Advertisement

ಶಕಿಬ್, ಲಸಿತ್ ಮಾಲಿಂಗ ದಾಖಲೆ ಮುರಿದ ರಶೀದ್ ಖಾನ್

11:38 AM Oct 30, 2021 | Team Udayavani |

ದುಬೈ: ಅಫ್ಘಾನಿಸ್ಥಾನ ತಂಡದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಅವರು ಅಂತಾರಾಷ್ಟ್ರೀಯ ಟಿ20 ಯಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಶುಕ್ರವಾರದ ಪಾಕ್ ವಿರುದ್ಧದ ಪಂದ್ಯದಲ್ಲಿ ನೂರು ವಿಕೆಟ್ ಸಾಧನೆ ಮಾಡಿದರು.

Advertisement

ಅತೀ ಕಡಿಮೆ ಪಂದ್ಯಗಳಲ್ಲಿ ನೂರು ಟಿ20 ಅಂತಾರಾಷ್ಟ್ರೀಯ ವಿಕೆಟ್ ಕಬಳಿಸಿದ ಸಾಧನೆಯನ್ನು ರಶೀದ್ ಖಾನ್ ಮಾಡಿದರು. ಕೇವಲ 53 ಪಂದ್ಯಗಳಲ್ಲಿ ರಶೀದ್ ಖಾನ್ ನೂರು ವಿಕೆಟ್ ಕಿತ್ತ ಸಾಧನೆ ಮಾಡಿದರು.  ಪಾಕ್ ಆಲ್ ರೌಂಡರ್ ಮೊಹಮ್ಮದ್ ಹಫೀಜ್ ವಿಕೆಟ್ ಕಿತ್ತಾಗ ರಶೀದ್ ಈ ದಾಖಲೆ ಬರೆದರು.

ಈ ಹಿಂದೆ ಈ ದಾಖಲೆ ಲಂಕಾದ ದಿಗ್ಗಜ ಬೌಲರ್ ಲಸಿತ್ ಮಾಲಿಂಗ ಹೆಸರಲ್ಲಿತ್ತು. ಅವರು 76 ಪಂದ್ಯಗಳಲ್ಲಿ ನೂರು ವಿಕೆಟ್ ಕಿತ್ತ ಸಾಧನೆ ಮಾಡಿದರು.

ಇದನ್ನೂ ಓದಿ:ವಿಶ್ವಕಪ್ ಪಂದ್ಯದ ವೇಳೆ ಪಾಕ್-ಅಫ್ಘಾನ್ ಅಭಿಮಾನಿಗಳ ಹೊಡೆದಾಟ: ಟಿಕೆಟ್ ಇಲ್ಲದೆ ನುಗ್ಗಲು ಯತ್ನ

ದುಬೈನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ಥಾನ ತಂಡ ಅಫ್ಘಾನಿಸ್ಥಾನ ವಿರುದ್ಧ ಐದು ವಿಕೆಟ್ ಗಳ ಜಯ ಸಾಧಿಸಿತು. 12 ಎಸೆತಗಳಲ್ಲಿ 24 ರನ್ ಬೇಕಾಗಿದ್ದ ವೇಳೆ ಪಾಕ್ ಬ್ಯಾಟರ್ ಆಸಿಫ್ ಅಲಿ ಒಂದೇ ಓವರ್ ನಲ್ಲಿ ನಾಲ್ಕು ಸಿಕ್ಸರ್ ಬಾರಿಸಿ ಪಾಕ್ ಗೆ ಸತತ ಮೂರನೇ ಗೆಲುವು ತಂದಿತ್ತರು.

Advertisement
Advertisement

Udayavani is now on Telegram. Click here to join our channel and stay updated with the latest news.

Next