Advertisement
1835 ರ ಸಮಯದಲ್ಲಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಭಾರತದ ಈಶಾನ್ಯದ ಗಡಿ ಪ್ರದೇಶದ ಅಸ್ಸಾಂ ನ ನಿತ್ಯಹರಿದ್ವರ್ಣ ಅರಣ್ಯ ಪ್ರದೇಶಗಳಲ್ಲಿ ವೈವಿಧ್ಯಮಯ ಚಹಾ ಪ್ರಭೇದಗಳಿತ್ತು ಎಂಬುದು ತಿಳಿದಿತ್ತು. ಇದರಿಂದ ಬ್ರಿಟಿಷರ ಚಹಾ ಉದ್ಯಮದ ಅತಿದೊಡ್ಡ ಸಾಮ್ರಾಜ್ಯವಾಗಿ ಭಾರತ ಬೆಳೆಯಿತು.
Related Articles
Advertisement
ಸೆಪ್ಟೆಂಬರ್ 2022ರ ಮಾಹಿತಿಯ ಪ್ರಕಾರ, ತುರ್ತು ಪರಿಸ್ಥಿತಿಯಲ್ಲಿ ಹಣದ ನೆರವು ಒದಗಿಸುವ ಉದ್ದೇಶದಿಂದ ಕೇಂದ್ರ ಸರಕಾರ ನಡೆಸುತ್ತಿರುವ ಪಿಎಂ ಕೇರ್ಸ್ ಫಂಡ್‌ನ ಟ್ರಸ್ಟ್‌ಗೆ ರತನ್ ಟಾಟಾ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರನ್ನು ಸೇರಿಸಿಕೊಳ್ಳಲಾಗಿದೆ. ಇದರಲ್ಲಿ ಪ್ರಮುಖವಾಗಿ ಟಾಟಾ ಸನ್ಸ್ ಸಂಸ್ಥಾಪಕ ಅಧ್ಯಕ್ಷ ರತನ್ ಟಾಟಾ ಪಿಎಂ ಕೇರ್ಸ್ ಫಂಡ್‌ನ ಟ್ರಸ್ಟೀ ಆಗಿ ನಾಮನಿರ್ದೇಶನ ಮಾಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಇದರ ಟ್ರಸ್ಟಿಗಳಾಗಿದ್ದಾರೆ. ಇದು ರತನ್ ಟಾಟಾರ ಹಿರಿಮೆಗೆ, ಸಮಾಜ ಸೇವೆಗೆ ಮತ್ತೊಂದು ಗರಿ.
ರತನ್ ಟಾಟಾ ಉದಾತ್ತ ಕುಟುಂಬದಿಂದ ಬಂದಿದ್ದರೂ ಅವರು ಎಂದಿಗೂ ಅಧಿಕಾರ ಅಥವಾ ಹಣದ ಹಿಂದೆ ಬಿದ್ದವರಲ್ಲ. ಟಾಟಾ ಹೆಸರಿನಲ್ಲಿ ಅನೇಕ ಕಂಪನಿಗಳನ್ನು ದೊಡ್ಡದಾಗಿ ಬೆಳೆಸಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದವರು ರತನ್ ಟಾಟಾ ಎಂಬುದರಲ್ಲಿ ಸಂದೇಹವಿಲ್ಲ. ಸದ್ದಿಲ್ಲದೆ ಸಮಾಜ ಸೇವೆ ಮಾಡುತ್ತಾ ಇಂದಿನ ಯುವ ಜನತೆಗೆ ದೊಡ್ಡ ಸ್ಫೂರ್ತಿಯಾಗಿದ್ದಾರೆ. ಅವರ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯಲ್ಲಿ ಟಾಟಾ ಮೋಟಾರ್ಸ್ ಫೋರ್ಡ್ ಮೋಟಾರ್ಸ್‌ನೊಂದಿಗೆ ಐತಿಹಾಸಿಕ ಒಪ್ಪಂದವನ್ನು ಪಡೆಯಲು ಸಾಧ್ಯವಾಯಿತು.
ರತನ್ ಟಾಟಾರ ಪ್ರೇಮ ಕತೆ:
ಉದ್ಯಮಿ ರತನ್ ಟಾಟಾ ಮದುವೆಯಾಗಿಲ್ಲ. ಆದರೆ ಒಮ್ಮೆ ಅವರೇ ಹೇಳಿರುವಂತೆ ಅವರಿಗೆ 4 ಬಾರಿ ಮದುವೆ ಪ್ರಸ್ತಾಪ ಬಂದಿತ್ತು. ಆದರೆ ಕಾರಣಾಂತರಗಳಿಂದ ಮದುವೆ ಆಗಲಿಲ್ಲ ಎಂದು ಹೇಳಿದ್ದರು. ಇವತ್ತಿಗೂ ಸಿಂಗಲ್ ಆಗಿರುವ ರತನ್ ಟಾಟಾ ಅವರು 25ನೇ ವಯಸ್ಸಿನಲ್ಲಿದ್ದಾಗ ಸುಂದರವಾದ ಹುಡುಗಿಯೊಬ್ಬಳನ್ನು ಪ್ರೀತಿಸಿದ್ದರು. ಆ ಹುಡುಗಿ ಕೂಡ ರತನ್ ಟಾಟಾರನ್ನು ಮನಸಾರೆ ಇಷ್ಟಪಟ್ಟಿದ್ದಳು. ಆದರೆ ಆ ಹುಡುಗಿಯನ್ನು ಮದುವೆಯಾಗಲು ಸಾಧ್ಯವಾಗಲಿಲ್ಲ.
ಹೌದು, ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ರತನ್ ಟಾಟಾ ಅವರು ಮುದ್ದಾದ ಹುಡುಗಿಯೊಬ್ಬಳಿಗೆ ಮನಸೋತಿದ್ದರು. ಇಬ್ಬರು ಮನೆಯವರನ್ನು ಒಪ್ಪಿಸಿ ಮದುವೆಯಾಗಬೇಕು ಅನ್ನೋ ವೇಳೆ ಭಾರತ ಮತ್ತು ಚೀನಾ ನಡುವೆ ಯುದ್ಧ ಶುರುವಾಗಿತ್ತು. ಅಮೆರಿಕದಿಂದ ಭಾರತಕ್ಕೆ ಮರಳುವ ಯೋಚನೆಯಲ್ಲಿದ್ದ ರತನ್ ಟಾಟಾ ಅವರು ಆ ಹುಡುಗಿಯನ್ನು ಮದುವೆಯಾಗಿ ಸ್ವದೇಶಕ್ಕೆ ತೆರಳಲು ಸಿದ್ಧವಾಗಿದ್ದರು. ಆದರೆ ಆ ಹುಡುಗಿಯ ಪೋಷಕರು ತಮ್ಮ ಪುತ್ರಿಯನ್ನು ಭಾರತಕ್ಕೆ ಕಳುಹಿಸಲು ಹಿಂದೇಟು ಹಾಕಿದರು. ಅಲ್ಲದೆ ಬೇರೊಬ್ಬ ಹುಡುಗನೊಂದಿಗೆ ಆಕೆಯ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಇದನ್ನು ತಿಳಿದ ರತನ್ ಟಾಟಾ ಅವರು ಜೀವನದಲ್ಲಿ ಮದುವೆಯೇ ಆಗುವುದಿಲ್ಲವೆಂದು ನಿರ್ಧಾರ ತೆಗೆದುಕೊಂಡಿದ್ದರು.
ಸಾಮಾನ್ಯರಂತೆ ಇರುವ ಅಸಾಮಾನ್ಯರಲ್ಲಿ ರತನ್ ಟಾಟಾ ಒಬ್ಬರು. ಅವರ ಸರಳತೆ, ದೃಢವಾದ ನಿರ್ಧಾರ, ನಾಯಕತ್ವ, ತ್ಯಾಗ, ಸಮಾಜ ಸೇವೆ ಎಲ್ಲವೂ ಕೇವಲ ಹೆಸರಿಗಲ್ಲ, ಅದು ಅವರ ಆದರ್ಶ ಜೀವನದ ಭಾಗಗಳೇ ಆಗಿವೆ. ವ್ಯಾಪಾರದಲ್ಲೂ ಧರ್ಮ, ನ್ಯಾಯ, ಭರವಸೆಗೆ ಮತ್ತೊಂದು ಹೆಸರೇ ರತನ್ ಟಾಟಾ ಎಂದರೆ ಅತಿಶಯೋಕ್ತಿಯೇನಲ್ಲ.