Advertisement

ಕಾಲೇಜುಗಳಲ್ಲಿ ರೇಂಜರ್‌ ರೋವರ್‌ ಘಟಕ ಕಡ್ಡಾಯ

06:00 AM Nov 28, 2018 | |

ಬೆಂಗಳೂರು: ರಾಜ್ಯದ ಪದವಿ ಕಾಲೇಜುಗಳಲ್ಲೂ ಕಡ್ಡಾಯವಾಗಿ “ರೇಂಜರ್‌ ರೋವರ್‌’ ಘಟಕ ಸ್ಥಾಪಿಸುವಂತೆ ಕಾಲೇಜು ಶಿಕ್ಷಣ ಇಲಾಖೆಗೆ ಸೂಚಿಸಿದ್ದರೂ, ಕೆಲವು ಕಾಲೇಜುಗಳು ಇನ್ನೂ ಆರಂಭಿಸಿಲ್ಲ. ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ರೇಂಜರ್‌ ರೋವರ್‌ ಘಟಕವನ್ನು ಎಲ್ಲ ಕಾಲೇಜುಗಳಲ್ಲಿ ಕಡ್ಡಾಯವಾಗಿ ಆರಂಭಿಸಿ, ವರ್ಷಕ್ಕೆ ಕೆಲವು ಕಾರ್ಯಕ್ರಮವನ್ನು ಇದರ ಅಡಿಯಲ್ಲಿ ನಡೆಸುವಂತೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ಸೂಚಿಸಲಾಗಿತ್ತು. ಆದರೂ, ಆರಂಭಿಸದೇ ಇರುವುದು ಇಲಾಖೆಯ ಗಮನಕ್ಕೆ 
ಬಂದಿದ್ದು, ಕ್ರಮಕ್ಕೆ ಮುಂದಾಗಿದೆ.

Advertisement

ಯುವ ಜನರಲ್ಲಿ ಶಿಸ್ತು ಮತ್ತು ಸೇವಾ ಮನೋಭಾವ ಬೆಳೆಸುವ ಉದ್ದೇಶದಿಂದ ರೇಂಜರ್‌ ರೋವರ್‌ ಘಟಕ ಆರಂಭಿಸಬೇಕು. ಇದರ ಅಡಿಯಲ್ಲಿ ವಿವಿಧ ಕಾರ್ಯಕ್ರಮ ನಡೆಸಲು ಸಂಗ್ರಹಿಸುವ ಶುಲ್ಕವನ್ನು ಅದೇ ಉದ್ದೇಶಕ್ಕೆ ಬಳಸಿಕೊಳ್ಳಬೇಕು. ಆದರೆ,
ಕೆಲವು ಕಾಲೇಜುಗಳಲ್ಲಿ ರೇಂಜರ್‌ ರೋವರ್‌ ಕಾರ್ಯಕ್ರಮದ ಉದ್ದೇಶಕ್ಕೆ ಸಂಗ್ರಹಿಸಿದ ಶುಲ್ಕ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಲಾ
ಗುತ್ತಿದೆ. ಈ ರೀತಿಯಲ್ಲಿ ಶುಲ್ಕ ದುರುಪಯೋಗ ಆಗಬಾರದು. ಅದನ್ನು ಪರಿಣಾಮಕಾರಿಯಾಗಿ ಬಳಸಲು ಕಾಲೇಜುಗಳು ಕ್ರಮ
ತೆಗೆದುಕೊಳ್ಳಬೇಕು. ಒಂದೊಮ್ಮೆ ಶುಲ್ಕದ ದುರುಪಯೋಗ ಅಥವಾ ರೇಂಜರ್‌ ರೋವರ್‌ ಘಟಕ ಆರಂಭಿಸದೇ ಇದ್ದರೆ ಕಂಠಿಣ
ಕ್ರಮ ತೆಗೆದುಕೊಳ್ಳುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next