Advertisement

ಕ್ಷುಲ್ಲಕ ಕಾರಣ: ಉರಿ ವಲಯದ ಜವಾನನಿಂದ ಸೇನಾ ಮೇಜರ್‌ ಗುಂಡಿಕ್ಕಿ ಕೊಲೆ

12:04 PM Jul 18, 2017 | Team Udayavani |

ಹೊಸದಿಲ್ಲಿ : ಅತ್ಯಂತ ಆಘಾತಕಾರಿ ಘಟನೆಯೊಂದರಲ್ಲಿ ಉರಿ ವಲಯದಲ್ಲಿನ ಜವಾನನೊಬ್ಬ ಕ್ಷುಲ್ಲಕ ಕಾರಣಕ್ಕೆ  ರಾಷ್ಟ್ರೀಯ ರೈಫ‌ಲ್ಸ್‌ ಪಡೆಯ ಸೇನಾ ಮೇಜರ್‌ ಒಬ್ಬರನ್ನು ಗುಂಡಿಕ್ಕಿ ಕೊಂದಿರುವುದು ವರದಿಯಾಗಿದೆ. 

Advertisement

ಈ ದುರ್ಘ‌ಟನೆಗೆ ಕಾರಣವಾಗಿರುವುದು ಸೆಲ್‌ ಫೋನ್‌ ಬಳಕೆ ಜಗಳ. ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಸಮೀಪ ಕರ್ತವ್ಯದಲ್ಲಿದ್ದ ಉರಿ ವಲಯದ ಜವಾನನಿಗೆ ರಾಷ್ಟ್ರೀಯ ರೈಫ‌ಲ್ಸ್‌ ಪಡೆಯ ಮೇಜರ್‌ ಶಿಖರ್‌ ಥಾಪಾ ಮೊಬೈಲ್‌ ಫೋನ್‌ ಬಳಸದಿರಲು ಸೂಚಿಸಿದ್ದಾರೆ. ಅತ್ಯಂತ ಸೂಕ್ಷ್ಮ ಗಡಿ ಪ್ರದೇಶವಾಗಿರುವ ಈ ಭಾಗದಲ್ಲಿ ಮೊಬೈಲ್‌ ಬಳಸಬೇಡ ಎಂದು ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ. 

ಆದರೆ ಈ ಎಚ್ಚರಿಕೆಯೊಂದಿಗೆ ತನ್ನ ಮೊಬೈಲ್‌ ಫೋನನ್ನು ಹಾಳು ಗೆಡಹಲಾಗಿದ್ದ ಕಾರಣಕ್ಕೆ ತೀವ್ರ ಆಕ್ರೋಶಿತನಾದ ಜವಾನನು ಮೇಜರ್‌ ಥಾಪಾ ಅವರ ಮೇಲೆ ಐದು ಬುಲೆಟ್‌ಗಳನ್ನು ಹಾರಿಸಿ ಅವರನ್ನು ಕೊಂದೇ ಬಿಟ್ಟಿದ್ದಾನೆ ಎಂದು ವರದಿ ತಿಳಿಸಿದೆ. ಮೇಜರ್‌ ಥಾಪಾ ಅವರು 71ನೇ ಸಶಸ್ತ್ರ ರೆಜಿಮೆಂಟ್‌ಗೆ ಸೇರಿದವರಾಗಿದ್ದಾರೆ. 

ಈ ಘಟನೆಯ ಪೂರ್ಣ ವಿವರಗಳೊಂದಿಗೆ ಸೇನೆಯು ದಿನಾಂತ್ಯದ ವೇಳೆಗೆ ಅಧಿಕೃತ ಪ್ರಕಟನೆಯನ್ನು ನೀಡಲಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next