Advertisement

ಇಂದಿನಿಂದ ರಣಜಿ ಟ್ರೋಫಿ ಕ್ರಿಕೆಟ್‌: ಕರ್ನಾಟಕದ ಎದುರಾಳಿ ಪಂಜಾಬ್‌

12:15 AM Jan 05, 2024 | Team Udayavani |

ಬೆಂಗಳೂರು: ದೇಶೀಯ ಕ್ರಿಕೆಟ್‌ ಸ್ಪರ್ಧೆಯಾದ ರಣಜಿ ಟ್ರೋಫಿ ಕ್ರಿಕೆಟ್‌ ಕೂಟದ ಪಂದ್ಯಗಳು ದೇಶದ ವಿವಿಧ ಕಡೆಗಳಲ್ಲಿ ಶುಕ್ರವಾರದಿಂದ ಆರಂಭವಾಗಲಿದೆ. ರಣಜಿ ಟ್ರೋಫಿ ಯಲ್ಲಿ 32 ತಂಡಗಳು ಭಾಗವಹಿ ಸುತ್ತಿದ್ದು ತಲಾ ಎಂಟರಂತೆ ನಾಲ್ಕು ಬಣಗಳಲ್ಲಿ ವಿಂಗಡಿಸಲಾಗಿದೆ. ಪ್ರತಿ ಬಣದಲ್ಲಿ ಪ್ರತಿಯೊಂದು ತಂಡವು ಏಳು ಪಂದ್ಯಗಳನ್ನು ಆಡಲಿದೆ. ಪ್ರತಿ ಬಣದ ಅಗ್ರ ಎರಡು ತಂಡಗಳು ಕ್ವಾರ್ಟರ್‌ಫೈನಲಿಗೇರಲಿವೆ.

Advertisement

ಕರ್ನಾಟಕ ತಂಡವು ಎಲೈಟ್‌ “ಸಿ’ ಬಣದಲ್ಲಿದೆ. ಈ ಬಣದಲ್ಲಿ ಕರ್ನಾಟಕವಲ್ಲದೇ ಪಂಜಾಬ್‌, ರೈಲ್ವೇಸ್‌, ತಮಿಳುನಾಡು, ಗೋವಾ, ಗುಜ ರಾತ್‌, ತ್ರಿಪುರ ಮತ್ತು ಚಂಡೀ ಗಢ ತಂಡಗಳಿವೆ. ಶುಕ್ರವಾರದಿಂದ ಆರಂಭ ವಾಗುವ ಆರಂಭಿಕ ಪಂದ್ಯದಲ್ಲಿ ಕರ್ನಾಟಕ ತಂಡವು ಪಂಜಾಬ್‌ ತಂಡದ ಸವಾಲನ್ನು ಎದುರಿ ಸಲಿದೆ. ಈ ಪಂದ್ಯವು ಹುಬ್ಬಳ್ಳಿ ಯಲ್ಲಿ ನಡೆಯಲಿದೆ.

ಕಳೆದ ಬಾರಿ ಲೀಗ್‌ ಹಂತದಲ್ಲಿ ಅಮೋಘ ನಿರ್ವಹಣೆ ನೀಡಿದ್ದ ಕರ್ನಾಟಕ ತಂಡವು ಮುಂದಿನ ಹಂತಕ್ಕೇರಲು ವಿಫ‌ಲವಾಗಿತ್ತು. ಈ ಬಾರಿ ತಂಡ ಯಾವ ರೀತಿ ನಿರ್ವಹಣೆ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಹಾಲಿ ಚಾಂಪಿಯನ್‌ ಸೌರಾಷ್ಟ್ರ “ಎ’ ಬಣದಲ್ಲಿದ್ದರೆ ಮುಂಬಯಿ ತಂಡವು “ಬಿ’ ಬಣದಲ್ಲಿದೆ. “ಬಿ’ ಬಣದಲ್ಲಿ ಮುಂಬಯಿ ಅಲ್ಲದೇ ಬೆಂಗಾಲ, ಆಂಧ್ರ, ಕೇರಳ, ಛತ್ತೀಸ್‌ಗಢ, ಉತ್ತರ ಪ್ರದೇಶ, ಆಸ್ಸಾಂ ಮತ್ತು ಬಿಹಾರ ತಂಡಗಳಿವೆ. ಮುಂಬಯಿ ಮೊದಲ ಪಂದ್ಯದಲ್ಲಿ ಬಿಹಾರವನ್ನು ಎದುರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next