Advertisement

ಬೇಕಾಬಿಟ್ಟಿ ದರ: 15 ಬಸ್‌ಗಳ ವಿರುದ್ಧ ಪ್ರಕರಣ

12:20 AM Apr 17, 2019 | Team Udayavani |

ಬೆಂಗಳೂರು: ಮತದಾನಕ್ಕೆ ತೆರಳುತ್ತಿರುವ ಪ್ರಯಾಣಿಕರಿಂದ ಬೇಕಾಬಿಟ್ಟಿ ಪ್ರಯಾಣ ದರ ವಸೂಲಿ ಮಾಡುತ್ತಿರುವ ಖಾಸಗಿ ಬಸ್ಸುಗಳ ವಿರುದ್ಧ ಮಂಗಳವಾರ ಕಾರ್ಯಾಚರಣೆ ನಡೆಸಿದ ಸಾರಿಗೆ ಅಧಿಕಾರಿಗಳು, ಏಕಕಾಲದಲ್ಲಿ ನಗರದ ಮೂರ್ನಾಲ್ಕು ಕಡೆ ನೂರಾರು ಬಸ್‍ಗಳನ್ನು ತಪಾಸಣೆಗೆ ಒಳಪಡಿಸಿದರು.

Advertisement

ತುಮಕೂರು ರಸ್ತೆಯ ಗೊರಗುಂಟೆಪಾಳ್ಯ, ಸಿಲ್ಕ್ ಬೋರ್ಡ್‌ ಜಂಕ್ಷನ್‌, ಕೆ.ಆರ್‌.ಪುರ, ದೇವನಹಳ್ಳಿ ಸೇರಿದಂತೆ ನಗರದ ನಿರ್ಗಮನ ಮಾರ್ಗಗಳಲ್ಲಿ ಬಸ್ಸುಗಳನ್ನು ತಡೆದು, ಖುದ್ದು ಪ್ರಯಾಣಿಕರಿಂದ ಪ್ರಯಾಣ ದರದ ಬಗ್ಗೆ ಮಾಹಿ ಪಡೆದರು.

ಸಾಮಾನ್ಯ ದಿನಗಳಿಗಿಂತ ಹೆಚ್ಚು ದರ ವಿಧಿಸಿದ್ದ 15ಕ್ಕೂ ಹೆಚ್ಚು ಬಸ್ಸುಗಳ ವಿರುದ್ಧ ಪ್ರಕರಣ ದಾಖಲಿಸಲಾಯಿತು. 18 ಮತ್ತು 23ರಂದು ರಾಜ್ಯದಲ್ಲಿ ಎರಡು ಹಂತದ ಚುನಾವಣೆ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತದಾನಕ್ಕೆತೆರಳುತ್ತಿದ್ದಾರೆ.

ಪರಿಸ್ಥಿತಿಯ ಲಾಭ ಪಡೆಯಲು ಕೆಲವರು ಒಂದೂವರೆಯಿಂದ ಎರಡುಪಟ್ಟು ದರ ವಿಧಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಾರಿಗೆ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ಹಿಂದೆ ಕೂಡ ಸಾರಿಗೆ ಆಯುಕ್ತರು ಸಭೆ ಕರೆದು ಎಚ್ಚರಿಕೆಯನ್ನೂ ನೀಡಿದ್ದರು ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next