Advertisement

ಇತಿಹಾಸ ನೆನಪಿಸಿದ ಅಪರೂಪದ ಚಿತ್ರಗಳು

08:58 PM Mar 29, 2021 | Girisha |

ವಿಜಯಪುರ: ನಗರದಲ್ಲಿ ಮಹಾತ್ಮ ಗಾಂಧಿಧೀಜಿ ಜೀವನ, ಸ್ವಾತಂತ್ರÂ ಪೂರ್ವದ ಅಪರೂಪದ ವಿಶೇಷ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಕ್ರೀಡಾಪಟುಗಳು, ವಿದ್ಯಾರ್ಥಿಗಳು ಅಪರೂಪದ ಈ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿದ್ದಾರೆ.

Advertisement

ನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಛಾಯಾಚಿತ್ರ ಪ್ರದರ್ಶನದಲ್ಲಿ ಗುಜರಾತ್‌ನ ಪೋರಬಂದರ ನಗರದಲ್ಲಿ ಹುಟ್ಟಿದ ಮೋಹನದಾಸ್‌ ಕರಮಚಂದ್‌ ಗಾಂಧೀಜಿ ವಿದೇಶದಲ್ಲಿ ಕಾನೂನು ಉನ್ನತ ಪದವಿ ಪಡೆದ, ದಕ್ಷಿಣ ಆಫ್ರಿಕಾದಲ್ಲಿ ವಕೀಲಿ ವೃತ್ತಿ ಆರಂಭಿಸಿದ, ಅಲ್ಲಿ ನಡೆಯುತ್ತಿದ್ದ ಅನ್ಯಾಯಗಳ ವಿರುದ್ಧ ಹೋರಾಟ ಸೇರಿದಂತೆ ಅಪರೂಪದ ಛಾಯಾಚಿತ್ರಗಳು ಪ್ರದರ್ಶನದಲ್ಲಿವೆ.

ವಿಜಯಪುರ ನಗರಕ್ಕೆ ಭೇಟಿ ನೀಡಿದ್ದಾಗ ಹರಿಜನ ಕೇರಿಗಗಳಲ್ಲಿ ಸಂಚಿರಿಸಿದ 1934ರಲ್ಲಿನ ಈ ಅಪರೂಪದ ಭಾವಚಿತ್ರ ನಾವು ಕಾಣಬಹುದು. ದಕ್ಷಿಣ ಆಫ್ರಿಕಾದ ಭಾರತೀಯ ಸಮುದಾಯದ ಗಣ್ಯರೊಂದಿಗೆ ಉತ್ತಮ ಬಾಂಧವ್ಯ, ರಾಷ್ಟ್ರ ನೇತಾರ ಗೋಪಾಲ ಕೃಷ್ಣ ಗೋಖಲೆ ಸಂಪರ್ಕ, ಪ್ರೇರಣೆ, 1924ರ ಐತಿಹಾಸಿಕ ಬೆಳಗಾವಿ ಕಾಂಗ್ರೆಸ್‌ ಅಧಿವೇಶನ, ಬ್ರಿಟಿಷ್‌ ಸರ್ಕಾರದ ವಿರುದ್ಧ ನಡೆದ ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣೆ ಹೋರಾಟ, ಅಸಹಕಾರ ಚಳವಳಿ ಹೀಗೆ ಹಲವು ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ.

ಗ್ರಾಮ ಸ್ವರಾಜ್ಯ, ಕುಷ್ಠ ರೋಗ ನಿವಾರಣೆ, ಸ್ವದೇಶಿ ಆಂದೋಲನ ಹೀಗೆ ಗಾಂ ಧೀಜಿ ಸಾರಥ್ಯದ ಸ್ವಾತಂತ್ರÂ ಹೋರಾಟ, ಕುಷ್ಟ ರೋಗ ಪೀಡಿತರ ಸೇವೆ, ದಲಿತರ ಕೇರಿ ಪ್ರವೇಶ, ಬೆಂಗಳೂರಿನ ರಾಷ್ಟ್ರೀಯ ಹೈನುಗಾರಿಕೆ ಸಂಸ್ಥೆಯಲ್ಲಿ ಪಶುಪಾಲನೆ ಕುರಿತ ಮಾಹಿತಿ ಪಡೆದು, ಸಂದರ್ಶಕರ ಪುಸ್ತಕದಲ್ಲಿ ಸಹಿ ಮಾಡಿ, ತಮ್ಮದು ಸಬರಮತಿ ಆಶ್ರಮದ ವಾಸ ಎಂದು ನಮೂದಿಸಿರುವ ಅಪರೂಪದ ದಾಖಲೆಗಳೂ ವೀಕ್ಷಣೆಗೆ ಲಭ್ಯವಾಗಲಿವೆ. ಭಾರತೀಯರ ಸಾರ್ವಜನಿಕ ಬದುಕಿಗೆ ಹೊಸ ಅರ್ಥ ಕೊಟ್ಟ ಬಾಪೂಜಿ ದೇಶ-ವಿದೇಶಗಳಲ್ಲೂ ಸಂಚರಿಸಿ ನೈಜ ಭಾರತವನ್ನು ಪರಿಚಯಿಸುವ ಕಾರ್ಯಗಳನ್ನು ಹಮ್ಮಿಕೊಂಡಿದ್ದರು.

ಗ್ರಾಮೀಣಾಭಿವೃದ್ಧಿ, ದಲಿತರಿಗೆ ಏಳ್ಗೆ ಮೊದಲಾದ ಅರ್ಥಪೂರ್ಣ ಯೋಜನೆಗಳನ್ನು ಕಾರ್ಯಗತಗೊಳಿಸಿರುವ ಭಾವಚಿತ್ರ ಕಾಣಬಹುದು. ಯುವಜನ ಸೇವಾ ಮತ್ತು ಕ್ರೀಡಾಧಿ ಕಾರಿ ಎಸ್‌.ಜಿ.ಲೋಣಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಸುಲೈಮಾನ್‌ ನದಾಫ್‌ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next