Advertisement

ಬರೋಡಾ ತಂಡದಿಂದ ಇರ್ಫಾನ್‌ ಉಚ್ಛಾಟನೆ!

06:55 AM Oct 31, 2017 | |

ವಡೋದರ: ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಅವರನ್ನು ಬರೋಡಾ ರಣಜಿ ಕ್ರಿಕೆಟ್‌ ತಂಡದ ನಾಯಕತ್ವದಿಂದ ದಿಢೀರನೆ ಕೆಳಕ್ಕಿಳಿಸಲಾಗಿದೆ. ಅಷ್ಟೇ ಅಲ್ಲ, ಅವರನ್ನು ತಂಡದಿಂದಲೂ ಕೈಬಿಡಲಾಗಿದೆ. ತ್ರಿಪುರ ವಿರುದ್ಧದ ಮುಂದಿನ ಪಂದ್ಯಕ್ಕಾಗಿ ಪಠಾಣ್‌ ಬದಲು ದೀಪಕ್‌ ಹೂಡಾ ಅವರನ್ನು ನೂತನ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.

Advertisement

ಪ್ರಸಕ್ತ ಋತುವಿನ ಮೊದಲೆರಡು ಪಂದ್ಯಗಳಲ್ಲಿ ಇರ್ಫಾನ್‌ ಬರೋಡಾ ತಂಡವನ್ನು ಮುನ್ನಡೆಸಿದ್ದರು. ಇವರ ನಾಯಕತ್ವದಲ್ಲಿ ತಂಡ ಕಳಪೆ ಪ್ರದರ್ಶನ ನೀಡಿತ್ತು.ಯಾವ ಕಾರಣದಿಂದ ತಂಡದಿಂದ ತನ್ನನ್ನು ನಾಯಕತ್ವದಿಂದ ಕೆಳಕ್ಕಿಳಿಸಿ ಕೈಬಿಟ್ಟಿದ್ದಾರೆ ಎನ್ನುವುದೇ ತಿಳಿಯುತ್ತಿಲ್ಲ ಎಂದು ಇರ್ಫಾನ್‌ ಪಠಾಣ್‌ ಪ್ರತಿಕ್ರಿಯಿಸಿದ್ದಾರೆ.

ಇದು ಆಯ್ಕೆ ರಾಜಕೀಯವಾಗಿರಬಹದೆಂದು ಮೇಲ್ನೋಟಕ್ಕೆ ತಿಳಿಯುತ್ತದೆ. ಆಂಧ್ರಪ್ರದೇಶ ವಿರುದ್ಧದ ರಣಜಿ ಪಂದ್ಯಕ್ಕೆ ನಿರ್ದಿಷ್ಟ ಸ್ಪಿನ್ನರ್‌ ಒಬ್ಬನನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳುವಂತೆ ಆಯ್ಕೆ ಮಂಡಳಿ ಸೂಚಿಸಿದರೂ ಪಠಾಣ್‌ ಇದಕ್ಕೆ ಒಪ್ಪಿರಲಿಲ್ಲ ಎನ್ನಲಾಗಿದೆ. ಪಠಾಣ್‌ ಉಚ್ಛಾಟನೆಗೆ ಕ್ರಿಕೆಟಿಗೆ ಹೊರತಾದ ಕಾರಣಗಳಿರಬಹುದು ಎಂದೂ ಊಹಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next