Advertisement
ಆದರೆ ಕೆಎಲ್ ರಾಹುಲ್ ಅವರನ್ನು 16 ಸದಸ್ಯರ ರಣಜಿ ತಂಡದಲ್ಲಿ ಹೆಸರಿಸಲಾಗಿಲ್ಲ. ಭಾರತ ತಂಡವು ಮುಂದಿನ ದಿನಗಳಲ್ಲಿ ಅಘಾ^ನಿಸ್ಥಾನ ಮತ್ತು ಇಂಗ್ಲೆಂಡ್ ವಿರುದ್ಧ ಆಡಲಿರು ವುದರಿಂದ ಕೆಎಲ್ ರಾಹುಲ್ ಅವರನ್ನು ರಣಜಿಗೆ ಪರಿಗಣಿಸಲಾಗಿಲ್ಲ ಎಂದು ತಿಳಿದುಬಂದಿದೆ.
ಕರ್ನಾಟಕ ತಂಡವು ಜ. 5ರಿಂದ 8ರ ವರೆಗೆ ಹುಬ್ಬಳ್ಳಿಯಲ್ಲಿ ನಡೆಯಲಿರುವ . ಮೊದಲ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಎದುರಿಸಲಿದೆ. ದ್ವಿತೀಯ ಪಂದ್ಯದಲ್ಲಿ ಕರ್ನಾಟಕವು ಅಹ್ಮದಾಬಾದ್‌ನಲ್ಲಿ ಗುಜರಾತ್ ವಿರುದ್ಧ ಆಡಲಿದೆ. ಈ ಪಂದ್ಯವು ಜ. 12ರಿಂದ 15ರ ವರೆಗೆ ಜರಗಲಿದೆ. ಮಾಜಿ ಬ್ಯಾಟ್ಸ್ ಮನ್ ಪಿ.ವಿ. ಶಶಿಕಾಂತ್ ತಂಡದ ಕೋಚ್ ಆಗಿ ಉಳಿಸಿಕೊಳ್ಳಲಾಗಿದೆ. ಕರ್ನಾಟಕ ತಂಡ: ಅಗರ್ವಾಲ್ (ನಾಯಕ), ರವಿಕುಮಾರ್ ಸಮರ್ಥ, ಪಡಿಕ್ಕಲ್, ನಿಕಿನ್ ಜೋಸ್, ಮನಿಷ್ ಪಾಂಡೆ, ಶುಭಾಂಗ್ ಪಾಂಡೆ, ಶರತ್ ಶ್ರೀನಿವಾಸ್, ವೈಶಾಖ್ ವಿಜಯಕುಮಾರ್, ವಾಸುಕಿ ಕೌಶಿಕ್, ವಿದ್ವತ್ ಕಾವೇರಪ್ಪ, ಕೆ. ಶಶಿಕುಮಾರ್, ಸುಜಯ್ ಸಟೆರಿ, ಡಿ. ನಿಶ್ಚಲ್, ಎಂ. ವೆಂಕಟೇಶ್, ಕಿಶನ್ ಎಸ್. ಬದರೆ, ಎ.ಸಿ. ರೋಹಿತ್ ಕುಮಾರ್.