Advertisement
2019-20ನೇ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದ ನದಿ ತಟದಲ್ಲಿ ಅನಧಿಕೃತವಾಗಿ ಕಟ್ಟಿಕೊಂಡಿದ್ದ ಮನೆಗಳು ಹಾನಿಯಾದ ಒಟ್ಟು 237 ಫಲಾನುಭವಿಗಳಿಗೆ ಜಿಲ್ಲೆಯ 5 ಸ್ಥಳಗಳಲ್ಲಿ ಜಾಗವನ್ನು ಗುರುತಿಸಿನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯವರಿಂದ ವ್ಯವಸ್ಥಿತವಾಗಿ ಅಳತೆಯ ನಿವೇಶನಗಳಿಗೆ ಬಡಾವಣೆ ವಿನ್ಯಾಸ ನಕ್ಷೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಅದೇ ರೀತಿ ಎ ಮತ್ತು ಬಿ ವೃಂದದ ಪಟ್ಟಿಯಲ್ಲಿರುವ ಮನೆಗಳಿಗೆ ಬಾಡಿಗೆ ಹಣವನ್ನು ಪಾವತಿಸುವ ಸಲುವಾಗಿ ಫೆ.10ರಂದುಬೆಂಗಳೂರಿನಲ್ಲಿಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಡಗು ಜಿಲ್ಲೆಗೆವಿಶೇಷ ಆದ್ಯತೆ ನೀಡಿ ತಿಂಗಳಿಗೆ ತಲಾ 5 ಸಾವಿರದಂತೆಗರಿಷ್ಠ 10 ತಿಂಗಳಿಗೆ 50 ಸಾವಿರ ರೂ. ಬಾಡಿಗೆ ಹಣ ಪಾವತಿಸಲು ತೀರ್ಮಾನಿಸಿದೆ. ಅದರಂತೆ 2019-20 ನೇ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಒಟ್ಟು 228 ಎ ಮತ್ತು ಬಿ ಕ್ಯಾಟಗರಿ ಮನೆಗಳ ಫಲಾನುಭವಿಗಳಿಗೆ ಮೊದಲನೇ ಹಂತದಲ್ಲಿ5 ತಿಂಗಳ ಬಾಡಿಗೆ ಹಣ ತಲಾ ರೂ.25ಸಾವಿರದಂತೆ ಒಟ್ಟು ರೂ.57ಲಕ್ಷ ರೂ.ಗಳನ್ನುಅವರವರ ಬ್ಯಾಂಕ್ ಖಾತೆಗಳಿಗೆರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ನೇರವಾಗಿ ಪಾವತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
Related Articles
ಅದರಂತೆ ಸೋಮವಾರಪೇಟೆ ತಾಲೂಕಿನ ಅಭ್ಯತ್‌ಮಂಗಲ ಗ್ರಾಮದ ಸ.ನಂ.87/2ರಲ್ಲಿ 8.22 ಎಕರೆ ಜಾಗವನ್ನು ಗುರುತಿಸಲಾಗಿದ್ದು, 128 ನಿವೇಶನಗಳನ್ನು ನೀಡಲಾಗುತ್ತದೆ. ನೆಲ್ಲಿಹುದಿಕೇರಿ, ವಾಲೂ°ರು, ನಂಜರಾಯಪಟ್ಟಣ ಬಸವನಹಳ್ಳಿಯ 117 ಫಲಾನುಭವಿಗಳಿಗೆ ಅಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವೀರಾಜಪೇಟೆಯ ಬಿ.ಶೆಎಟ್ಟಿಗೇರಿಯ ಸ.ನಂ.37/26ಪಿ1ರಲ್ಲಿ 6ಎಕರೆ ಜಾಗ ಗುರುತಿಸಲಾಗಿದ್ದು, ಇಲ್ಲಿ 125 ನಿವೇಶನಗಳನ್ನು ಒದಗಿಸಲು ಅವಕಾಶವಿದೆ. ಸಿದ್ದಾಪುರ, ಕರಡಿಗೋಡು, ಗುಯ್ಯ ಗ್ರಾಮದ 103 ಫಲಾನುಭವಿಗಳಿಗೆ ಅಲ್ಲಿ ಪುನರ್ವಸತಿ ಕಲ್ಪಿಸಲಾಗುತ್ತದೆ.
Advertisement
ವೀರಾಜಪೇಟೆ ತಾಲೂಕಿನ ಅರುವತ್ತೂಕ್ಲು ಗ್ರಾಮದಲ್ಲಿ 50 ಸೆಂಟ್ ಜಾಗ ಗುರುತಿಸಲಾಗಿದ್ದು,ತಿತಿಮತಿ, ಚೆನ್ನಂಗೊಲ್ಲಿ,ಕಾನೂರು, ಮತ್ತೂರು ಗ್ರಾಮ 9 ಫಲಾನುಭವಿ ಕುಟುಂಬಗಳಿಗೆ ಹಾಗೂಕೆದಮಳ್ಳೂರು ಗ್ರಾಮದ 8 ಸೆಂಟ್ ಜಾಗದಲ್ಲಿ ತೋರ ಗ್ರಾಮದ 3 ಮತ್ತು ಬಾಳುಗೋಡು ಗ್ರಾಮದಲ್ಲಿ 2.4/3ಸೆಂಟ್ ಜಾಗದಲ್ಲಿ ನಾಂಗಾಲ ಗ್ರಾಮದ ಒಂದು ಕುಟುಂಬಕ್ಕೆ ಪುನರ್ವಸತಿ ಕಲ್ಪಿಸಲಾಗುತ್ತದೆ ಎಂದು ಅನೀಸ್ ಕಣ್ಮಣಿ ಜಾಯ್ ಹೇಳಿದ್ದಾರೆ.
ಬಿ.ಶೆಟ್ಟಿಗೇರಿಗೆ ಭೇಟಿಅದೇ ರೀತಿ ಬಿ.ಶೆಟ್ಟಿಗೇರಿ ಗ್ರಾಮದಲ್ಲಿ ಗುರುತಿಸಲಾಗಿರುವ ಸ್ಥಳಕ್ಕೆಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಮತ್ತು ಇತರೆ ಅಧಿಕಾರಿಗಳನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲಿಸಿದ್ದು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯವರಿಗೆ ಬಡಾವಣೆ ವಿನ್ಯಾಸ ನಕ್ಷೆಯನ್ನು ತುರ್ತಾಗಿ ತಯಾರಿಸಲು ನಿರ್ದೇಶನ ನೀಡಲಾಗಿದೆ. ಉಳಿದಂತೆ ಅರ್ವತ್ತೂಕ್ಲು, ಕೆದಮುಳ್ಳೂರು ಮತ್ತು ಬಾಳುಗೋಡು ಗ್ರಾಮದ ಸರ್ಕಾರಿ ಜಾಗಗಳನ್ನು ಪುನರ್ವಸತಿ ಉದ್ದೇಶಕ್ಕೆ ಕಾಯ್ದಿರಿಸಲು ಕ್ರಮ ವಹಿಸಲಾಗಿದ್ದು, ಶೀಘ್ರದಲ್ಲಿ ಕಾಯ್ದಿರಿಸಿ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.