Advertisement

ರಂಗಿತರಂಗ ಪ್ರಕಾಶ್‌ ಹೊಸ ಚಿತ್ರಕ್ಕೆ ತಯಾರಿ

04:00 AM May 26, 2020 | Lakshmi GovindaRaj |

ರಂಗಿತರಂಗ ಚಿತ್ರದ ನಿರ್ಮಾಪಕ ಅವನೇ ಶ್ರೀಮನ್ನಾರಾಯಣ ಚಿತ್ರದ ಸಹ ನಿರ್ಮಾಪಕ ಕೆ.ಎಚ್‌ ಪ್ರಕಾಶ್‌ ಶ್ರೀದೇವಿ ಎಂಟರ್‌ ಟೈನರ್ಸ್‌ ಬ್ಯಾನರ್‌ ಅಡಿ ಸೈಕಲಾಜಿಕಲ್‌ ಥ್ರಿಲ್ಲರ್‌ ಚಿತ್ರ  ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಜಿ. ಭರತ್‌ ಈ  ಚಿತ್ರದ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಹಿಂದೆ ರೇಡಿಯೋ ಮತ್ತು ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿರುವ ಭರತ್‌ ಅದರ ಆಧಾರದ ಮೇಲೆ ಈ ಚಿತ್ರದ ನಿರ್ದೇಶನಕ್ಕೆ ಮುಂದಾಗಿದ್ದಾರೆ.

Advertisement

ಇದೊಂದು  ಕಾಮಿಡಿ ಹಾರರ್‌ ಚಿತ್ರವಾಗಿದ್ದು, ಸದ್ಯ ಇದರ ಪ್ರೀ-ಪ್ರೊಡಕ್ಷನ್‌ ಕೆಲಸಗಳು ತೆರೆಮರೆಯಲ್ಲಿ ನಡೆಯುತ್ತಿದೆ.   ಕಾಡಿನಲ್ಲಿರುವ 103 ವರ್ಷದ ಹಳೆಯ ಬ್ರಿಟಿಷ್‌ ಪ್ರಾಚ್ಯ ಸಂಶೋಧನಾ ಕಟ್ಟಡದಲ್ಲಿ ನಡೆಯುವ ರಹಸ್ಯ ಘಟನಾವಳಿಗಳ ಕುರಿತ  ಕಥೆ ಇದಾಗಿದೆ. ಭಯ ಮತ್ತು ಹಾಸ್ಯ  ಮಿಶ್ರಿತ ಚಿತ್ರ ಇದಾಗಿದೆ, ದೆವ್ವದ ಇರುವಿಕೆ ಕುರಿತಂತೆ ಪ್ರಶ್ನೆಗಳನ್ನು ಹುಟ್ಟುಹಾಕಲಿದೆ. ಚಿತ್ರದ ಶೂಟಿಂಗ್‌ಗಾಗಿ ಈಗಾಗಲೇ ಊಟಿ ಸೇರಿದಂತೆ ಕೆಲ ಲೋಕೇಶನ್‌ ಗುರುತಿಸಲಾಗಿದ್ದು, ಲಾಕ್‌ ಡೌನ್‌  ಮುಗಿದ ಬಳಿಕ ಶೂಟಿಂಗ್‌ ಶುರು ಮಾಡುವ ಯೋಚನೆಯಲ್ಲಿದ್ದೇವೆ ಎನ್ನುತ್ತಾರೆ ನಿರ್ದೇಶಕ ಭರತ್‌.

ಇನ್ನು ಚಿತ್ರಕ್ಕಾಗಿ ಅಗತ್ಯವಿರುವ ಗ್ರೌಂಡ್‌ ವರ್ಕ್‌ ಮಾಡುತ್ತಿದ್ದೇವೆ, ಸದ್ಯ ತಂತ್ರಜ್ಞರು  ಮತ್ತು ಕಲಾವಿದರ ಆಯ್ಕೆ ಮಾಡಬೇಕಾಗಿದೆ.  ಶೀಘ್ರದಲ್ಲಿಯೇ ಸಿನಿಮಾಗಾಗಿ ಆಡಿಶನ್‌ ಆರಂಭವಾಗಲಿದೆ. ಆದಷ್ಟು ಬೇಗ ಸಿನಿಮಾದ ಶೂಟಿಂಗ್‌ ಶುರು  ಮಾಡಲಿದ್ದೇವೆ ಎಂದಿದ್ದಾರೆ ನಿರ್ಮಾಪಕ ಪ್ರಕಾಶ್‌.

Advertisement

Udayavani is now on Telegram. Click here to join our channel and stay updated with the latest news.

Next