Advertisement

ರಣಜಿ ಫೈನಲ್‌; 230 ರನ್‌ ಮುನ್ನಡೆ ಗಳಿಸಿದ ಸೌರಾಷ್ಟ್ರ

10:53 PM Feb 18, 2023 | Team Udayavani |

ಕೋಲ್ಕತಾ: ಬಂಗಾಲ ವಿರುದ್ಧದ ರಣಜಿ ಫೈನಲ್‌ನಲ್ಲಿ ಸೌರಾಷ್ಟ್ರ 230 ರನ್ನುಗಳ ದೊಡ್ಡ ಮೊತ್ತದ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಗಿದೆ.

Advertisement

ದ್ವಿತೀಯ ಇನ್ನಿಂಗ್ಸ್‌ ಆರಂಭಿ ಸಿರುವ ಬಂಗಾಲ 4 ವಿಕೆಟಿಗೆ 169 ರನ್‌ ಗಳಿಸಿ ತೃತೀಯ ದಿನದಾಟ ಮುಗಿಸಿದ್ದು, ಇನ್ನೂ 61 ರನ್‌ ಹಿನ್ನಡೆಯಲ್ಲಿದೆ.

ಬಂಗಾಲದ ದ್ವಿತೀಯ ಸರದಿಯ ಆರಂಭವೂ ಆಘಾತ ಕಾರಿಯಾಗಿತ್ತು. 47 ರನ್‌ ಆಗುವಷ್ಟರಲ್ಲಿ 3 ವಿಕೆಟ್‌ ಉರುಳಿ ಹೋಯಿತು. ಆದರೆ ಅನುಸ್ತೂಪ್‌ ಮಜುಮಾರ್‌, ನಾಯಕ ಮನೋಜ್‌ ತಿವಾರಿ ಸೇರಿಕೊಂಡು ತಂಡವನ್ನು ಆಧರಿಸಿ ನಿಂತರು. ಈ ಜೋಡಿಯಿಂದ 4ನೇ ವಿಕೆಟಿಗೆ 99 ರನ್‌ ಹರಿದು ಬಂತು.

ಅನುಸ್ತೂಪ್‌ 61 ರನ್‌ ಬಾರಿಸಿದರು (101 ಎಸೆತ, 8 ಬೌಂಡರಿ). ಮನೋಜ್‌ ತಿವಾರಿ 57 ರನ್‌ (129 ಎಸೆತ, 9 ಬೌಂಡರಿ) ಮತ್ತು ಶಾಬಾಜ್‌ ಅಹ್ಮದ್‌ 13 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇದು ಬಂಗಾಲದ ಕೊನೆಯ ಬ್ಯಾಟಿಂಗ್‌ ಸ್ಪೆಷಲಿಸ್ಟ್‌ ಜೋಡಿಯಾಗಿದೆ.

ಸೌರಾಷ್ಟ್ರದ ನಾಯಕ ಜೈದೇವ್‌ ಉನಾದ್ಕತ್‌ ಮತ್ತು ಚೇತನ್‌ ಸಕಾರಿಯಾ ತಲಾ 2 ವಿಕೆಟ್‌ ಉರುಳಿಸಿ ಬಂಗಾಲಕ್ಕೆ ಆಘಾತವಿಕ್ಕಿದರು.

Advertisement

ಸೌರಾಷ್ಟ್ರ ಕುಸಿತ
ಇದಕ್ಕೂ ಮುನ್ನ 5ಕ್ಕೆ 317 ರನ್‌ ಗಳಿಸಿ ದ್ವಿತೀಯ ದಿನದಾಟ ಮುಗಿಸಿದ್ದ ಸೌರಾಷ್ಟ್ರ, ಬಹಳ ಬೇಗನೇ ವಿಕೆಟ್‌ ಕಳೆದುಕೊಳ್ಳತೊಡಗಿತು. 81 ರನ್‌ ಮಾಡಿದ್ದ ಅರ್ಪಿತ್‌ ವಸವಾಡ ಅದೇ ಮೊತ್ತಕ್ಕೆ ವಾಪಸಾದರು. ಚಿರಾಗ್‌ ಜಾನಿ ಕೇವಲ 3 ರನ್‌ ಸೇರಿಸಿ ನಿರ್ಗಮಿಸಿದರು (60). ಪ್ರೇರಕ್‌ ಮಂಕಡ್‌ 33, ಕೊನೆಯ ಆಟಗಾರ ಧರ್ಮೇಂದ್ರಸಿನ್ಹ ಜಡೇಜ 29 ರನ್‌ ಮಾಡಿದ್ದರಿಂದ ಮೊತ್ತ 400ರ ಗಡಿ ದಾಟಿತು.

ಮುಕೇಶ್‌ ಕುಮಾರ್‌ 4, ಆಕಾಶ್‌ ದೀಪ್‌ ಮತ್ತು ಇಶಾನ್‌ ಪೊರೆಲ್‌ ತಲಾ 3 ವಿಕೆಟ್‌ ಕಿತ್ತರು.

ಸಂಕ್ಷಿಪ್ತ ಸ್ಕೋರ್‌: ಬಂಗಾಲ-174 ಮತ್ತು 4 ವಿಕೆಟಿಗೆ 169 (ಮಜುಮಾªರ್‌ 61, ತಿವಾರಿ ಬ್ಯಾಟಿಂಗ್‌ 57, ಉನಾದ್ಕತ್‌ 47ಕ್ಕೆ 2, ಸಕಾರಿಯಾ 50ಕ್ಕೆ 2). ಸೌರಾಷ್ಟ್ರ-404 (ವಸವಾಡ 81, ಜಾನಿ 60, ಜಾಕ್ಸನ್‌ 59, ಹಾರ್ವಿಕ್‌ 50, ಮುಕೇಶ್‌ 111ಕ್ಕೆ 4, ಪೊರೆಲ್‌ 86ಕ್ಕೆ 3, ಆಕಾಶ್‌ ದೀಪ್‌ 111ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next