Advertisement

ರಂಗಾಯಣದ ಗೌರ್ಮೆಂಟ್‌ ಬ್ರಾಹ್ಮಣ- ಇದಕ್ಕೆ ಕೊನೆ ಎಂದು?

07:00 PM Oct 03, 2019 | mahesh |

ಹಸಿವೆಯನ್ನು ಗೆಲ್ಲುವುದು ಅಸಾಧ್ಯದ ಮಾತು. ಬದುಕಿಗೂ ಸಾವಿಗ ನಡುವೆ ಇರುವುದು ಒಂದು ಬಿಂದು ಹನಿಯ ಅಂತರ ಎಂಬ ಮನಕಲುಕುವ ಮಾತೇ ಸಾಕು ಜೀವಾಳ ತೆರೆದಿಡಲು. ಇಂದು ಪ್ರಕೃತಿ ಮತ್ತು ಸಾಮಾಜಿಕ ವ್ಯವಸ್ಥೆಗೆ ಅತೀ ಬೇಗ ಮತ್ತು ಹೆಚ್ಚು ಬಲಿಪಶುವಾಗುವುದು ರೈತ.

Advertisement

ರಂಗಾಯಣದ ರಂಗತೇರುವಿನ ನಾಟಕಗಳ ಪ್ರದರ್ಶನವನ್ನು ಇತ್ತೀಚೆಗೆ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಕಾಲೇಜಿನ ಕನ್ನಡ ಸಂಘ ಆಯೋಜಿಸಿದ್ದುವು. ರಂಗಭಾಸ್ಕರ – 2019 ಎಂಬ ಈ ನಾಟಕೋತ್ಸವದಲ್ಲಿ ವಿಭಿನ್ನ ಪ್ರಯೋಗಗಳ ಮೂರು ನಾಟಕಗಳನ್ನು ಪ್ರದರ್ಶಿಸಿದರು.

ಗೌರ್ಮೆಂಟ್‌ ಬ್ರಾಹ್ಮಣ- ವರ್ಗ ಅಸಮಾನತೆಯ ಪ್ರತಿಬಿಂಬ ಅರವಿಂದ ಮಾಲಗತ್ತಿಯವರ ಜೀವನ ಕಥೆ ಆಧಾರಿತ, ಡಾ| ಎಂ. ಗಣೇಶ್‌ ನಿರ್ದೇಶಿಸಿದ ಗೌಮೆಂಟ್‌ ಬ್ರಾಹ್ಮಣ ಆರ್ಥಿಕ ಅಸಮಾನತೆ, ಅವಮಾನ, ಶೋಷಣೆ, ಅಮಾನವೀಯತೆ ಇದರ ಬಿಸಿಯಲ್ಲಿ ಬೆಂದು ಆದರ್ಶದ ಬದುಕು ಕಟ್ಟಿಕೊಂಡು ತಮಾಷೆ, ವ್ಯಂಗ್ಯವಾಡುತ್ತಿದ್ದವರೂ ಕೊನೆಗೆ ತನ್ನನ್ನೇ ಅನುಸರಿಸುವಂತೆ ಬೆಳೆಯುವ ಸಾಧನೆ. ಮೇಲ್ವರ್ಗದ ದೇಸಾಯರ ಮನೆಯ ಕೋಣ ದಲಿತರ ಮನೆಯ ಎಮ್ಮೆ ಹಿಂಬಾಲಿಸಿ, ಅದೇ ಮನೆಯ ಕೊಟ್ಟಿಗೆಯಲ್ಲಿ ಠಿಕಾಣಿ ಹೂಡುವ ಮೂಲಕ ಅಸಮಾನತೆಯನ್ನು ಪೋಷಿಸುವ ಮನುಷ್ಯನ ತುಚ್ಛತನವನ್ನು ವಿಡಂಬಿಸುವ, ಜಾತಿಯ ಹಂಗಿಗಿಂತ ಪ್ರೀತಿಯೇ ಮುಖ್ಯ ಎಂಬ ಸಂದೇಶ, ಬಾಲ್ಯದ ನೆನಪನ್ನು ಮರುಕಳಿಸುವಂತೆ ಮಾಡಿದ ಬಾಲಕ ಮಾಲಗತ್ತಿ, ಅಜ್ಜಿಯ ನಡುವಿನ ಬಾಂಧವ್ಯ, ಗೌರ್ಮೆಂಟ್‌ ಬ್ರಾಹ್ಮಣರು ದೈನ್ಯಾವಸ್ಥೆಯಲ್ಲಿ ಮೇಲ್ವರ್ಗದವರ ಸಮಾರಂಭದಲ್ಲಿ ಅವಮಾನದ ನಡುವೆಯೂ ಅನ್ನಕ್ಕೆ ಕಾಯುವ ಮನ ಕಲುಕುವ ದೃಶ್ಯ, ಒಬ್ಬ ದಲಿತನಿಗಲ್ಲದೆ, ಸಾಮಾನ್ಯ ಮನುಷ್ಯನಿಗೂ ಆಗಿರಬಹುದಾದ, ಆಗ ಬಹುದಾದ ಅನುಭವಗಳ ಹೂರಣ, ಕೊನೆಗೆ ಇಂದಲ್ಲ ನಾಳೆ ಎಲ್ಲಾ ಅತಿರೇಖದ ಅವ್ಯವಸ್ಥೆ, ಅಸಮಾನತೆಗಳ ವಿರುದ್ಧ, ಕೆಳವರ್ಗದವರು ಮೆರವಣಿಗೆ ಹೊರಡುತ್ತಾರೆ ಎಂಬುದನ್ನು, ಅವಮಾನ, ಅಸಮಾನತೆಯ ವಿರುದ್ಧ ಮಾನವ ಜನಾಂಗ ಸೆಟೆದು ಸಿಡಿದು ನಿಲ್ಲುತ್ತದೆ ಎಂಬ ದೃಶ್ಯದೊಂದಿಗೆ ನಾಟಕಕ್ಕೆ ತೆರೆ.ಇಡೀ ನಾಟಕದ ಜೀವಾಳವನ್ನೇ ಕೊನೆಯ ದೃಶ್ಯ ಸಮಗ್ರವಾಗಿ ರೂಪಿಸುವಲ್ಲಿ ಯಶಸ್ವಿ. ನಮ್ಮನ್ನು ಕಾಡುವ ಅನೇಕ ವಿಷಯಗಳು ಈ ನಾಟಕದ ‘ಗೌರ್ಮೆಂಟ್‌ ಬ್ರಾಹ್ಮಣ’ ಚಿಂತನೆಗೆ ಹಚ್ಚುವ ನಾಟಕ. ವಿಷಾದದ ನಡುವೆ ವಿನೋದ, ಬಳಸಿಕೊಂಡ ಬೀದಿದೀಪ, ಮರ, ಮದುವೆ ಮನೆಯ ಸೆಟಿಂಗ್‌, ಬೆಳಕಿನಾಟ.

ರೈತ ಹೋರಾಟದ ಮೌನ ನಾಟಕ -ಇದಕ್ಕೆ ಕೊನೆ ಎಂದು?
ಜಾಯ್‌ ಮೈಸ್ನಾಂ ನಿರ್ದೇಶಿಸಿದ,ದೇಬರತಿ ಮಜುಂದಾರ್‌ ಸಂಗೀತ ಸಂಯೋಜಿಸಿದ ಇದಕ್ಕೆ ಕೊನೆ ಎಂದು? ನಾಟಕದಲ್ಲಿ ಹಸಿವೆಯನ್ನು ಗೆಲ್ಲುವುದು ಅಸಾಧ್ಯದ ಮಾತು. ಬದುಕಿಗೂ ಸಾವಿನ ನಡುವೆ ಇರುವುದು ಒಂದು ಬಿಂದು ಹನಿಯ ಅಂತರ ಎಂಬ ಮನಕಲುಕುವ ಮಾತೇ ಸಾಕು ಜೀವಾಳ ತೆರೆದಿಡಲು. ಇಂದು ಪ್ರಕೃತಿ ಮತ್ತು ಸಾಮಾಜಿಕ ವ್ಯವಸ್ಥೆಗೆ ಅತೀ ಬೇಗ ಮತ್ತು ಹೆಚ್ಚು ಬಲಿಪಶುವಾಗುವುದು ರೈತ. ಅದು ಅತಿವೃಷ್ಟಿ ಇರಲಿ, ಅನಾವೃಷ್ಟಿ ಇರಲಿ ಅಥವಾ ಈ ಎರಡರ ನಡುವೆ ಸಮಾಜ (ರಾಜಕೀಯವಾಗಿ?) ನಡೆಸಿಕೊಳ್ಳುವ ರೀತಿ ಇರಲಿ.

ಭೂಮಿ ಪೂಜೆಯೊಂದಿಗೆ ನಾಟಕದ ಆರಂಭ. ಮೂರ್ನಾಲ್ಕು ವರ್ಷಗಳಿಂದ ಬಾರದ ಮಳೆ. ಬಿತ್ತನೆ ಮಾಡಿದ ರೈತನಿಗೆ ಮಳೆಯದೇ ಕನಸು. ಕನಸಾಗಿಯೇ ಉಳಿಯುವ ಬಾರದ ಮಳೆ. ನೀರಿಗಾಗಿ ಕಾಯುತ್ತಾನೆ ರೈತ. ನೂರಾರು ಮೈಲಿ ನಡೆಯುತ್ತಾ, ಕೊನೆಗೂ ಒಂದೆಡೆ ನೀರನ್ನು ಕಂಡು,ಒಂದು ಹನಿ ನೀರಿಗಾಗಿ ಹಾಹಾಕಾರ ಮಾಡುತ್ತಾ ತಮ್ಮ ತಮ್ಮಲ್ಲೆ ಹೊಡೆದಾಡುತ್ತಾರೆ. ಒಂದು ಬಲಿದಾನವೂ ಆಗುತ್ತದೆ. ಮಗುವಿಗೂಡಿಸಲು ತಾಯಿಯ ಎದೆಯಲ್ಲಿ ಹಾಲಿಲ್ಲ, ಭೂಮಿ ತಾಯಿ ಬಿರುಕು ಬಿಟ್ಟಿ¨ªಾಳೆ, ಕುಡಿಯಲು ಹನಿ ನೀರಿಲ್ಲ, ಓ ಭಗವಂತಾ, ನಿನಗಿದೆಲ್ಲಾ ಕಾಣಿಸುವುದಿಲ್ಲವೇ ಎಂದು ರೈತ ಗೋಗರೆವಾಗ ನೋಡುಗನ ಎದೆಯಲ್ಲೂ ಒಮ್ಮೆ ನಡುಕ.

Advertisement

ಕೊನೆಗೂ ಸಾಲಬಾಧೆ, ಬರ ತಂದ ಬವಣೆ, ಹಸಿವು, ರೈತ ಆತ್ಮಹತ್ಯೆಗೆ ಶರಣಾಗುತ್ತಾನೆ.ಆತನ ಪತ್ನಿ ಗೋಗರೆವಾಗ, ಊರು ಗೋಳಿಡುವಾಗ, ಮಣ್ಣಿನ ಮಡಿಕೆಯಲ್ಲಿ ನೀರು ತರುವ ಗರ್ಭಿಣಿ, ಬಿದ್ದು ಒಡೆದ ಮಡಿಕೆ, ನಶ್ವರ ಪ್ರಪಂಚದಲ್ಲಿ ಬರವಿರಲಿ, ಬದುಕಿರಲಿ, ಹುಟ್ಟು, ಸಾವು ಸದಾ ಸಹಜವೆಂಬಂತೆ ಇದೆಲ್ಲಕ್ಕೂ ಕೊನೆ ಎಂದು ಎಂಬ ಪ್ರಶ್ನೆಯೊಂದಿಗೆ ನಾಟಕ ಮುಗಿಯುತ್ತದೆ.

ಸಮಕಾಲೀನ ನಾಟಕದ ಪ್ರತಿ ಪಾತ್ರಧಾರಿಯೂ ತನ್ನೊಳಗಿನ ಶಕ್ತ ಕಲಾವಿದನನ್ನು ಯಶಸ್ವಿಯಾಗಿ ಪ್ರಸ್ತುತ ಪಡಿಸಿದ್ದರೆ, ಮಾತುಗಳೇ ಇಲ್ಲದ ನಾಟಕ ನೀಡುವ ಸಂದೇಶ, ಹೊರಹಾಕುವ ಬವಣೆ,ನೋವು, ಹತಾಶೆ ಎಲ್ಲವನ್ನೂ ಕಲಾವಿದರ ದೇಹ ಭಾಷೆ, ಅಭಿನಯವೇ ಹೇಳಿದ್ದು ವಿಶೇಷ. ಬೆಳಕಿನ ವಿಶೇಷ ವಿನ್ಯಾಸ, ಅನಂತರ ತಾದಾತ್ಮéತೆ , ಸಂಗೀತದಲ್ಲಿಯೂ ಹಾಸು ಹೊಕ್ಕಾಗಿರುವ ಆದ್ರìತೆ ಇಡೀ ನಾಟಕದುದ್ದಕ್ಕೂ ಹಿಡಿದಿಡುತ್ತದೆ.

ಅರೆಹೊಳೆ ಸದಾಶಿವ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next