Advertisement

ಕಟೀಲು ದೇವಸ್ಥಾನದಲ್ಲಿ ರಾಶಿಪೂಜೆ, ಚಂಡಿಕಾಯಾಗ

10:13 PM Mar 14, 2021 | Team Udayavani |

ಕಟೀಲು: ಇಲ್ಲಿನ ಶ್ರೀ ದುರ್ಗಾ ಪರಮೇಶ್ವರಿ ದೇಗುಲದಲ್ಲಿ ವರ್ಷಂಪ್ರತಿಯ ಸಂಪ್ರದಾಯದಂತೆ ರವಿವಾರ ಮೀನ ಸಂಕ್ರಾಂತಿಯಂದು ರಾಶಿಪೂಜೆ ಜರಗಿತು.

Advertisement

ಬೆಳಗ್ಗೆ ದೇವರಿಗೆ ಹನ್ನೆರಡು ರಾಶಿ ಕಲಶಗಳ ಅಭಿಷೇಕ, ಪುಣ್ಯಾಹನಾಂದಿ ಸಮಾರಾಧನೆ ಬಳಿಕ ರಾಶಿಚಕ್ರದ ಮಂಡಲದಲ್ಲಿ ಹನ್ನೆರಡು ರಾಶಿಗಳನ್ನು ಆವಾಹಿಸಿದ ಬಳಿಕ ಊರ ವಿಪ್ರರಿಂದ ಹರಿನಾಮ ಸಂಕೀರ್ತನೆ ಜರಗಿತು. ಮಧ್ಯಾಹ್ನ ಆರು ಹಾಗೂ ರಾತ್ರಿ ಆರು ರಾಶಿಗಳಿಗೆ ದೇವಸ್ಥಾನದೊಳಗೆ ಒಳಗೆ ವಿಶೇಷ ಪೂಜೆ ನಡೆಯಿತು.

ಈ ಪ್ರಯುಕ್ತ ಚಂಡಿಕಾಹೋಮ, ಮಧ್ಯಾಹ್ನ ದೇವರ ಮಹಾಪೂಜೆ ಬಳಿಕ ಪಲ್ಲಪೂಜೆ ನಡೆದು ಅನಂತರ ಮಾರಿ ಓಡಿಸುವ ಕಾರ್ಯಕ್ರಮ, ಬಳಿಕ ಆರಾಧನೆ, ರಾತ್ರಿ ಮಹಾರಂಗಪೂಜೆ (ಭೂತಬಲಿ ರಂಗಪೂಜೆ), ಉತ್ಸವ ಬಲಿ, ದೇವರಿಗೆ ಚಂದ್ರಮಂಡಲ ರಥೋತ್ಸವ ನಡೆಯಿತು.

ಮೊಕ್ತೇಸರ ವಾಸುದೇವ ಆಸ್ರಣ್ಣ, ಕೊಡೆತ್ತೂರುಗುತ್ತು ಸನತ್‌ ಕುಮಾರ ಶೆಟ್ಟಿ, ಅರ್ಚಕ ಅನಂತ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಅತ್ತೂರುಬೈಲು ವೆಂಕಟರಾಜ ಉಡುಪ, ವೇದವ್ಯಾಸ ತಂತ್ರಿ, ಕೃಷ್ಣರಾಜ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next