Advertisement
ಸಮುದಾಯ ಭವನದಲ್ಲಿ ಜರಗಿದ 2017-18ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ರೇಷನ್ ಕಾರ್ಡ್ ಗೊಂದಲದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪಡಿತರ ಚೀಟಿ ಪರಿಶೀಲನ ಕಾರ್ಯ ಪ್ರಗತಿಯಲ್ಲಿವೆ ಎಂದು ಗ್ರಾಮಕರಣಿಕ ಪ್ರಕಾಶ್ ತಿಳಿಸಿದರು. 94ಸಿ ಅಡಿಯಲ್ಲಿ ಮನೆ ಅಡಿಸ್ಥಳ ಮಂಜೂರಾತಿಗೆ ಅರ್ಜಿ ಸಲ್ಲಿಸಲು 3 ತಿಂಗಳ ಕಾಲಾವಕಾಶವಿದೆ ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದರು.ಗ್ರಾ. ಪಂ.ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಅಧ್ಯಕ್ಷತೆ ವಹಿಸಿದ್ದರು. ಮಾರ್ಗದರ್ಶಿ ಅಧಿಕಾರಿಯಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ ಜೋಷಿ ಭಾಗವಹಿಸಿದ್ದರು.
ವಿಟ್ಲ ಹೋಬಳಿಯ ಕೃಷಿಕರಿಗೆ ಕೃಷಿ ಇಲಾಖೆ ಬಾಡಿಗೆ ಆಧಾರಿತ ಕೃಷಿ ಯಂತ್ರಗಳನ್ನು ಒದಗಿಸುತ್ತಿದ್ದು, ಉತ್ತಮ ಯಂತ್ರಗಳಿಗೆ ಸಬ್ಸಿಡಿ ನೀಡುತ್ತಿಲ್ಲ. ಪರಿಣಾಮವಾಗಿ ಸಬ್ಸಿಡಿ ಪಡೆದ ವ್ಯಕ್ತಿಗೆ ಆ ಯಂತ್ರ ಪ್ರಯೋಜನವಿಲ್ಲದಂತಾಗುತ್ತದೆ ಎಂದು ಕೃಷಿಕರು ಆರೋಪಿಸಿದರು. ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಎಸ್.ಕೆ. ಸರಿಕಾರ ಮಾತನಾಡಿ, ಕೃಷಿ ಭಾಗ್ಯ ಯೋಜನೆಯಲ್ಲಿ ರೈತರ ಅಭಿವೃದ್ಧಿಗೆ ವಿವಿಧ ಯೋಜನೆಗಳಿವೆ. ಮೈರದಲ್ಲಿ ಕೃಷಿ ಬಾಡಿಗೆ ಆಧಾರಿತ ಯಂತ್ರಗಳ ಲಭ್ಯತೆ ಇದ್ದು, ಕೃಷಿಕರು ಬಳಸಿಕೊಳ್ಳಬಹುದಾಗಿದೆ. ಯಂತ್ರದ ಮೂಲಕ ಬತ್ತದ ಪೈರಿನ ನಾಟಿ ಕಾರ್ಯ ಮಾಡಿದರೆ 1,600 ರೂ. ಸಹಾಯಧನ ನೀಡಲಾಗುತ್ತಿದೆ ಎಂದರು.
Related Articles
ತೋಟಗಾರಿಕಾ ಇಲಾಖೆಯ ಸಹಾಯಕ ತೋಟಗಾರಿಕೆ ಅಧಿಕಾರಿ ಸೇಸಪ್ಪ ಎಂ. ಮಾತನಾಡಿ ಮಲ್ಲಿಗೆ ಕೃಷಿ ಮಾಡುವ ರೈತರಿದ್ದರೆ ಸೂಕ್ತ
Advertisement
ದಾಖಲೆಗಳೊಂದಿಗೆ ಅರ್ಜಿಸಲ್ಲಿಸಿದರೆ ಉಚಿತವಾಗಿ 25 ಸಸಿಗಳನ್ನು ನೀಡಲಾಗುತ್ತದೆ. ಬೇರೆ ಬೇರೆ ಸಸಿಗಳ ವಿತರಣೆಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಕೃಷಿಕರು ಪ್ರಯೋಜನ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ| ಜಯಪ್ರಕಾಶ್ ಕೆ.ಕೆ., ಪಶು ಸಂಗೋಪನ ಇಲಾಖೆಯ ಹಿರಿಯ ಪಶುವೈದ್ಯ ಪರಿವೀಕ್ಷಕ ಕಾಶಿಮಠ ಈಶ್ವರ ಭಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಲೋಲಾಕ್ಷಿ, ಶಿಕ್ಷಣ ಇಲಾಖೆಯ ಪಿ.ಕೃಷ್ಣ ಭಟ್, ಪಂಚಾಯತ್‌ರಾಜ್ ಂಜಿನಿಯರಿಂಗ್ ವಿಭಾಗದ ಅಜಿತ್, ಮೆಸ್ಕಾಂ ಇಲಾಖೆಯ ಆನಂದ ಅವರು ಮಾತನಾಡಿದರು.
ಜಿ.ಪಂ., ತಾ.ಪಂ. ಸದಸ್ಯರ ಗೈರು ಗ್ರಾಮ ಸಭೆಯಲ್ಲಿ ಜಿ.ಪಂ.ಸದಸ್ಯರಾಗಲೀ, ತಾ.ಪಂ.ಸದಸ್ಯರಾಗಲೀ ಭಾಗವಹಿಸಿರಲಿಲ್ಲ. ಜನಪ್ರತಿನಿಧಿಗಳು ಭಾಗವಹಿಸದೇ ಇರುವ ಬಗ್ಗೆ ಜಗತ್‌ಶಾಂತಪಾಲ ಚಂದಾಡಿ ಅವರು ಬೇಸರ ವ್ಯಕ್ತಪಡಿಸಿದರು. ಗ್ರಾ.ಪಂ.ಉಪಾಧ್ಯಕ್ಷೆ ಸೆಲ್ವಿನ್ ಡಿ’ಸೋಜಾ, ಸದಸ್ಯರಾದ ಮೋನಪ್ಪ, ಜಯಂತಿ, ಸರೋಜಿನಿ, ಮೂಕಾಂಬಿಕಾ ಭಟ್, ಸುಧಾಕರ ಮಡಿಯಾಲ, ಗಿರಿಜ, ಸರಸ್ವತಿ, ಕವಿತಾ, ರವೀಶ, ಜಗದೀಶ ಶೆಟ್ಟಿ ಮುಳಿಯ, ಅಬ್ದುಲ್ಲ ರಹಿಮಾನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶೋಕ ಎನ್.ಜಿ. ಉಪಸ್ಥಿತರಿದ್ದರು. ರಸ್ತೆ, ಚರಂಡಿ ದುರಸ್ತಿಗೆ ಆಗ್ರಹ
ಅಳಿಕೆ ಗ್ರಾಮಕ್ಕೆ ಸಂಸದರ ಅನುದಾನ ಘೋಷಿಸುವ ಭರವಸೆಯಲ್ಲಿ ಹಲವು ರಸ್ತೆಗಳ ಅಭಿವೃದ್ಧಿಯಾಗುವುದೆಂದು ನಿರೀಕ್ಷಿಸಲಾಗಿತ್ತು. ಈ ವರೆಗೆ ಗ್ರಾಮಕ್ಕೆ ಅವರ ಅನುದಾನ ಎಷ್ಟು ಬಿಡುಗಡೆಯಾಗಿದೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಪಡಿಬಾಗಿಲು – ಅಳಿಕೆ ರಸ್ತೆಯ ಮಧ್ಯೆ ಚರಂಡಿ ದುರಸ್ತಿಪಡಿಸಿ ಐದು ವರ್ಷ ಕಳೆದುಹೋಗಿವೆ. ರಸ್ತೆಯಲ್ಲೇ ನೀರು ಹರಿಯುತ್ತಿದೆ. ಲೋಕೋಪಯೋಗಿ ಇಲಾಖೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕೆಂದು ಗ್ರಾ.ಪಂ.ನಿರ್ಣಯ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.