ವಾಷಿಂಗ್ಟನ್: ಡಾಲ್ಫಿನ್ ಗಳಲ್ಲಿ ಸುಮಾರು ನಲವತ್ತು ತಳಿಗಳಿವೆ. ಅವು ಪ್ರಪಂಚದಾದ್ಯಂತ ಹೆಚ್ಚಾಗಿ ಸಮುದ್ರದಲ್ಲಿ ಕಾಣಸಿಗುತ್ತದೆ. ಇತ್ತೀಚೆಗೆ ಅತ್ಯಪರೂಪದ ನಸುಗೆಂಪು ಬಣ್ಣದ ಡಾಲ್ಫಿನ್ ಲೂಸಿಯಾನದಲ್ಲಿ ಕಂಡುಬಂದಿದ್ದು, ಇದನ್ನು ಮೀನುಗಾರ ಥರ್ಮನ್ ಗಸ್ಟಿನ್ ಎಂಬವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ಇದನ್ನೂ ಓದಿ:ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ: ಮಣಿಪುರದಲ್ಲಿ ನಡೆಯಿತು ಆಘಾತಕಾರಿ ಘಟನೆ
ಸಿಬಿಎಸ್ ನ್ಯೂಸ್ ವರದಿ ಪ್ರಕಾರ, ಗಸ್ಟಿನ್ ಅವರು ಸುಮಾರು ೨೦ ವರ್ಷಗಳಿಂದ ಮೀನುಗಾರಿಕೆ ನಡೆಸುತ್ತಿದ್ದಾರೆ. ಗಸ್ಟಿನ್ ಗಲ್ಫ್ ಆಫ್ ಮೆಕ್ಸಿಕೋ ಸಮೀಪ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಜುಲೈ 12ರಂದು ನಸುಗೆಂಪು ಬಣ್ಣದ ಎರಡು ಡಾಲ್ಫಿನ್ ಗಳು ಕಂಡುಬಂದಿದ್ದು, ಆ ವಿಡಿಯೋ ಇದೀಗ ವೈರಲ್ ಆಗಿರುವುದಾಗಿ ವರದಿ ವಿವರಿಸಿದೆ.
ನಸುಗೆಂಪು ಬಣ್ಣದ ಡಾಲ್ಫಿನ್ ಕಂಡು ತನಗೆ ತುಂಬಾ ಅಚ್ಚರಿಯಾಯಿತು ಎಂದು ತಿಳಿಸಿರುವುದಾಗಿ ಸಿಬಿಎಸ್ ವರದಿ ಮಾಡಿದೆ. ಬಹುತೇಕ ಎಲ್ಲಾ ಸಮಯದಲ್ಲೂ ಮೀನುಗಾರಿಕೆಗೆ ತೆರಳುತ್ತಿರುವುದಾಗಿ ತಿಳಿಸಿರುವ ಗಸ್ಟಿನ್, ತಾನು ಲೂಸಿಯಾನಕ್ಕೆ ಮೂರನೇ ಬಾರಿ ಮೀನುಗಾರಿಕೆಗೆ ತೆರಳಿದ್ದ ವೇಳೆ ನಸುಗೆಂಪು ಬಣ್ಣದ ಡಾಲ್ಫಿನ್ ಕಂಡು ಬಂದಿತ್ತು. ನಿಜಕ್ಕೂ ನಾನು ತುಂಬಾ ಅದೃಷ್ಟವಂತ, ಯಾಕೆಂದರೆ ತುಂಬಾ ಅಪರೂಪವಾದ ಸನ್ನಿವೇಶ ಸೆರೆಹಿಡಿಯಲು ಸಾಧ್ಯವಾಯ್ತು ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ.
ದುರದೃಷ್ಟವೆಂದರೆ ಇಂತಹ ಅಪರೂಪದ ಡಾಲ್ಫಿನ್ ಗಳನ್ನು ಕೆಲವು ಜನರು ಸೆರೆಹಿಡಿಯುತ್ತಾರೆ. ಇದಕ್ಕೆ ವಿಶೇಷ ರೀತಿಯ ಆಟಗಳನ್ನು ಕಲಿಸಿ ಮನರಂಜನೆಗಾಗಿ ಸಾಕುತ್ತಾರೆ ಎಂದು ಗಸ್ಟಿನ್ ತಿಳಿಸಿದ್ದಾರೆ. ಒಮ್ಮೊಮ್ಮೆ ಡಾಲ್ಫಿನ್ ಗಳು ಸಮುದ್ರದಲ್ಲಿ ತೆರಳುವ ಹಡಗುಗಳ ಸುತ್ತ ಆಟವಾಡುತ್ತಾ ಹಿಂಬಾಲಿಸಿಕೊಂಡು ಬರುವ ಸೋಜಿಗದ ಸ್ವಭಾವವನ್ನು ಇವು ಪ್ರದರ್ಶಿಸುತ್ತವೆ.