Advertisement

ನಟಿಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ: ದೂರು

05:22 AM Jul 05, 2020 | Lakshmi GovindaRaj |

ಬೆಂಗಳೂರು: ನಟಿಯೊಬ್ಬರಿಗೆ ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅತ್ಯಾಚಾರವೆಸಗಿರುವ ಘಟನೆ ಜೆ.ಜೆ. ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜೆ.ಜೆ.ನಗರದ ಖಾಸಗಿ ಅಪಾರ್ಟ್‌ ಮೆಂಟ್‌ ನಿವಾಸಿ 30 ವರ್ಷದ ನಟಿ ನೀಡಿದ ದೂರಿನ ಮೇರೆಗೆ ನಾಯಂಡಹಳ್ಳಿ ನಿವಾಸಿ ಮೋಹಿತ್‌, ಆತನ ತಂದೆ ಮಹ  ದೇವ್‌, ತಾಯಿ ನಾಗವೇಣಿ ಹಾಗೂ ರಾಹುಲ್‌ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Advertisement

ಅತ್ಯಾಚಾರ ವಿಡಿಯೋ ಚಿತ್ರೀಕರಿಸಿಕೊಂಡಿರುವ  ಆರೋಪಿ, ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬ್ಲ್ಯಾಕ್‌ ಮೇಲ್‌ ಮಾಡಿ ಲಕ್ಷಾಂತರ ರೂ. ಸುಲಿಗೆ ಮಾಡಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ. 2018ರಲ್ಲಿ ಗಾಂಧಿ ಬಜಾರ್‌ ಕಾಫಿ ಡೇಗೆ ಹೋಗಿದ್ದಾಗ ಮೋಹಿತ್‌  ಪರಿಚಿತ ವಾಗಿ ಖಾಸಗಿ ಕಂಪನಿ ಸಿಇಒ ಎಂದು ಹೇಳಿಕೊಂಡಿದ್ದಾನೆ. ಕೆಲ ತಿಂಗಳ ನಂತರ ಕಂಪನಿ ಪ್ರಚಾರ ರಾಯ ಭಾರಿಯಾಗಿ ನಟಿಯನ್ನು ನೇಮಿಸಿಕೊಂಡಿದ್ದ.

2019ರ ಜ.15ರಂದು ಗೋವಾಕ್ಕೆ ಕರೆದೊಯ್ದು ಫೋಟೋ ಶೂಟ್‌ ಮಾಡಿಸಿ ಕಂಪನಿ ಯಲ್ಲಿ ಆರ್ಥಿಕ ಸಮಸ್ಯೆ ಆಗಿದೆ ಎಂದು ಹೇಳಿ 1.50 ಲಕ್ಷ ರೂ. ಪಡೆದಿದ್ದ. ಕಳೆದ ವರ್ಷ ಜೂ.22ರಂದು ಮೋಹಿತ್‌ ಹುಟ್ಟು ಹಬ್ಬವಿತ್ತು. ಅಲ್ಲದೇ ಮರುದಿನ ನಟಿ ಹುಟ್ಟುಹಬ್ಬವಿತ್ತು. ಒಟ್ಟಿಗೆ ಊಟ ಮಾಡಿದ್ದರು. ಈ ವೇಳೆ ತಂಪು  ಪಾನೀಯದಲ್ಲಿ ಮತ್ತು ಬರಿಸುವ ಔಷಧ ಹಾಕಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾರೆ.

ಬ್ಲ್ಯಾಕ್‌ಮೇಲ್‌: ಇತ್ತೀಚೆಗೆ ಮನೆಗೆ ಹೋಗಿದ್ದ ಆರೋಪಿ, ನಿನ್ನ ಮೇಲೆ ಅತ್ಯಾಚಾರ ಎಸಗಿದ್ದೇನೆ. ಆ ಎಲ್ಲಾ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀ ಕರಿಸಿಕೊಂಡಿದ್ದೇನೆ. ಕೇಳಿದಾಗ ಹಣ ಕೊಡಬೇಕು ಎಂದು ಬೆದರಿಕೆಯೊಡಿದ್ದಾನೆ. ಹೀಗೆ ಹೇಳಿ  ಇದುವರೆಗೂ ಬ್ಲ್ಯಾಕ್‌ ಮೇಲ್‌ ಮೂಲಕ ಆರೋಪಿಗೆ 20 ಲಕ್ಷ ರೂ. ಪಡೆದುಕೊಂಡಿದ್ದಾನೆ. ಇದೀಗ ಮತ್ತೆ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next