ನವದೆಹಲಿ: ಖ್ಯಾತ ಕೈಗಾರಿಕೋದ್ಯಮಿ, ಟಾಟಾ ಸನ್ಸ್ ಗ್ರೂಪ್ ನ ರತನ್ ಟಾಟಾ, ಸುಪ್ರೀಂಕೋರ್ಟ್ ನ ಮಾಜಿ ಜಡ್ಜ್ ಕೆಟಿ ಥೋಮಸ್ ಮತ್ತು ಲೋಕಸಭೆಯ ಮಾಜಿ ಡೆಪ್ಯುಟಿ ಸ್ಪೀಕರ್ ಕರಿಯಾ ಮುಂಡಾ ಸೇರಿದಂತೆ ಪ್ರಮುಖ ಗಣ್ಯರು ಪಿಎಂ ಕೇರ್ಸ್ ಫಂಡ್ ನ ಟ್ರಸ್ಟಿಗಳಾಗಿ ಆಯ್ಕೆ ಮಾಡಲಾಗಿದೆ ಎಂದು ಅಧಿಕಾರಿಗಳು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರು: ಬಸ್ ಚಲಿಸುತ್ತಿರುವಾಗಲೇ ಆಯತಪ್ಪಿ ಬಿದ್ದು ವಿದ್ಯಾರ್ಥಿನಿ ಮೆದುಳು ನಿಷ್ಕ್ರಿಯ
ಪಿಎಂ ಕೇರ್ಸ್ ಫಂಡ್ ನ ನೂತನ ಟ್ರಸ್ಟಿಗಳಾಗಿ ಆಯ್ಕೆಯಾಗಿರುವವರನ್ನು ಪ್ರಧಾನಮಂತ್ರಿ ಸಚಿವಾಲಯ ಸ್ವಾಗತಿಸಿರುವುದಾಗಿ ತಿಳಿಸಿದೆ. ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಪಿಎಂ ಕೇರ್ಸ್ ಟ್ರಸ್ಟಿಗಳಾಗಿ ನೇಮಕಗೊಂಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬೋರ್ಡ್ ಆಫ್ ಟ್ರಸ್ಟಿಸ್ ಗಳ ಸಭೆ ನಡೆದಿದ್ದು, ಈ ಸಂದರ್ಭದಲ್ಲಿ ರತನ್ ಟಾಟಾ ಹಾಜರಿದ್ದರು.
ಪಿಎಂ ಕೇರ್ಸ್ ನಿಧಿಯ ಸಲಹಾ ಮಂಡಳಿಗೆ ಮಾಜಿ ಆಡಿಟರ್ ಜನರಲ್ ಆಫ್ ಇಂಡಿಯಾದ ರಾಜೀವ್ ಮಹರ್ಷಿ, ಇನ್ಫೋಸಿಸ್ ಫೌಂಡೇಶನ್ ನ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ, ಟೀಚ್ ಫಾರ್ ಇಂಡಿಯಾದ ಸಹ ಸಂಸ್ಥಾಪಕ ಆನಂದ್ ಶಾ ಅವರನ್ನು ನೇಮಕ ಮಾಡಲು ಟ್ರಸ್ಟ್ ನಿರ್ಧರಿಸಿದೆ.