Advertisement

ರ್ಯಾಪರ್‌ ಚಂದನ್‌ ಶೆಟ್ಟಿ ನಿರಾಳ

11:29 AM Sep 05, 2018 | Team Udayavani |

ಬೆಂಗಳೂರು: “ಅಂತ್ಯ’ ಎಂಬ ಸಿನಿಮಾಕ್ಕಾಗಿ ಗಾಂಜಾ ಪರ ಹಾಡು ಹಾಡಿ ವಿವಾದಕ್ಕೆ ಸಿಲುಕಿದ್ದ ರ್ಯಾಪರ್‌ ಚಂದನ್‌ ಶೆಟ್ಟಿ ನಿರಾಳರಾಗಿದ್ದಾರೆ.

Advertisement

ಈ ಕುರಿತು ರ್ಯಾಪರ್‌ ಚಂದನ್‌ ಶೆಟ್ಟಿಗೆ ಹಿಂಬರಹ ನೀಡಿರುವ ಮಹಿಳೆ ಮತ್ತು ಮಾದಕ ದ್ರವ್ಯ ದಳ ಎಸಿಪಿ ಮೋಹನ್‌ ಕುಮಾರ್‌, ಅಂತ್ಯ ಸಿನಿಮಾದಲ್ಲಿ ಮಾದಕ ವಸ್ತು ಕುರಿತು ಹಾಡನ್ನು ಹಾಡಿದ್ದು, ಈ ಹಾಡಿನಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂಬ ಉದ್ದೇಶದಿಂದ ನಿಮ್ಮನ್ನು ವಿಚಾರಣೆ ಮಾಡಲಾಗಿತ್ತು. ನಿಮ್ಮ ಹೇಳಿಕೆಯನ್ನು ಪಡೆದು ವಿಚಾರಣೆ ಮುಕ್ತಾಯಗೊಳಿಸಲಾಗಿದೆ.

ಇನ್ಮುಂದೆ ಯಾವುದೇ ವಿಚಾರಣೆ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ವಿವಾದಾತ್ಮಕ ಹಾಡಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಹಾಡಿನಿಂದ ಪ್ರಚೋದನೆಗೊಂಡು ಯುವಕರು ಮಾದಕ ವ್ಯಸನಿಗಳಾಗುತ್ತಾರೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಆ.28ರಂದು ಚಂದನ್‌ ಶೆಟ್ಟಿ ವಿಚಾರಣೆಗೆ ಹಾಜರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next