ಹುಣಸೂರು: ನಾಗರಹೊಳೆಯ ದಮ್ಮನಕಟ್ಟೆ, ಕಬಿನಿ ಬ್ಯಾಕ್ ವಾಟರ್ ನ ದೋಣಿ ವಿಹಾರ ಎಂದರೆ ಟಿಕೇಟ್ ಗಿಟ್ಟಿಸುವುದು ತುಸು ಪ್ರಯಾಸದ ಕೆಲಸವೇ. ಅದು ಆನ್ ಲೈನ್ ನಲ್ಲಿ ಬುಕ್ ಮಾಡಿದವರು ಬರದಿದ್ದ ವೇಳೆ ಮಾತ್ರ ನೇರವಾಗಿ ಸಫಾರಿಗೆ ತೆರಳಲು ಅವಕಾಶವಿರುತ್ತೆ. ಸಫಾರಿಗೆ ಬರುವವರು ಪಕ್ಕದ ಕಬಿನಿ ಬ್ಯಾಕ್ ವಾಟರ್ ನಲ್ಲಿ ದೋಣಿ ವಿಹಾರಕ್ಕೆ ತೆರಳುತ್ತಾರೆ.
ದೋಣಿ ವಿಹಾರದಲ್ಲಿ ಕರಿ ಕೊಕ್ಕರೆ. ಬಿಳಿಕೊಕ್ಕರೆ. ಪಾರಿವಾಳ. ಹದ್ದುಗಳು ಕಾಣಲು ಸಿಗುತ್ತವೆ. ನೀರು ನಾಯಿಗಳು ಕಾಣ ಸಿಗುವುದು ಅಪರೂಪವೇ ಸರಿ. ಆದರೆ ಎರಡು ದಿನಗಳ ಹಿಂದೆ ಅರಣ್ಯದೊಳಗೆ ಸಫಾರಿಗೆ ತೆರಳಿದ್ದವರು ಕಬಿನಿ ಬ್ಯಾಕ್ ವಾಟರ್ ಬಳಿಗೆ ತೆರಳಿದ್ದ ವೇಳೆ ನೀರು ನಾಯಿಗಳು ಹಿನ್ನೀರಿನಿಂದ ಮೇಲೆ ಬಂದು ದಡದಲ್ಲಿ ಆಟವಾಡುತ್ತಿರುವ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಖುಷ್ ಆಗಿ ತೆರಳಿದ್ದಾರೆ.
ನೀರು ನಾಯಿಗಳು ಎಳೆ ಬಿಸಿಲಿನಲ್ಲಿ ಮೈ ಒಡ್ಡುತ್ತಾ ಆಗಾಗ್ಗೆ ನೀರಿಗಿಳಿದು ಮತ್ತೆ ದಡದಲ್ಲಿ ಸ್ವಚ್ಚಂದವಾಗಿ ವಿಹರಿಸುತ್ತಿರುವ ದೃಶ್ಯವನ್ನು ಪರಿಸರವಾದಿ ಸಂದೇಶ್ ರವರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದು ವನ್ಯಪ್ರೀಯರು ಇದನ್ನು ಕಣ್ತುಂಬಿಕೊಳ್ಳಲು ವನ್ಯಜೀವಿ ಛಾಯಾಗ್ರಾಹಕ ರವಿಶಂಕರ್ ಮೂಲಕ ಉದಯವಾಣಿಗೆ ನೀಡಿದ್ದಾರೆ.
ಇದನ್ನೂ ಓದಿ: ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ