Advertisement

ಮುಂಬಯಿಗೆ ಇನ್ನಿಂಗ್ಸ್‌ ಜಯ

09:43 PM Dec 22, 2022 | Team Udayavani |

ಮುಂಬಯಿ: ಹೈದರಾಬಾದ್‌ ತಂಡದೆದುರಿನ ರಣಜಿ ಪಂದ್ಯದಲ್ಲಿ ಮುಂಬಯಿ ತಂಡವು ಇನ್ನಿಂಗ್ಸ್‌ ಮತ್ತು 217 ರನ್ನುಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನಿಂದ ಮುಂಬಯಿ “ಬಿ’ ಬಣದಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಜಯಭೇರಿ ಬಾರಿಸಿ ಒಟ್ಟು 13 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.

Advertisement

ಮುಂಬಯಿಯ ಬೃಹತ್‌ ಮೊತ್ತ ನೋಡಿಯೇ ಹೆದರಿದ್ದ ಹೈದರಾಬಾದ್‌ ತಂಡವು ಆರು ವಿಕೆಟಿಗೆ 173 ರನ್ನುಗಳಿಂದ ಮೂರನೇ ದಿನದಾಟ ಆರಂಭಿಸಿ 214 ರನ್ನಿಗೆ ಆಲೌಟಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ 437 ರನ್‌ ಹಿನ್ನಡೆ ಪಡೆದ ಕಾರಣ ಹೈದರಾಬಾದ್‌ ತಂಡ ಫಾಲೋಆನ್‌ ಪಡೆಯಿತು. ಶಮ್ಸ್‌ ಮುಲಾನಿ ಮತ್ತು ತನುಷ್‌ ಕೋಟ್ಯಾನ್‌ ಅವರ ಬಿಗು ದಾಳಿಗೆ ದ್ವಿತೀಯ ಇನ್ನಿಂಗ್ಸ್‌ನಲ್ಲೂ ನೆಲಕಚ್ಚಿದ ಹೈದರಾಬಾದ್‌ ಕೇವಲ 220 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು.

ಮೊದಲ ಇನ್ನಿಂಗ್ಸ್‌ನಲ್ಲಿ 94 ರನ್ನಿಗೆ 7 ವಿಕೆಟ್‌ ಕಿತ್ತು ಹೈದರಾಬಾದ್‌ನ ಕುಸಿತಕ್ಕೆ ಕಾರಣರಾದ ಮುಲಾನಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮತ್ತೆ 82 ರನ್ನಿಗೆ 4 ವಿಕೆಟ್‌ ಕಿತ್ತು ಗಮನ ಸೆಳೆದರು. ತನುಷ್‌ ಕೋಟ್ಯಾನ್‌ 82 ರನ್ನಿಗೆ 5 ವಿಕೆಟ್‌ ಹಾರಿಸಿದರು. ಇವರಿಬ್ಬರು ಸೇರಿ ಹೈದರಾಬಾದ್‌ಗೆ ಪ್ರಬಲ ಹೊಡೆತವಿಕ್ಕಿದರು.

ಸಂಕ್ಷಿಪ್ತ ಸ್ಕೋರು: ಮುಂಬಯಿ 6 ವಿಕೆಟಿಗೆ 651 ಡಿಕ್ಲೇರ್‌; ಹೈದರಾಬಾದ್‌ 214 ಮತ್ತು 220 (ರಾಹುಲ್‌ ಬುದ್ಧಿ 65, ತನ್ಮಯ್‌ ಅಗರ್ವಾಲ್‌ 39, ತನಯ್‌ ತ್ಯಾಗರಾಜನ್‌ 39 ಔಟಾಗದೆ, ಮುಲಾನಿ 82ಕ್ಕೆ 4, ತನುಷ್‌ ಕೋಟ್ಯಾನ್‌ 82ಕ್ಕೆ 5).

Advertisement

Udayavani is now on Telegram. Click here to join our channel and stay updated with the latest news.

Next