ತಂಡಗಳನ್ನು 5 ಗುಂಪುಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ 4 “ಎಲೈಟ್’ ವಿಭಾಗಗಳಿದ್ದರೆ, ಒಂದು ಪ್ಲೇಟ್ ವಿಭಾಗವಾಗಿದೆ. ಕರ್ನಾಟಕ “ಸಿ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ದಕ್ಷಿಣ ವಲಯದ ಮತ್ತೂಂದು ಪ್ರಮುಖ ತಂಡವಾದ ತಮಿಳುನಾಡು ಕೂಡ ಇದೇ ವಿಭಾಗದಲ್ಲಿದೆ. ಫೆ. 19ರ ತನಕ ಲೀಗ್ ಪಂದ್ಯಗಳು ನಡೆಯಲಿದ್ದು, ಫೆ. 23ರಂದು ನಾಕೌಟ್ ಹಣಾಹಣಿ ಮೊದಲ್ಗೊಳ್ಳಲಿದೆ.
Advertisement
4 ಎಲೈಟ್ ವಿಭಾಗಗಳಲ್ಲಿ ಮೊದ ಲೆರಡು ಸ್ಥಾನ ಸಂಪಾದಿಸಿದ ತಂಡ ಗಳು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ.
ಎಲೈಟ್ “ಬಿ’ ವಿಭಾಗ: ಬಂಗಾಲ, ಆಂಧ್ರಪ್ರದೇಶ, ಮುಂಬಯಿ, ಕೇರಳ, ಛತ್ತೀಸ್‌ಗಢ, ಉತ್ತರಪ್ರದೇಶ, ಆಸ್ಸಾಂ, ಬಿಹಾರ.
ಎಲೈಟ್ “ಸಿ’ ವಿಭಾಗ: ಕರ್ನಾಟಕ, ಪಂಜಾಬ್, ರೈಲ್ವೇಸ್, ತಮಿಳುನಾಡು, ಗೋವಾ, ಗುಜರಾತ್, ತ್ರಿಪುರ, ಚಂಡೀಗಢ.
ಎಲೈಟ್ “ಡಿ’ ವಿಭಾಗ: ಮಧ್ಯ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಬರೋಡ, ದಿಲ್ಲಿ, ಒಡಿಶಾ, ಪುದುಚೇರಿ, ಜಮ್ಮು ಮತ್ತು ಕಾಶ್ಮೀರ.
ಪ್ಲೇಟ್ ವಿಭಾಗ: ನಾಗಾಲ್ಯಾಂಡ್, ಹೈದರಾಬಾದ್, ಮೇಘಾಲಯ, ಸಿಕ್ಕಿಂ, ಮಿಜೋರಾಂ, ಅರುಣಾ ಚಲಪ್ರದೇಶ.