು ಲಾರಿ ಗಳು ಆಹಾರ ಧಾನ್ಯ ಸಾಗಣೆಗೆ ಬಳಕೆಯಾಗುತ್ತಿಲ್ಲ ಎಂಬ ದೂರುಗಳೂ ಕೇಳಿ ಬಂದಿವೆ.

ರಾಜ್ಯ ಕಚೇರಿಯಿಂದ 737 ಜನ ಮೃತರಿಗೆ ಆಹಾರ ವಿತರಣೆ ಆಗುತ್ತಿರುವುದಕ್ಕೆ ಸಂಬಂಧಿ ಸಿ ಪತ್ರ ಬಂದಿದೆ. ತನಿಖೆ ಕೈಗೊಂಡಿದ್ದೇವೆ. ಅವುಗಳನ್ನು ಗುರುತಿಸಿ ಡಿಲೀಟ್‌ ಮಾಡುತ್ತಿದ್ದು, ನ್ಯಾಯಬೆಲೆ ಅಂಗಡಿ ಸಂಚಾಲಕರು ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಾಗುವುದು.

Advertisement

-ಅಮರೇಶ, ಶಿರಸ್ತೇದಾರ್‌, ಆಹಾರ ಇಲಾಖೆ, ಸಿಂಧನೂರು

Advertisement

Udayavani is now on Telegram. Click here to join our channel and stay updated with the latest news.

Next