Advertisement

ಪಡಿತರ ವಿತರಕರಿಂದ ಪ್ರತಿಭಟನೆ

03:15 PM Feb 28, 2017 | Team Udayavani |

ಹುಬ್ಬಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಡಿತರ ವಿತರಕರ ಸಂಘದ ನೇತೃತ್ವದಲ್ಲಿ ನೂರಾರು ಪಡಿತರ ವಿತರಕರು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿಯ ಅನ್ನಭಾಗ್ಯ ಯೋಜನೆಯಡಿ ಪಡಿತರ ಧಾನ್ಯ ವಿತರಣೆಯಲ್ಲಿ ಆಗುತ್ತಿರುವ ತೊಂದರೆ ನಿವಾರಿಸುವುದು, ಪಡಿತರ ವಿತರಣೆಯನ್ನು ಆಗಸ್ಟ್‌ನಿಂದ ಎಲೆಕ್ಟ್ರಾನಿಕ್‌ ಕೂಪನ್‌ ಮೂಲಕ ಪ್ರತಿ ಚೀಟಿಗಳಿಗೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡದೆ ಕೂಪನ್‌ ವಿತರಣೆ ಆರಂಭಿಸಿದ್ದರಿಂದ ಗೊಂದಲ ಸೃಷ್ಟಿಯಾಗಿದೆ.

ಪಡಿತರ ವಿತರಣೆಯನ್ನು ಕೂಪನ್‌ ಮೂಲಕ ವಿತರಿಸಿ ಒಟ್ಟು ವಿತರಣೆಯಾದ ನಂತರ ಪಡಿತರ ಕೇಂದ್ರಗಳಲ್ಲಿ ಆಯಾ ತಿಂಗಳಲ್ಲೇ ಐವಿಆರ್‌ಎಸ್‌ ಮುಖಾಂತರ ಯಂತ್ರದ ಬಾರ್‌ಕೋಡಿಂಗ್‌ ಮೂಲಕ ಮಾರಾಟ ತೋರಿಸಿದರೆ 600 ಕೂಪನ್‌ ಗಳಿಗೆ 540 ಕೂಪನ್‌ಗಳ ಅಪ್‌ಲೋಡ್‌ ಆಗಿದೆ.

ಸುಮಾರು ವಿತರಣೆಯಾದ ಆಹಾರ ಪದಾರ್ಥಗಳು ಸರಾಸರಿ ಪ್ರತಿ ಅಂಗಡಿಗೆ 40 ರಿಂದ 50 ಚೀಟಿಗಳು ವ್ಯತ್ಯಾಸವಾಗಿದ್ದು ಕಂಡು ಬರುತ್ತದೆ. ಈ ವ್ಯತ್ಯಾಸ 2017ರ ಜನವರಿವರೆಗೆ ವ್ಯತ್ಯಾಸವಾಗಿಯೇ ಉಳಿದಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಹಲವಾರು ತೊಂದರೆಗಳ ನಿವಾರಣೆಗೆ ಈಗಾಗಲೇ ಮನವಿ ಸಲ್ಲಿಸಿದ್ದರೂ ಸಮಸ್ಯೆಗಳಿಗೆ ಪರಿಹಾರ ದೊರಕಿಲ್ಲ. ಫೆಬ್ರುವರಿ ಕೊನೆಯ ವಾರದವರೆಗೆ ಎತ್ತುವಳಿ ಹಾಗೂ ವಿತರಣೆ, ಆಧಾರ ಕಾಡ್‌ ಲಿಂಕ್‌ ಸೇರಿದಂತೆ ಯಾವುದೇ ಸಮಸ್ಯೆ ನಿವಾರಣೆಯಾಗಿಲ್ಲ. ಆಧಾರ ಕಾರ್ಡ್‌ ಸೀಡಿಂಗ್‌ ಹಾಗೂ ತಾಂತ್ರಿಕ ದೋಷದಿಂದ ಆಗಿರುವ ವ್ಯತ್ಯಾಸ ಸರಿಪಡಿಸುವ ಮೂಲಕ ಫ‌ಲಾನುಭವಿಗಳಿಗೆ ಆಗಿರುವ  ತೊಂದರೆ ಸರಿಪಡಿಸಬೇಕು.

Advertisement

ಫೆಬ್ರವರಿ ತಿಂಗಳ ಪಡಿತರವನ್ನು ಇದುವರೆಗೂ ಇಲಾಖೆಯಿಂದ ಪಡಿತರ ಅಂಗಡಿಗಳಿಗೆ ನೀಡಿಲ್ಲ. ಇನ್ನು ಪಡಿತರದಾರರಿಗೆ ನಾವು ಹೇಗೆ ವಿತರಿಸಲು ಸಾಧ್ಯ. ಇದರಿಂದ ಸಾರ್ವಜನಿಕರು ಪಡಿತರ ಅಂಗಡಿಗಳಿಗೆ ಬಂದು ನಮಗೆ ನಿಂದಿಸುತ್ತಿದ್ದಾರೆ. ಸಾರ್ವಜನಿಕರಿಗೆ ತಿಳಿಸಿ ಹೇಳುವುದರಲ್ಲೇ ಸಾಕಾಗುತ್ತಿದೆ. ಇತ್ತ ನಮ್ಮ ಅಳಲನ್ನು ಕೇಳಬೇಕಾದವರು ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಸಂಘದ ಅಧ್ಯಕ್ಷ ಕೆ.ಡಿ. ನಾಯಕ ಹೇಳುತ್ತಾರೆ.  

ಇದಕ್ಕೂ ಮೊದಲು ಸ್ಟೇಶನ್‌ ರಸ್ತೆಯಲ್ಲಿರುವ ಅಂಬೇಡ್ಕರ ಪುತ್ಥಳಿಗೆ ಪ್ರತಿಭಟನಾಕಾರರು ಮಾಲಾರ್ಪಣೆ ಮಾಡಿ, ಅಲ್ಲಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು. ಸಂಘದ ಅಧ್ಯಕ್ಷ ಕೆ.ಡಿ. ನಾಯಕ, ಎಂ.ಎಸ್‌. ಶಿರಗಣ್ಣವರ, ಸಿದ್ದು ಮೊಗಲಿಶೆಟ್ಟರ, ಡಿ.ಎಂ. ಪೂಜಾರಿ, ಪಿತಾಂಬ್ರಪ್ಪ ಬಿಳಾರ, ಶೇಖಪ್ಪ ಹೈಬತ್ತಿ, ಎಸ್‌.ಬಿ. ಹಿರೇಮಠ, ಆನಂದ ಪಿಳ್ಳೆ, ಶ್ರೀಮತಿ ಹಬೀಬ, ದೇಸಾಯಿ, ಪೂಜಾರ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next