Advertisement

ದೇಶದಲ್ಲಿಯೇ ರಾಷ್ಟ್ರಕೂಟರ ಸಂಸ್ಥಾನ ದೊಡ್ಡದು: ಸಿಂಪಿ

10:26 AM Mar 02, 2018 | Team Udayavani |

ಚಿತ್ತಾಪುರ: ಇಡೀ ದೇಶದಲ್ಲಿಯೇ ರಾಷ್ಟ್ರಕೂಟರ ಸಂಸ್ಥಾನ ಅತಿದೊಡ್ಡದು ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಹೇಳಿದರು.

Advertisement

ಪಟ್ಟಣಕ್ಕೆ ಗುರುವಾರ ಆಗಮಿಸಿದ ರಾಷ್ಟ್ರಕೂಟ ಉತ್ಸವ ರಥಯಾತ್ರೆಗೆ ಕಸಾಪ, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಬರಮಾಡಿಕೊಂಡ ಸಮಾರಂಭದಲ್ಲಿ ಮಾತನಾಡಿದ ಅವರು, ರಾಷ್ಟ್ರಕೂಟರ ಕೊಡುಗೆ ಬಗ್ಗೆ ಇಂದಿನ ಜನರಿಗೆ ಅರಿವು ಮೂಡಿಸಬೇಕಾಗಿದೆ. ಉತ್ಸವದಲ್ಲಿ ಎಲ್ಲ ತಾಲೂಕಿನ ಹಾಗೂ ಗ್ರಾಮೀಣ ಭಾಗದ ಜನರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ತಹಶೀಲ್ದಾರ್‌ ಮಲ್ಲೇಶಾ ತಂಗಾ, ಸಿಪಿಐ ಶಂಕರಗೌಡ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಮ್ಮ ಡವಳಗಿ, ಕಸಾಪ ಜಿಲ್ಲಾ ಕಾರ್ಯದರ್ಶಿ ಮಡಿವಾಳಪ್ಪ ನಾಗರಾಳ, ತಾಲೂಕು ಅಧ್ಯಕ್ಷ ಕಾಶಿನಾಥ ಗುತ್ತೇದಾರ ಮಾತನಾಡಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಥಯಾತ್ರೆ ಸಂಚರಿಸಿತು. ಪಿಎಸ್‌ಐ ಜಗದೇವಪ್ಪ ಪಾಳಾ, ದೇವಿಂದ್ರರೆಡ್ಡಿ ದುಗನೂರ,
ಕಸಾಪ ಕಾರ್ಯದರ್ಶಿ ಸಿದ್ದಲಿಂಗ ಬಾಳಿ, ಮುಖಂಡರಾದ ದೇವಪ್ಪ ನಂದೂರಕರ, ಶಿವಾಜಿ ಕಾಶಿ, ಭೀಮಣ್ಣ ಹೋತಿನಮಡಿ, ರವೀಂದ್ರ ಇವಣಿ, ರಾಜಶೇಖರ ಬಳ್ಳಾ, ಮಹೇಶ ಕಾಶಿ, ಶಾಂತಕುಮಾರ ಮಳಖೇಡ, ಜಗದೀಶ ದಿಗ್ಗಾಂವಕರ, ಮಹೇಶ ಜಾಯಿ, ಕರಣಕುಮಾರ ಅಲ್ಲೂರ ಇದ್ದರು.

ಜೇವರ್ಗಿ: ರಾಷ್ಟ್ರಕೂಟ ಉತ್ಸವದ ಅಂಗವಾಗಿ ಜಿಲ್ಲಾದ್ಯಂತ ಪ್ರಚಾರ ನೀಡುವ ರಥಯಾತ್ರೆಗೆ ಗುರುವಾರ ಪಟ್ಟಣದಲ್ಲಿ ವಿವಿಧ ಸಂಘ-ಸಂಸ್ಥೆ, ಕಸಾಪ ತಾಲೂಕು ಘಟಕದ ವತಿಯಿಂದ ಅದ್ಧೂರಿ ಸ್ವಾಗತ ನೀಡಲಾಯಿತು.

Advertisement

ತಹಶೀಲ್ದಾರ ಬಸಲಿಂಗಪ್ಪ ನಾಯ್ಕೋಡಿ ಸ್ವಾಗತ ಕೋರಿದರು. ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಕಸಾಪ ತಾಲೂಕು ಅಧ್ಯಕ್ಷ ಶಿವನಗೌಡ ಪಾಟೀಲ ಹಂಗರಗಿ, ಸಮಾಜ ಸೇವಕ ಕಲ್ಯಾಣಕುಮಾರ ಸಂಗಾವಿ, ಕಸಾಪ ಕೋಶಾಧ್ಯಕ್ಷ ವೀರೇಶ ಕಂದಗಲ್‌, ಕಾರ್ಯದರ್ಶಿಗಳಾದ ನಾನಾಗೌಡ ಕೂಡಿ, ಶಂಬಣ್ಣ ಮಾಸ್ತರ ಹೂಗಾರ, ಉಪಾಧ್ಯಕ್ಷರಾದ ವಿ. ಬಿ. ಹಿರೇಗೌಡ, ಡಾ| ಗಿರೀಶ ರಾಠೊಡ, ಬಸವಕೇಂದ್ರದ ಅಧ್ಯಕ್ಷ ಶರಣಬಸವ ಕಲ್ಲಾ, ಚಂದ್ರಶೇಖರ ತುಂಬಗಿ, ಗುರುಗೌಡ ಮಾಲಿಪಾಟೀಲ, ಶಿವಲಿಂಗ ಹಂಗರಗಿ ಇದ್ದರು.

ಶಹಾಬಾದ: ಸೇಡಂ ತಾಲೂಕು ಮಳಖೇಡದಲ್ಲಿ ಮಾರ್ಚ್‌ 4, 5ರಂದು ನಡೆಯಲಿರುವ ರಾಷ್ಟ್ರಕೂಟರ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ರಥಯಾತ್ರೆ ಗುರುವಾರ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಉಪತಹಶೀಲ್ದಾರ ಮಲ್ಲಿಕಾರ್ಜುನ ಶಿವಪುರೆ, ಕಸಾಪ ಗ್ರಾಮೀಣ ಘಟಕದ ಅಧ್ಯಕ್ಷ ಶರಣಗೌಡ ಪಾಟೀಲ, ನಗರ ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಪಟ್ಟಣಕರ ಸ್ವಾಗತಿಸಿದರು. ನಗರದ ಬಸವೇಶ್ವರ ವೃತ್ತಕ್ಕೆ ಚಿತ್ತಾಪುರ ಮೂಲಕ ಆಗಮಿಸಿದ ರಥಕ್ಕೆ ಉಪ ತಹಶೀಲ್ದಾರ ಶಿವಪುರೆ ಮಾಲಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಚಾಲುಕ್ಯ, ಹಂಪಿ ಉತ್ಸವದಂತೆ ಪ್ರಥಮಬಾರಿಗೆ ರಾಷ್ಟ್ರಕೂಟರ ಉತ್ಸವ ಆಚರಿಸಲಾಗುತ್ತಿದೆ ಎಂದು ಹೇಳಿದರು. ಕಸಾಪ ಗೌರವ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ಸಂಚಾಲಕ ರಾಜಶೇಖರ ಸಿರಗುರ, ಮಾಣಿಕ ಪಾಟೀಲ ಗೋಳಾ, ಶಾಂತಯ್ಯ ನಂದಿಧ್ವಜ, ರಾಜಶೇಖರ ಕುಂಬಾರ, ಸಿದ್ದು ತಳವಾರ, ಶಂಕರ ಸಿಂಪಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next