Advertisement
ರಾಜಸ್ಥಾನಿ ಕಲಾವಿದರು, ಕುಶಲಕರ್ಮಿಗಳು ಪ್ರತಿಭಾ ಪ್ರದರ್ಶನ ನೀಡಲಿದ್ದಾರೆ. ಇದ್ದಿಲನ್ನು ಬಳಸಿ ತಯಾರು ಮಾಡುವ ಕೈಬಳೆ, ಕುಂಬಾರಿಕೆ, ಮೆಹೆಂದಿ ಮುಂತಾದ ವೈಶಿಷ್ಟéಗಳು ಆಹಾರಪ್ರಿಯರನ್ನು ಸೆಳೆಯಲಿವೆ. ಇವೆಲ್ಲದರ ಜೊತೆಗೆ ಥರಹೇವಾರಿ ರಾಜಸ್ಥಾನಿ ಖಾದ್ಯಗಳೂ ಗ್ರಾಹಕರ ಜಿಹ್ವಾಚಪಲವನ್ನು ತಣಿಸಲಿವೆ.
ಆಹಾರಮೇಳದ ಮತ್ತೂಂದು ವಿಶೇಷವೆಂದರೆ ಏಳು ಸುತ್ತಿನ ಭೋಜನ (ಸೆವೆನ್ ಕೋರ್ಸ್ ಮೀಲ್)! ಬೇಸಗೆಯ ಧಗೆ ತಣಿಸುವ ಸಾಂಪ್ರದಾಯಿಕ ರಾಜಸ್ಥಾನಿ ಪಾನೀಯಗಳನ್ನೂ ಇದು ಒಳಗೊಂಡಿರುತ್ತದೆ. ಜೋಧ್‌ಪುರಿ ಕೋಫ್ತಾ, ಬಜ್ರಾ ರೋಟಿ, ಕಟ್ಟಿ ಮೀಟಿ ಕಢಿ, ಸಿಹಿಗಳಾದ ರಾಬ್ದಿ, ಮೂಂಗ್ ದಾಲ್ ಹಲ್ವಾ, ಅಂಗೂರ್‌ದಾನಾ ಮುಂತಾದ ಖಾದ್ಯಗಳು ಕೇಸರಿಯಾ ಮೆನುವಿನಲ್ಲಿ ಸೇರಿದೆ. ಎಲ್ಲಿ?: ಕೇಸರಿಯಾ, ಗೇಟ್ ನಂ.
55, ಗೋಯೆಂಕಾ ಚೆಂಬರ್,
19ನೇ ಮುಖ್ಯರಸ್ತೆ, ಜೆ.ಪಿ.ನಗರ
ಯಾವಾಗ?: ಫೆ. 8- 17