Advertisement
ಅರ್ಹ ಫಲಾನುಭವಿಗಳಿಗೆ ಪಡಿತರ ಒದಗಿಸುವ ನಿಟ್ಟಿನಲ್ಲಿ ಕೆವೈಸಿ ಪ್ರಕ್ರಿಯೆ ನಡೆಯುತ್ತಿದ್ದು, ಆಹಾರ ಇಲಾಖೆ ದಿನಾಂಕ ವಿಸ್ತರಿಸುವ ಮೂಲಕ ಬಾಕಿ ಇರುವ ಪಡಿತರ ಚೀಟಿ ಫಲಾನುಭವಿಗಳಿಗೆ ಅವಕಾಶ ಒದಗಿಸಿದೆ.
Related Articles
Advertisement
ಇದನ್ನೂ ಓದಿ:ಆತಂಕಕಾರಿ ಆಫ್ಘಾನ್ : ಶಾಂಘೈ ಸಹಕಾರ ಒಕ್ಕೂಟ ಸಭೆಯಲ್ಲಿ ಪ್ರಧಾನಿ ಆತಂಕ
ಬಂಟ್ವಾಳ ತಾಲೂಕಿನಲ್ಲಿ 61,690 ಪಡಿತರ ಚೀಟಿ ಇದ್ದು 2,62,829 ಸದಸ್ಯರಿದ್ದಾರೆ. ಇದರಲ್ಲಿ 46,931 ಪಡಿತರ ಚೀಟಿಯ 2,35,076 ಸದಸ್ಯರ ಕೆವೈಸಿ ಪೂರ್ಣಗೊಂಡಿದೆ. 14,759 ಪಡಿತರ ಚೀಟಿಯ 27,753 ಸದಸ್ಯರ ಕೆವೈಸಿ ಬಾಕಿ ಇದೆ. ಪಡಿತರ ಸದಸ್ಯರ ಲೆಕ್ಕದಲ್ಲಿ ಈ ತನಕ ಶೇ. 89.44 ಪ್ರಗತಿ ಕಂಡಿದೆ.
ಮಂಗಳೂರು ತಾಲೂಕಿನಲ್ಲಿ 96,115 ಪಡಿತರ ಚೀಟಿ ಇದ್ದು, 3,88,183 ಸದಸ್ಯರಿದ್ದಾರೆ. ಇದರಲ್ಲಿ 70,630 ಪಡಿತರ ಚೀಟಿಯ 3,36,077 ಸದಸ್ಯರ ಕೆವೈಸಿ ಪೂರ್ಣಗೊಂಡಿದೆ. 25,485 ಪಡಿತರ ಚೀಟಿಯ 52,106 ಸದಸ್ಯರ ಕೆವೈಸಿ ಬಾಕಿ ಇದೆ. ಪಡಿತರ ಸದಸ್ಯರ ಲೆಕ್ಕದಲ್ಲಿ ಈತನಕ ಶೇ. 86.58 ಪ್ರಗತಿ ಕಂಡಿದೆ.
ಏನಿದು ಕೆವೈಸಿ?ಪಡಿತರ ಸಾಮಗ್ರಿಯನ್ನು ಅರ್ಹರಿಗೆ ನೀಡುವ ನಿಟ್ಟಿನಲ್ಲಿ ಕೆವೈಸಿ ಜಾರಿ ಗೊಳಿಸಲಾಗಿದೆ. ಪಡಿತರ ಚೀಟಿಯಿಂದ ಮೃತಪಟ್ಟವರ ಹೆಸರು ತೆಗೆಯದಿರುವುದು, ಫಲಾ ನುಭವಿ ಹೊರದೇಶದಲ್ಲಿದ್ದರೂ ಕುಟುಂಬದ ಇತರ ಸದಸ್ಯರು ಪಡಿತರ ಪಡೆಯು ತ್ತಿರುವುದು ಇತ್ಯಾದಿ ಹತ್ತಾರು ಸಮಸ್ಯೆಗಳು ಇರುವ ಕಾರಣ ಇದನ್ನು ನಿಯಂತ್ರಿಸುವ ಉದ್ದೇಶದಿಂದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಪ್ರಕಾರ ಕೆವೈಸಿ ಆರಂಭಿಸಿದೆ. ಹಲವು ಗಡುವು ನೀಡಲಾಗಿದ್ದರೂ ಪೂರ್ಣ ಪ್ರಮಾಣದಲ್ಲಿ ನೋಂದಣಿ ಆಗದಿರುವ ಕಾರಣ ಸೆ. 30ರ ವರೆಗೆ ಕೊನೆಯ ಕಾಲಾವಕಾಶ ನೀಡಲಾಗಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವ ಎಲ್ಲ ಗ್ರಾಹಕರು ಬೆರಳಚ್ಚು ನೀಡಬೇಕು. ಪಡಿತರ ಸಾಮಗ್ರಿ ರದ್ದು
ಕೆವೈಸಿ ಮಾಡದಿದ್ದರೆ ಪಡಿತರ ಚೀಟಿ ರದ್ದಾಗುವುದಿಲ್ಲ. ಆದರೆ ಆ ಕಾರ್ಡ್‌ನ ಸದಸ್ಯರಿಗೆ ದೊರೆಯುವ ಪಡಿತರ ಸಾಮಗ್ರಿ ಪೂರೈಕೆ ರದ್ದಾಗಲಿದೆ. ಉದಾಹರಣೆಗೆ ಒಂದು ಪಡಿತರ ಕಾರ್ಡ್ ನಲ್ಲಿ 5 ಸದಸ್ಯರಿದ್ದರೆ, ಐವರು ಕೆವೈಸಿ ಮಾಡಿದರೆ ಆ ಎಲ್ಲರಿಗೂ ಪಡಿತರ ಸಿಗುತ್ತದೆ. ಮೂರು ಮಂದಿ ಮಾತ್ರ ಕೆವೈಸಿ ಮಾಡಿದರೆ ಮೂರು ಮಂದಿಗೆ ಪಡಿತರ ಸಿಗುತ್ತದೆ. ಉಳಿದ ಇಬ್ಬರಿಗೆ ಪಡಿತರ ರದ್ದಾಗುತ್ತದೆ. ಆ ಇಬ್ಬರು ಮುಂದಿನ ದಿನಗಳಲ್ಲಿ ಕೆವೈಸಿ ಮಾಡಿದರೆ ಅವರಿಗೆ ಪಡಿತರ ಪಡೆಯಲು ಅವಕಾಶ ಇದೆ. ಕೆವೈಸಿ ಮಾಡದೆ ಇರುವ ಸದಸ್ಯ ಹೊರದೇಶದಲ್ಲಿ ಇರುವುದು ಅಥವಾ ಮೃತಪಪಟ್ಟಿರುವ ಸಾಧ್ಯತೆ ಇದೆ ಎಂದು ಪರಿಗಣಿಸಿ ಪಡಿತರ ಪೂರೈಕೆ ಸ್ಥಗಿತಗೊಳಿಸಲಾಗುತ್ತದೆ. ಬೆಡ್ ರೆಸ್ಟ್, ಕುಷ್ಠರೋಗ, ಅಂಗವಿಕಲತೆ, ಬಯೋಮೆಟ್ರಕ್‌ಗೆ ಬೆರಳು ಸ್ಪಂದಿಸದೆ ಇರುವ ಫಲಾನುಭವಿಗಳಿದ್ದರೆ ಅದಕ್ಕೆ ಸೂಕ್ತ ದಾಖಲೆ ತಂದೊಪ್ಪಿಸಿದಲ್ಲಿ ಅಂಥವರಿಗೆ ಕೆವೈಸಿಯಿಂದ ವಿನಾಯಿತಿ ನೀಡಲಾಗುತ್ತದೆ.