ತಾಳಿಕೋಟೆ: ಹಸುವಿನ ಸೆಗಣಿ ಮತ್ತು ಗೋಮೂತ್ರ ಬಳಿಸಿ ಮಾಡುವ ಕೃಷಿಯು ರೈತನ ಬದುಕಿನಲ್ಲಿ ಹೊಸ ಆಯಾಮ ಸೃಷ್ಟಿಸುವುದರೊಂದಿಗೆ ಆತನ ಬದುಕನ್ನು ಹಸನಾಗಿಸುತ್ತದೆ ಎಂದು ಭಾರತೀಯ ಜನತಾ ಪಕ್ಷದ ಕಿಸಾನ್ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷ ನರೇಶ ಸಿರೋಹಿ ಹೇಳಿದರು.
ಪಟ್ಟಣದ ಸಂಗಮೇಶ್ವರ ಸಭಾ ಭವನದಲ್ಲಿ ಮಲ್ಲನಗೌಡ ಬಿರಾದಾರ ಪ್ರಾಯೋಜಿತದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಉಚಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಒಂದು ಹಸುವಿನ ಗಂಜಲದಿಂದ ಬಳಕೆ ಮಾಡುವ ಕೃಷಿಯು ಸುಮಾರು ಮೂವತ್ತು ಎಕರೆಯಲ್ಲಿ ಫಲವತ್ತಾದ ಬೆಳೆಯನ್ನು ಬೆಳೆಯಬಹುದಾಗಿದೆ.
ಇದರಿಂದ ಜಮೀನಿನ ಮಣ್ಣಿನಲ್ಲಿ ಶಕ್ತಿ ಎಂಬುದು ಬರುತ್ತದೆ. ಇಂದಿನ ರಾಸಾಯನಿಕ ಗೊಬ್ಬರ ಬಳಕೆಯಿಂದ ಜಮೀನಿನಲ್ಲಿಯ ಮಣ್ಣಿನ ಸತ್ವ ಕಳೆದುಕೊಳ್ಳುವದರೊಂದಿಗೆ ಬರುವ ಫಸಲಿನಲ್ಲಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ ಸಾಗಿದೆ. ಉತ್ತಮ ಫಲವತ್ತತೆ ಬೆಳೆಯನ್ನು ಪಡೆಯಲು ನೈಸರ್ಗಿಕವಾದಂತ ಹಸುವಿನಿಂದ ಬರುವ ಗೊಬ್ಬರವನ್ನು ಬಳೆಕೆ ಮಾಡುವಂತಾಗಬೇಕೆಂದು ಹೇಳಿದರು.
ಭಾಜಪ ಕಿಸಾನ್ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ, ಭೂಮಿಯಲ್ಲಿ ಬೆಳೆಯುವ ಬೆಳೆಗೆ ನೈಸರ್ಗಿಕ ವಸ್ತುಗಳನ್ನು ಬಳೆಸುವದನ್ನು ನಿಲ್ಲಿಸಿ ರಾಸಾಯನಿಕ ಗೊಬ್ಬರ, ಕ್ರಿಮಿ ನಾಶಕಗಳನ್ನು ಬಳಸುತ್ತಿರುವುದರಿಂದ ಫಸಲು ಕಡಿಮೆ ಬರಲು ಕಾರಣವಾಗಿದೆ. ನೈಸರ್ಗಿಕವಾಗಿ ರೈತರಿಗೆ ಸಿಗುವ ಬದುಕು ಇನ್ನಾವದರಲ್ಲಿಯೂ ಸಿಗಲು ಸಾಧ್ಯವಿಲ್ಲ. ಕೇವಲ ಒಂದು ಹಸುವಿನಿಂದ ಶೂನ್ಯ ಬಂಡವಾಳದಲ್ಲಿ 30 ಎಕರೆ ಭೂಮಿಯಲ್ಲಿ ಬೆಳೆಯಬಹುದಾದ ಫಸಲು ಸಾವಿರಾರು ರೂ. ಖರ್ಚು ಮಾಡಿ ರಾಸಾಯನಿಕ ವಸ್ತುಗಳ ಬಳಕೆಯಿಂದ 70 ಎಕರೆಯಲ್ಲಿ ಬೆಳೆಯುವಂತಾಗಿದೆ. ಇದನ್ನು ರೈತರು ಅರ್ಥೈಸಿಕೊಂಡು ನೈಸರ್ಗಿಕ ಕೃಷಿಯ ಕಡೆಗೆ ಮುಖಮಾಡಬೇಕೆಂದು ತಿಳಿ ಹೇಳಿದರು.
ಬಿಜೆಪಿ ಮುಖಂಡರಾದ ಮಲ್ಲನಗೌಡ ಬಿರಾದಾರ, ಕಾಶಿಬಾಯಿ ರಾಂಪೂರ, ಡಾ| ಸಂತೋಷಕುಮಾರ ಬಿರಾದಾರ, ಶಿವಾನಂದ ಬಿರಾದಾರ, ಬಸವರಾಜ ದಿಂಡೂರ, ಶಿವಶಂಕ್ರಗೌಡ ಅವರು ಮಾತನಾಡಿದರು. ನಂತರ ಪಾಲ್ಗೊಂಡ ರೈತಾಪಿ ವರ್ಗದವರಿಗೆ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕುರಿತು ಕಾರ್ಯಾಗಾರ ನಡೆಯಿತು.
ಈ ಸಮಯದಲ್ಲಿ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಎಂ.ಎಸ್.ಪಾಟೀಲ (ನಾಲತವಾಡ), ಪ್ರಭು ಕಡಿ, ನಿಂಗಪ್ಪಗೌಡ ಬಪ್ಪರಗಿ, ಮಲಕೇಂದ್ರಾಯಗೌಡ ಪಾಟೀಲ, ಮಲ್ಲಿಕಾರ್ಜುನ ಶೆಟ್ಟರ, ಎಸ್.ಎಸ್. ಪಾಟೀಲ, ದ್ಯಾಮನಗೌಡ ಪಾಟೀಲ, ಸಂಗು ಕೊಪ್ಪದ, ಶಾಂತಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಡಾ| ಬಿ.ಎಸ್.ಬಿರಾದಾರ, ದಾನಪ್ಪಗೌಡ ಬಿರಾದಾರ, ಶಂಕ್ರಗೌಡ ಬಿರಾದಾರ, ಸಿದ್ದನಗೌಡ ಪಾಟೀಲ ಇದ್ದರು. ಮಲ್ಲನಗೌಡ ಬಿರಾದಾರ ಸ್ವಾಗತಿಸಿ, ವಂದಿಸಿದರು