Advertisement
ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆ, ಶ್ರೀ ತಲಕಾವೇರಿ ಮಹಿಳಾ ಶಿಕ್ಷಣ ಟ್ರÓr…, ಅಖೀಲ ಕರ್ನಾಟಕ ಶಿವಶರಣ ಮಾದಾರ ಚನ್ನಯ್ಯ ವಿಚಾರ ವೇದಿಕೆ, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಸ್ಯಾಂಡಲ್‌ವುಡ್ ಸೆಲಬ್ರಿಟೀಸ್ ಮತ್ತು ಭೂಮಿಕಾ ಭಾವೈಕ್ಯ ಬಳಗದ ಸಹಯೋಗದಲ್ಲಿ ಭಾನುವಾರ ಸಂಜೆ ಚಾಮುಂಡಿಪುರಂನ ಆರಾಧ್ಯ ಭವನದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್, ಫಿಲ್ಡ ಮಾರ್ಷಲ್ ಕಾರ್ಯಪ್ಪ ಅವರ ಸ್ಮರಣೆ, ವೇದಿಕೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
Related Articles
Advertisement
ಕಾರ್ಯಪ್ಪ ಅವರು ತಮ್ಮ ಬೆಳವಣಿಗೆಯ ಪ್ರತಿ ಹಂತದಲ್ಲೂ ಸಮಯ ಪ್ರಜ್ಞೆ, ಶಿಸ್ತನ್ನು ಬಿಡಲಿಲ್ಲ. ರಾಜಕಾರಣಿಗಳು ಸೈನ್ಯವನ್ನು ಅಲಕ್ಷ್ಯ ಮಾಡಿದ ಸಂದರ್ಭದಲ್ಲಿ, ಸೈನ್ಯ ಎಂಬುದು ಕೇವಲ ಗಡಿ ವಿಷಯಕ್ಕೆ ಮಾತ್ರ ಸೀಮಿತವಲ್ಲ. ದೇಶದಲ್ಲಿ ಸಂಭವಿಸುವ ದುರಂತ ಮತ್ತು ಅನಾಹುತಗಳಿಗೂ ನೆರವಾಗುವುದು. ಅಹಿಂಸಾ ತತ್ವದಿಂದ ದೇಶ ಮತ್ತು ಜನರನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದವರು ಎಂದು ಕಾರ್ಯಪ್ಪರನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಸೇನಾಪಡೆ ಯೋಧ ನಾಯಕ್ ಅಜ್ಜಮಾಡ ತಿಮ್ಮಯ್ಯ, ನಿವೃತ್ತ ನಾಯಕ್ ಸುಬೇದಾರ್ ಎಚ್.ಎಸ್.ಶಿವಕುಮಾರ್, ಪ್ರಾಧ್ಯಾಪಕ ಶಿವರುದ್ರಯ್ಯ, ಪರಿಸರ ಮತ್ತು ಪ್ರಾಣಿ ತಜ್ಞ ಡಾ.ಜಿ.ಕೆ.ಅಜಯಕುಮಾರ್ ಜೈನ್, ಸಹಾಯಕ ಪ್ರಾಧ್ಯಾಪಕ ಡಾ.ಕೆ.ಎಸ್.ಜಯಕುಮಾರ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಅಪ್ಪನೆರವಂಡ ಡಾ.ಎ.ಸೋನಿಯ ಮಂದಪ್ಪ, ಡಾ.ರತ್ನಮ್ಮ ಅವರಿಗೆ ನಾಗರಿಕ ಸೇವಾ ಚೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದನ್ನೂ ಓದಿ :ಹುಣಸಘಟ್ಟ ಗ್ರಾಪಂನಲ್ಲಿ ಬಿಜೆಪಿ ಅಧಿಕಾರಕ್ಕೆ : ರೇಣು
ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆ ಮತ್ತು ಭೂಮಿಕಾ ಭಾವೈಕ್ಯ ಬಳಗದ ನೂತನ ಪದಾಧಿಕಾರಿ ಗಳ ಅಧಿಕಾರ ಪದಗ್ರಹಣ ನೆರವೇರಿತು. ದೀಪಿಕಾ ಕಿಶೋರ್ ಮತ್ತು ಸಂಜನಾರಾವ್ ಅವರ ತಂಡ ಭರತನಾಟ್ಯ ಹಾಗೂ ರಜನಿಸುಬ್ಬಯ್ಯ ಅವರ ತಂಡ ಕೊಡವ ನೃತ್ಯ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಬಸವಜ್ಞಾನ ಮಂದಿರ ಶ್ರೀ ಡಾ. ಮಾತೆ ಬಸವಾಂಜಲಿ, ರಾಮಕೃಷ್ಣ ಆಶ್ರಮದ ಸ್ವಾಮಿ ಶಾಂತಿವ್ರತಾನಂದಜಿ ಮಹಾರಾಜ್,ನಾಗಭೂಷಣಾರಾಧ್ಯ,ಮೈಸೂರು ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ.ನೀಲಗಿರಿ ತಳವಾರ್, ಡಾ. ಎಸ್.ಈ.ಮಹದೇವಪ್ಪ,ಲಯನ್ ಡಾ.ಎಸ್. ವೆಂಕಟೇಶ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಇದ್ದರು.