Advertisement

ರಾಷ್ಟ್ರೀಯ ಯುವ Congress ಅಧ್ಯಕ್ಷ ಶ್ರೀನಿವಾಸ್‌ಗೆ ಮಧ್ಯಂತರ ಜಾಮೀನು

09:53 PM May 17, 2023 | Team Udayavani |

ನವದೆಹಲಿ: ಅಸ್ಸಾಂ ಕಾಂಗ್ರೆಸ್‌ನಿಂದ ಅಮಾನತಾಗಿರುವ ಡಾ.ಅಂಕಿತಾ ದತ್ತಾಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿರುವ ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ಗೆ; ಸುಪ್ರೀಂಕೋರ್ಟ್‌ ಬುಧವಾರ ಮಧ್ಯಂತರ ಜಾಮೀನು ನೀಡಿದೆ. ನ್ಯಾ.ಬಿ.ಆರ್‌.ಗವಾಯಿ ಮತ್ತು ನ್ಯಾ.ಸಂಜಯ ಕರೋಲ್‌ ಅವರನ್ನೊಳಗೊಂಡ ನ್ಯಾಯಪೀಠ “ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಂತದಲ್ಲಿ ನಾವು ಏನನ್ನೂ ಹೇಳಲು ಬಯಸುವುದಿಲ್ಲ. ಎಫ್ಐಆರ್‌ ದಾಖಲಿಸುವಲ್ಲಿ ಒಂದು ತಿಂಗಳು ವಿಳಂಬವಾಗಿರುವ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ ಮಧ್ಯಂತರ ಜಾಮೀನು ಪಡೆಯುವ ಅರ್ಹತೆ ಇದೆ. ಅವರಿಗೆ ಮಧ್ಯಂತರ ಜಾಮೀನು ನೀಡಲಾಗುತ್ತದೆ. ಅದಕ್ಕಾಗಿ ಅವರು 50 ಸಾವಿರ ರೂ. ಮೌಲ್ಯದ ಖಾತರಿ ನೀಡಬೇಕು. ತನಿಖೆ ನಡೆಸುವ ತಂಡಕ್ಕೆ ಅಗತ್ಯ ಸಹಕಾರ ನೀಡಬೇಕು” ಎಂದು ಆದೇಶ ನೀಡಿದೆ.

Advertisement

ರಾಷ್ಟ್ರೀಯ ಮಹಿಳಾ ಆಯೋಗ ನಡೆಸುವ ತನಿಖೆಯಲ್ಲಿ ಕೂಡ ಸಹಕಾರ ನೀಡುವಂತೆ ಸೂಚನೆ ಸುಪ್ರೀಂಕೋರ್ಟ್‌ ನೀಡಿದೆ. ಅಸ್ಸಾಂ ಸರ್ಕಾರಕ್ಕೆ ಕೂಡ ನೋಟಿಸ್‌ ನೀಡಿದ್ದು, ಜು.10ರ ಒಳಗಾಗಿ ಉತ್ತರಿಸುವಂತೆ ಸೂಚನೆ ನೀಡಿದೆ. ಮೇ 5ರಂದು ಗುವಾಹಟಿ ಹೈಕೋರ್ಟ್‌ ಶ್ರೀನಿವಾಸ್‌ ಅವರ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next