Advertisement

Rape: ಜಿತೇಂದ್ರ ನರೇನ್‌ ಜಾಮೀನು ಪ್ರಶ್ನಿಸಿದ್ದ ಅರ್ಜಿ ವಜಾ

09:05 PM Aug 24, 2023 | Team Udayavani |

ನವದೆಹಲಿ: ಅಂಡಮಾನ್‌ ನಿಕೋಬಾರ್‌ ದ್ವೀಪಸಮೂಹಗಳ ಮಾಜಿ ಮುಖ್ಯ ಕಾರ್ಯದರ್ಶಿ ಜಿತೇಂದ್ರ ನರೇನ್‌ಗೆ ಅತ್ಯಾಚಾರ ಪ್ರಕರಣವೊಂದರಲ್ಲಿ ಜಾಮೀನು ನೀಡಿದ್ದ ಕೋಲ್ಕತ ಹೈ ಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಗುರುವಾರ ವಜಾಗೊಳಿಸಿದೆ.

Advertisement

ನರೇನ್‌ಗೆ ಕೋಲ್ಕತ ಹೈಕೋರ್ಟ್‌ನ ಪೋರ್ಟ್‌ಬ್ಲೇರ್‌ ಸರ್ಕಿಟ್‌ ಬೆಂಚ್‌ ಫೆಬ್ರವರಿ 20ರಂದು ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ದೂರುದಾರ ಮಹಿಳೆ ಹಾಗೂ ರಾಜ್ಯದಿಂದ ಸುಪ್ರೀಂನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ, ನ್ಯಾಯಮೂರ್ತಿ ವಿಕ್ರಮ್‌ನಾಥ್‌ ಹಾಗೂ ನ್ಯಾಯಮೂರ್ತಿ ಎ.ಅಮಮನುಲ್ಲಾ ಅವರ ನ್ಯಾಯಪೀಠವು ಅರ್ಜಿಗಳನ್ನು ವಜಾಗೊಳಿಸಿ, ಪ್ರಕರಣ ಸಂಬಂಧಿಸಿದ ವಿಚಾರಣೆಯನ್ನು ತ್ವರಿತಗೊಳಿಸುವಂತೆ ವಿಚಾರಣೆ ನ್ಯಾಯಾಲಯಕ್ಕೆ ಸೂಚಿಸಿ, ಹೈಕೋರ್ಟ್‌ ಆದೇಶ ಎತ್ತಿ ಹಿಡಿದಿದೆ. ಜಾಮೀನು ಕುರಿತಂತೆ ಮತ್ತೆ ವಾದ-ಪ್ರತಿವಾದಗಳು ಪ್ರಕರಣದ ವಿಚಾರಣೆಯನ್ನು ವಿಳಂಬಗೊಳಿಸುವ ಸಾಧ್ಯತೆಯನ್ನೂ ಕೋರ್ಟ್‌ ಗಮನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next