ಮುಂಬಯಿ ತಂಡವನ್ನು ಕೇವಲ 171 ರನ್ನಿಗೆ ಆಲೌಟ್ ಮಾಡಿಸಿದ ಬಳಿಕ ಬ್ಯಾಟಿಂಗ್ ಆರಂಭಿಸಿದ ಬರೋಡ ತಂಡವು ಆದಿತ್ಯ ವಾಗೊ¾àಡ್ ಮತ್ತು ಸ್ವಪ್ನಿಲ್ ಸಿಂಗ್ ಅವರ ಆಕರ್ಷಕ ಶತಕದಿಂದಾಗಿ 9 ವಿಕೆಟಿಗೆ 575 ರನ್ ಪೇರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
Advertisement
ಮೊದಲ ಇನ್ನಿಂಗ್ಸ್‌ನಲ್ಲಿ 404 ರನ್ ಹಿನ್ನಡೆ ಅನುಭವಿಸಿದ ಮುಂಬಯಿ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಕುಸಿಯಿತು. ಮೂರನೇ ದಿನದಾಟದ ಅಂತ್ಯಕ್ಕೆ ಮುಂಬಯಿ ನಾಲ್ಕು ವಿಕೆಟ್ ಕಳೆದುಕೊಂಡಿದ್ದು 102 ರನ್ ಗಳಿಸಿದೆ. ಇನ್ನೊಂದು ದಿನದ ಆಟ ಬಾಕಿ ಉಳಿದಿದ್ದು ಮುಂಬಯಿ ಸೋಲು ತಪ್ಪಿಸಲು ದಿನಪೂರ್ತಿ ಅಥವಾ ಇನ್ನುಳಿದ ಆರು ವಿಕೆಟ್ ನೆರವಿನಿಂದ 302 ರನ್ ಗಳಿಸಬೇಕಾಗಿದೆ.
ನಾಯಕ ಆದಿತ್ಯ ತಾರೆ ಅವರನ್ನು ಕಳೆದುಕೊಂಡ ಬಳಿಕ ಪೃಥ್ವಿ ಶಾ ಮತ್ತು ಅಜಿಂಕ್ಯ ರಹಾನೆ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಆದರೆ ಅವರಿಬ್ಬರು ದ್ವಿತೀಯ ವಿಕೆಟಿಗೆ 62 ರನ್ ಪೇರಿಸಿದ ಬಳಿಕ ಬೇರ್ಪಟ್ಟರು. ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದ ಪೃಥ್ವಿ ಶಾ 56 ರನ್ ಗಳಿಸಿ ಸ್ವಪ್ನಿಲ್ ಸಿಂಗ್‌ಗೆ ಕ್ಲೀನ್‌ಬೌಲ್ಡ್ ಆದರು. ಈ ವಿಕೆಟ್ ಪತನದ ಬಳಿಕ ಮುಂಬಯಿ ಹಠಾತ್ ಕುಸಿಯಿತು. ಮುಂದಿನ 15 ರನ್ ಗಳಿಸುವಷ್ಟರಲ್ಲಿ ತಂಡ ಇನ್ನೆರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಶ್ರೇಯಸ್ ಅಯ್ಯರ್ ಮತ್ತು ಗೋಹಿಲ್ ಬೇಗನೇ ಔಟಾದರು. ಟೆಸ್ಟ್‌ನಲ್ಲಿ ಆಡಿ ಅನುಭವವಿರುವ ಅಜಿಂಕ್ಯ ರಹಾನೆ 28 ರನ್ ಗಳಿಸಿ ಆಡುತ್ತಿದ್ದಾರೆ. ಇದೀಗ ಮುಂಬಯಿ ಅವರನ್ನು ಅವಲಂಭಿಸಿದೆ. ಅವರಿಗೆ ಉಳಿದ ಆಟಗಾರರು ಉತ್ತಮ ಬೆಂಬಲ ನೀಡಿದರೆ ಮುಂಬಯಿ ಸೋಲು ತಪ್ಪಿಸಬಹುದು.
Related Articles
Advertisement