Advertisement

Ranji; ಚಂಡೀಗಢ ವಿರುದ್ಧ ಮನೀಷ್‌ ಪಾಂಡೆ ಅಜೇಯ ಶತಕ

11:08 PM Feb 17, 2024 | Team Udayavani |

ಹುಬ್ಬಳ್ಳಿ: ಮನೀಷ್‌ ಪಾಂಡೆ ಅಜೇಯ ಶತಕವೊಂದನ್ನು ಬಾರಿಸಿ ಚಂಡೀಗಢ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕವನ್ನು ಸುಸ್ಥಿತಿಯತ್ತ ಕೊಂಡೊಯ್ದಿದ್ದಾರೆ. ಚಂಡೀಗಢದ 267 ರನ್ನುಗಳ ಮೊತ್ತಕ್ಕೆ ಜವಾಬು ನೀಡಿದ ಕರ್ನಾಟಕ 2ನೇ ದಿನದಾಟದ ಅಂತ್ಯಕ್ಕೆ 3 ವಿಕೆಟಿಗೆ 268 ರನ್‌ ಗಳಿಸಿ ಮುನ್ನಡೆಗೆ ಮುಹೂರ್ತ ವಿರಿಸಿದೆ. ಪಾಂಡೆ 102 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

Advertisement

ವೈಶಾಖ್‌ ವಿಜಯ್‌ಕುಮಾರ್‌ ಮತ್ತು ಹಾರ್ದಿಕ್‌ ರಾಜ್‌ ತಲಾ 4 ವಿಕೆಟ್‌ ಉರುಳಿಸಿ ಚಂಡೀಗಢವನ್ನು ಸಾಮಾನ್ಯ ಮೊತ್ತಕ್ಕೆ ತಡೆದು ನಿಲ್ಲಿಸಿದರು.
ಆರ್‌. ಸಮರ್ಥ್ (4) ಹೊರತು ಪಡಿಸಿ ಕರ್ನಾಟಕದ ಆಟಗಾರರೆಲ್ಲ ಉತ್ತಮ ಪ್ರದರ್ಶನ ನೀಡಿದರು. ನಾಯಕ ಮಾಯಾಂಕ್‌ ಅಗರ್ವಾಲ್‌ ಅರ್ಧ ಶತಕ ಬಾರಿಸಿದರೆ (57), ನಿಕಿನ್‌ ಜೋಸ್‌ 37 ಮಾಡಿದರು. ಹಾರ್ದಿಕ್‌ ರಾಜ್‌ ಅರ್ಧ ಶತಕವನ್ನು ಸಮೀಪಿಸಿದ್ದಾರೆ (ಬ್ಯಾಟಿಂಗ್‌ 49).

153 ರನ್‌ ಜತೆಯಾಟ
ಮನೀಷ್‌ ಪಾಂಡೆ ಆಕ್ರಮಣಕಾರಿ ಆಟದ ಮೂಲಕ ಚಂಡೀಗಢದ ಮೇಲೆರಗಿದರು. ಅವರ 102 ರನ್‌ ಕೇವಲ 101 ಎಸೆತಗಳಿಂದ ಬಂದಿದೆ. ಸಿಡಿಸಿದ್ದು 14 ಬೌಂಡರಿ ಹಾಗೂ 3 ಸಿಕ್ಸರ್‌.

ಅಗರ್ವಾಲ್‌ ಔಟಾದ ಬಳಿಕ ಜತೆಗೂಡಿದ ಪಾಂಡೆ-ಹಾರ್ದಿಕ್‌ ಜೋಡಿ ಕರ್ನಾಟಕದ ಸರದಿಯನ್ನು ಬೆಳೆಸುತ್ತ ಹೋಯಿತು. ಇವರು ಮುರಿಯದ 4ನೇ ವಿಕೆಟಿಗೆ 153 ರನ್‌ ಪೇರಿಸಿದ್ದಾರೆ.

ಅಗರ್ವಾಲ್‌ – ಜೋಸ್‌ 2ನೇ ವಿಕೆಟಿಗೆ 70 ರನ್‌ ಪೇರಿಸಿ ಮೊದಲ ಹಂತದ ರಕ್ಷಣೆ ಒದಗಿಸಿದರು. ಅಗರ್ವಾಲ್‌ ಅವರ 57 ರನ್‌ 90 ಎಸೆತಗಳಿಂದ ಬಂತು (9 ಬೌಂಡರಿ, 1 ಸಿಕ್ಸರ್‌).

Advertisement
Advertisement

Udayavani is now on Telegram. Click here to join our channel and stay updated with the latest news.

Next