Advertisement
“ಸಿ’ ಬಣದಲ್ಲಿ ಸದ್ಯ 22 ಅಂಕಗ ಳೊಂದಿಗೆ ದ್ವಿತೀಯ ಸ್ಥಾನದಲ್ಲಿರುವ ತಮಿಳುನಾಡು ತಂಡವು ಪಂಜಾಬ್ ತಂಡವನ್ನು ಎದುರಿಸಲಿದ್ದರೆ 19 ಅಂಕಗಳೊಂದಿಗೆ ಮೂರನೇ ಸ್ಥಾನ ದಲ್ಲಿರುವ ಗುಜರಾತ್ ತಂಡ ಗೋವಾ ತಂಡವನ್ನು ಎದುರಿಸಲಿದೆ. ಪಂಜಾಬ್ ಆಡಿದ ಆರು ಪಂದ್ಯಗಳಲ್ಲಿ ಒಂದರಲ್ಲಿ ಜಯ ಸಾಧಿಸಿದ್ದರೆ ಚಂಡೀಗಢ ಮತ್ತು ಗೋವಾ ಗೆಲುವು ಕಾಣಲಿಲ್ಲ. ಹೀಗಾಗಿ ಕರ್ನಾಟಕ, ತಮಿಳುನಾಡು ಮತ್ತು ಗುಜರಾತ್ ಈ ಮಹತ್ವದ ಪಂದ್ಯದಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಒಂದು ವೇಳೆ ಫಲಿತಾಂಶದಲ್ಲಿ ಏನಾ ದರೂ ಬದಲಾವಣೆಯಾದರೆ “ಸಿ’ ಬಣದಿಂದ ಯಾರು ಮುಂದಿನ ಸುತ್ತಿಗೇರು ತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಲಿದೆ.
“ಬಿ’ ಬಣದಲ್ಲಿ ಆಡಿದ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು 30 ಅಂಕ ಪಡೆದಿರುವ ಮುಂಬಯಿ ತಂಡವು ಮುಂದಿನ ಹಂತಕ್ಕೇರಿದೆ. ಅದು ಅಂತಿಮ ಸುತ್ತಿನ ಪಂದ್ಯದಲ್ಲಿ ಅಸ್ಸಾಂ ವಿರುದ್ಧ ಆಡಲಿದೆ. 25 ಅಂಕ ಹೊಂದಿರುವ ಆಂಧ್ರ ಪ್ರದೇಶ ಕೂಡ ಮುನ್ನಡೆಯುವುದು ಖಚಿತವಾಗಿದೆ. ಆಂಧ್ರ ಅಂತಿಮ ಸುತ್ತಿನ ಪಂದ್ಯದಲ್ಲಿ ಕೇರಳವನ್ನು ಎದುರಿಸಲಿದೆ. ಮೂರನೇ ಸ್ಥಾನದಲ್ಲಿರುವ ಕೇರಳ 14 ಅಂಕ ಹೊಂದಿದೆ.