Advertisement

ಖಜಾನೆ-1ಕ್ಕಿಂತ 2 ಸರಳ: ತಂಗಾ

10:03 AM Oct 06, 2018 | Team Udayavani |

ಚಿತ್ತಾಪುರ: ಪ್ರಸ್ತುತ ದಿನಗಳಲ್ಲಿ ಹೊಸ ತಂತ್ರಜ್ಞಾನಗಳು ಹುಟ್ಟಿಕೊಳ್ಳುತ್ತಿವೆ. ಇಲ್ಲಿವರೆಗೆ ಖಜಾನೆ-1ರಲ್ಲಿ ಕೆಲಸ ಮಾಡಿದ್ದೇವೆ. ಇದೀಗ ಖಜಾನೆ-2ರಲ್ಲಿ ಕೆಲಸ ಮಾಡುವುದು ಅನಿವಾರ್ಯ. ಇದು ತುಂಬಾ ಸರಳವಾಗಿದೆ ಎಂದು ತಹಶೀಲ್ದಾರ ಮಲ್ಲೇಶಾ ತಂಗಾ ಹೇಳಿದರು.

Advertisement

ಪಟ್ಟಣದ ಆರೋಗ್ಯಾಧಿಕಾರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಉಪ ಖಜಾನೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಖಜಾನೆ-2 ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ಖಜಾನೆ-2, 2016 ರಲ್ಲಿಯೇ ಜಾರಿಗೆ ಬಂದಿದೆ.

ಆದ್ದರಿಂದ ಇದೀಗ ಕೈಯಿಂದ ಬರೆದುಕೊಡುವಂತ ಪರಿಸ್ಥಿತಿ ಇಲ್ಲ. ಆನ್‌ಲೈನ್‌ ಮೂಲಕವೇ ವೇತನ ಬಿಲ್‌ ಪಾವತಿ ಮಾಡಬೇಕಿದೆ ಎಂದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಖಜಾನೆ-2 ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಪ್ರತಿಯೊಬ್ಬ ಸರ್ಕಾರಿ ನೌಕರರು ಕಾರ್ಯಾಗಾರದ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಲಬುರಗಿ ಜಿಲ್ಲಾ ಖಜಾನೆ ಉಪ ನಿರ್ದೇಶಕ ದತ್ತಪ್ಪ ಗೊಬ್ಬುರ ಮಾತನಾಡಿ, ಮೊದಲು ಖಜಾನೆ-1 ರಲ್ಲಿ ಕೆಲಸ ಮಾಡುವ ಪದ್ಧತಿ ಇತ್ತು. ಈಗ ಖಜಾನೆ-2ರಲ್ಲಿ ಆನ್‌ಲೈನ್‌ ಮೂಲಕ ನೌಕರರ ಬ್ಯಾಂಕ್‌ ಖಾತೆಗೆ ನೇರವಾಗಿ ವೇತನ ಹಣ ಜಮಾವಣೆ ಆಗುತ್ತದೆ ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಳೂಂಡಗಿ ಮಾತನಾಡಿ, ಸರ್ಕಾರಿ ನೌಕರರಿಗೆ ಸರ್ಕಾರದಿಂದ ಯಾವ ಸೌಲಭ್ಯಗಳು ಬೇಕೋ ಅದೆಲ್ಲವನ್ನು ಒದಗಿಸಲು ತಾಲೂಕು ಸಂಘವು ಪ್ರಮಾಣಿಕವಾಗಿ ಪ್ರಯತ್ನಿಸುತ್ತದೆ ಎಂದು ಹೇಳಿದರು. ಸಂಘದ ಪದಾಧಿಕಾರಿ ವಿಜಯಕುಮಾರ ಲೊಡ್ಡೆನೋರ್‌ ಪ್ರಾಸ್ತಾವಿಕ ಮಾತನಾಡಿದರು.

Advertisement

ಜಿಪಂ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ, ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಬಸಲಿಂಗಪ್ಪ ಡಿಗ್ಗಿ, ಜಿಲ್ಲಾ ಖಜಾನೆ ಲೆಕ್ಕಾಧಿ ಕಾರಿ ಜಕ್ಕಪ್ಪ, ಸಿದ್ದಣ್ಣ, ರಾಘವೇಂದ್ರ ಬಡಶೇಷಿ, ಮಹೇಶ, ಬಸವರಾಜ, ರಾಘವೇಂದ್ರ, ನಾಗೇಂದ್ರಪ್ಪ ಕಾಶಿ, ಪರಶುರಾಮ, ಉಸ್ಮಾನ್‌ ಸಾಬ್‌, ಎಕ್ಬಾಲ್‌, ಸೈಯೋದ್ದಿನ್‌, ಬಸವರಾಜ ಯಂಬತ್ನಾಳ, ವೀರಸಂಗಪ್ಪ ಸುಲೇಗಾಂವ, ಗಂಗಾಧರ ಇದ್ದರು. ಎಂ.ಬಿ. ನಿಂಗಪ್ಪ ಪ್ರಾರ್ಥಿಸಿದರು, ಶ್ರೀಧರ ಸ್ವಾಗತಿಸಿದರು, ಆದಪ್ಪ ಬಗಲಿ

Advertisement

Udayavani is now on Telegram. Click here to join our channel and stay updated with the latest news.

Next